ಏಷ್ಯಾಕಪ್ಗೆ ಶ್ರೀಲಂಕಾ ತಂಡ ಪ್ರಕಟ: ಪ್ರಮುಖ ಆಟಗಾರರು ಔಟ್
Sri Lanka Asia Cup squad: ಈ ಬಾರಿಯ ಏಷ್ಯಾಕಪ್ ಅನ್ನು ಪಾಕಿಸ್ತಾನ್ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದೆ. ಆದರೆ ಈ ಆಯೋಜನೆಯ ಹಕ್ಕನ್ನು ಹೊಂದಿರುವುದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮಾತ್ರ. ಅಂದರೆ ಈ ಬಾರಿ ಏಷ್ಯಾಕಪ್ ಪಾಕಿಸ್ತಾನದಲ್ಲಿ ಮಾತ್ರ ಆಯೋಜನೆಯಾಗಬೇಕಿತ್ತು.
ಏಷ್ಯಾಕಪ್ಗಾಗಿ (Asia Cup 2023) ಶ್ರೀಲಂಕಾ ತಂಡವನ್ನು (Sri Lanka Squad) ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡದಿಂದ ಪ್ರಮುಖ ಆಟಗಾರರಾದ ವನಿಂದು ಹಸರಂಗ, ದುಷ್ಮಂತ ಚಮೀರಾ, ದಿಲ್ಶನ್ ಮಧುಶಂಕ ಹಾಗೂ ಲಹಿರು ಕುಮಾರ ಹೊರಗುಳಿದಿದ್ದಾರೆ. ಈ ನಾಲ್ವರು ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಆಯ್ಕೆಗೆ ಪರಿಗಣಿಸಲಾಗಿಲ್ಲ.
ಇನ್ನು ಲಂಕಾ ಪಡೆಯನ್ನು ದಸುನ್ ಶಾನಕ ಮುನ್ನಡೆಸಲಿದ್ದು, ಕುಸಾಲ್ ಮೆಂಡಿಸ್ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ತಂಡದಲ್ಲಿ ಸ್ಟಾರ್ ಆಟಗಾರರಾಗಿ ಮಹೇಶ್ ತೀಕ್ಷಣ, ಮಥೀಶ ಪತಿರಾಣ, ಚರಿತ್ ಅಸಲಂಕಾ, ಪಾತುಮ್ ನಿಸ್ಸಂಕಾ ಸ್ಥಾನ ಪಡೆದಿದ್ದಾರೆ.
ಏಷ್ಯಾಕಪ್ ಬುಧವಾರದಿಂದ (ಆಗಸ್ಟ್ 30) ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಸೆಣಸಲಿದೆ. ಇನ್ನು 2ನೇ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಶ್ರೀಲಂಕಾ ಕಣಕ್ಕಿಳಿಯಲಿದೆ. ಹಾಗೆಯೇ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ವಿರುದ್ಧ ಆಡಲಿದೆ.
ಎರಡು ದೇಶಗಳಲ್ಲಿ ಏಷ್ಯಾಕಪ್:
ಈ ಬಾರಿಯ ಏಷ್ಯಾಕಪ್ ಅನ್ನು ಪಾಕಿಸ್ತಾನ್ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದೆ. ಆದರೆ ಈ ಆಯೋಜನೆಯ ಹಕ್ಕನ್ನು ಹೊಂದಿರುವುದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮಾತ್ರ. ಅಂದರೆ ಈ ಬಾರಿ ಏಷ್ಯಾಕಪ್ ಪಾಕಿಸ್ತಾನದಲ್ಲಿ ಮಾತ್ರ ಆಯೋಜನೆಯಾಗಬೇಕಿತ್ತು. ಆದರೆ ಪಾಕ್ನಲ್ಲಿ ಟೂರ್ನಿ ಆಯೋಜನೆಗೊಂಡರೆ ಭಾರತ ಹಿಂದೆ ಸರಿಯುವುದಾಗಿ ತಿಳಿಸಿತ್ತು. ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೈಬ್ರೀಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ.
ಅದರಂತೆ ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯಗಳು ನಡೆದರೆ, ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ಜರುಗಲಿದೆ. ಇಲ್ಲಿ ಭಾರತದ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲೇ ನಡೆಯಲಿದೆ. ಹಾಗೆಯೇ ಸೆಪ್ಟೆಂಬರ್ 17 ರಂದು ಕೊಲಂಬೊನ ಆರ್. ಪ್ರೇಮದಾಸ ಸ್ಟೇಡಿಯಂ ಫೈನಲ್ ಪಂದ್ಯಕ್ಕೆ ಆತಿಥ್ಯವಹಿಸಲಿದೆ. ಏಷ್ಯಾಕಪ್ನ ಸಂಪೂರ್ಣ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
Sri Lanka unveils its powerhouse squad for the Asia Cup 2023! 🇱🇰🏆 #AsiaCup2023 pic.twitter.com/duAXDfQyFQ
— Sri Lanka Cricket 🇱🇰 (@OfficialSLC) August 29, 2023
ಏಷ್ಯಾಕಪ್ಗೆ ಶ್ರೀಲಂಕಾ ತಂಡ: ದಸುನ್ ಶಾನಕ (ನಾಯಕ), ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಪೆರೇರ, ಕುಸಾಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ಮಹೀಶ್ ತೀಕ್ಷಣ, ದುನಿತ್ ವೆಲ್ಲಲಗೆ, ಮಥೀಶ ಪತಿರಾಣ, ಕಸುನ್ ರಜಿತ, ದುಶನ್ ಹೇಮಂತ, ಬಿನೂರ ಫರ್ನಾಂಡೊ, ಪ್ರಮೋದ್ ಮಧುಶನ್.
Published On - 5:50 pm, Tue, 29 August 23