SL vs NZ: ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಕಿವೀಸ್: ಶ್ರೀಲಂಕಾಗೆ ಭರ್ಜರಿ ಜಯ

Sri Lanka vs New Zealand: ಮೊದಲ ಇನಿಂಗ್ಸ್​ನಲ್ಲಿ 35 ರನ್​ಗಳ ಮುನ್ನಡೆ ಹೊಂದಿದ್ದ ನ್ಯೂಝಿಲೆಂಡ್ ತಂಡಕ್ಕೆ ಗೆಲ್ಲಲು ಕೇವಲ 275 ರನ್​ಗಳ ಅವಶ್ಯಕತೆಯಿತ್ತು. ಅತ್ತ ಇನ್ನೆರಡು ದಿನದಾಟಗಳು ಕೂಡ ಬಾಕಿಯಿದ್ದವು. ಹೀಗಾಗಿ ಈ ಪಂದ್ಯವನ್ನು ಕಿವೀಸ್ ಪಡೆ ಗೆಲ್ಲುವುದು ಖಚಿತ ಎಂದೇ ಎಲ್ಲರು ಭಾವಿಸಿದ್ದರು.

SL vs NZ: ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಕಿವೀಸ್: ಶ್ರೀಲಂಕಾಗೆ ಭರ್ಜರಿ ಜಯ
SL vs NZ
Follow us
|

Updated on: Sep 23, 2024 | 10:54 AM

ಗಾಲೆ ಇಂಟರ್​​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಜಯ ಸಾಧಿಸಿದೆ. ರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯವನ್ನು 63 ರನ್​ಗಳ ಅಂತರದಿಂದ ಗೆಲ್ಲುವಲ್ಲಿ ಕೊನೆಗೂ ಆತಿಥೇಯರು ಯಶಸ್ವಿಯಾಗಿದ್ದಾರೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಶ್ರೀಲಂಕಾ ತಂಡದ ನಾಯಕ ಧನಂಜಯ ಡಿಸಿಲ್ವಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಪ್ರಥಮ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಇದಾಗ್ಯೂ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಮಿಂದು ಮೆಂಡಿಸ್ (113) ಶತಕ ಬಾರಿಸುವ ಮೂಲಕ ಲಂಕಾ ತಂಡಕ್ಕೆ ಆಸರೆಯಾದರು. ಆ ಬಳಿಕ ಬಂದ ಕುಸಾಲ್ ಮೆಂಡಿಸ್ (50) ಅರ್ಧಶತಕದ ಕೊಡುಗೆ ನೀಡಿದರು. ಈ ಮೂಲಕ ಶ್ರೀಲಂಕಾ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 305 ರನ್​ಗಳಿಸಿ ಆಲೌಟ್ ಆಗಿತ್ತು.

ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಶುರು ಮಾಡಿದ ನ್ಯೂಝಿಲೆಂಡ್ ತಂಡಕ್ಕೆ ಆರಂಭಿಕ ಆಟಗಾರ ಟಾಮ್ ಲಾಥಮ್ (70) ಉತ್ತಮ ಆರಂಭ ಒದಗಿಸಿದ್ದರು. ಇನ್ನು ನಾಯಕ ಕೇನ್ ವಿಲಿಯಮ್ಸನ್ 55 ರನ್​ಗಳನ್ನು ಬಾರಿಸಿದರೆ, ಡೇರಿಲ್ ಮಿಚೆಲ್ 57 ರನ್​ ಸಿಡಿಸಿದರು. ಹಾಗೆಯೇ ಗ್ಲೆನ್ ಫಿಲಿಪ್ ಬಿರುಸಿನ 49 ರನ್​ಗಳನ್ನು ಕಲೆಹಾಕುವ ಮೂಲಕ ನ್ಯೂಝಿಲೆಂಡ್ ತಂಡವು 340 ರನ್​ಗಳಿಸಿ ಆಲೌಟ್ ಆಯಿತು.

ಪ್ರಥಮ ಇನಿಂಗ್ಸ್​ನಲ್ಲಿನ 35 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಶ್ರೀಲಂಕಾ ದಿಮುತ್ ಕರುಣರತ್ನೆ 83  ರನ್ ಬಾರಿಸಿದರು. ಇನ್ನು ದಿನೇಶ್ ಚಂಡಿಮಲ್ (63) ಹಾಗೂ ಏಜೆಂಲೊ ಮ್ಯಾಥ್ಯೂಸ್ (50) ಅರ್ಧಶತಕಗಳ ಕೊಡುಗೆ ನೀಡಿದರು. ಇದಾಗ್ಯೂ ಕೆಲ ಕ್ರಮಾಂಕದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಲಂಕಾ ಪಡೆ 309 ರನ್​ಗಳಿಗೆ ಆಲೌಟ್ ಆದರು.

275 ರನ್​ಗಳ ಗುರಿ:

ಮೊದಲ ಇನಿಂಗ್ಸ್​ನಲ್ಲಿ 35 ರನ್​ಗಳ ಮುನ್ನಡೆ ಹೊಂದಿದ್ದ ನ್ಯೂಝಿಲೆಂಡ್ ತಂಡಕ್ಕೆ ಗೆಲ್ಲಲು ಕೇವಲ 275 ರನ್​ಗಳ ಅವಶ್ಯಕತೆಯಿತ್ತು. ಅತ್ತ ಇನ್ನೆರಡು ದಿನದಾಟಗಳು ಕೂಡ ಬಾಕಿಯಿದ್ದವು. ಹೀಗಾಗಿ ಈ ಪಂದ್ಯವನ್ನು ಕಿವೀಸ್ ಪಡೆ ಗೆಲ್ಲುವುದು ಖಚಿತ ಎಂದೇ ಎಲ್ಲರು ಭಾವಿಸಿದ್ದರು. ಆದರೆ ನ್ಯೂಝಿಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾದ ಶ್ರೀಲಂಕಾ ಬೌಲರ್​ಗಳು 96 ರನ್​ಗಳಿಗೆ 4 ವಿಕೆಟ್ ಕಬಳಿಸಿದರು.

ಇದಾಗ್ಯೂ ಎಡಗೈ ದಾಂಡಿಗ ರಚಿನ್ ರವೀಂದ್ರ ಏಕಾಂಗಿ ಹೋರಾಟವನ್ನು ಮುಂದುವರೆಸಿದ್ದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ರಚಿನ್ 4ನೇ ದಿನದಾಟದ ವೇಳೆ ತಂಡದ ಮೊತ್ತವನ್ನು 200ರ ಗಡಿದಾಟಿಸಿದ್ದರು.

ಆದರೆ ಅದಾಗಲೇ 8 ವಿಕೆಟ್ ಕಳೆದುಕೊಂಡಿದ್ದ ನ್ಯೂಝಿಲೆಂಡ್ ತಂಡವು ಕೊನೆಯ ದಿನದಾಟದಲ್ಲಿ 68 ರನ್​ ಕಲೆಹಾಕಬೇಕಿತ್ತು. ಇತ್ತ ರಚಿನ್ ರವೀಂದ್ರ ಕ್ರೀಸ್​ನಲ್ಲಿದ್ದ ಕಾರಣ ಕಿವೀಸ್ ಪಡೆಯು ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ಐದನೇ ದಿನದಾಟದ ಎರಡನೇ ಓವರ್​ನಲ್ಲೇ ರಚಿನ್ ರವೀಂದ್ರ (92) ರನ್ನು ಎಲ್​ಬಿ ಬಲೆಗೆ ಬೀಳಿಸುವಲ್ಲಿ ಪ್ರಭಾತ್ ಜಯಸೂರ್ಯ ಯಶಸ್ವಿಯಾದರು. ಇದರ ಬೆನ್ನಲ್ಲೇ ವಿಲಿಯಂ ಒರೂರ್ಕೆ (0) ವಿಕೆಟ್ ಕಬಳಿಸಿದರು.

ಈ ಮೂಲಕ ನ್ಯೂಝಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಶ್ರೀಲಂಕಾ ತಂಡವು 63 ರನ್​ಗಳಿಂದ ಗೆದ್ದುಕೊಂಡಿದೆ. ಇದೀಗ 1-0 ಅಂತರದಿಂದ ಮುನ್ನಡೆ ಹೊಂದಿರುವ ಲಂಕಾ ಪಡೆಯು ಸೆಪ್ಟೆಂಬರ್ 26 ರಿಂದ ಶುರುವಾಗಲಿರುವ 2ನೇ ಟೆಸ್ಟ್ ಪಂದ್ಯದ ಮೂಲಕ ಸರಣಿ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಶ್ರೀಲಂಕಾ ಪ್ಲೇಯಿಂಗ್ 11: ದಿಮುತ್ ಕರುಣರತ್ನೆ , ಪಾತುಮ್ ನಿಸ್ಸಾಂಕ , ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್) , ದಿನೇಶ್ ಚಂಡಿಮಲ್ , ಏಂಜೆಲೊ ಮ್ಯಾಥ್ಯೂಸ್ , ಧನಂಜಯ ಡಿ ಸಿಲ್ವಾ (ನಾಯಕ) , ಕಮಿಂದು ಮೆಂಡಿಸ್ , ರಮೇಶ್ ಮೆಂಡಿಸ್ , ಪ್ರಭಾತ್ ಜಯಸೂರ್ಯ , ಲಹಿರು ಕುಮಾರ , ಅಸಿತ ಫರ್ನಾಂಡೋ.

ಇದನ್ನೂ ಓದಿ: IPL 2025: CSK ತಂಡ ಉಳಿಸಿಕೊಳ್ಳುವ ಐವರು ಆಟಗಾರರು ಇವರಂತೆ..!

ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ , ಡೆವೊನ್ ಕಾನ್ವೇ , ಕೇನ್ ವಿಲಿಯಮ್ಸನ್ , ರಚಿನ್ ರವೀಂದ್ರ , ಡೇರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ಮಿಚೆಲ್ ಸ್ಯಾಂಟ್ನರ್ , ಟಿಮ್ ಸೌಥಿ (ನಾಯಕ) , ಅಜಾಝ್ ಪಟೇಲ್ , ವಿಲಿಯಂ ಒರೂರ್ಕೆ.

ಅಜ್ಜಿ ಜೊತೆ ದಸರಾ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿದ ಆದ್ಯವೀರ ಒಡೆಯರ್‌
ಅಜ್ಜಿ ಜೊತೆ ದಸರಾ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿದ ಆದ್ಯವೀರ ಒಡೆಯರ್‌
ನ್ಯೂಯಾರ್ಕ್​ನಲ್ಲಿ ಟೆಕ್ ಕಂಪನಿಗಳ ಸಿಇಒಗಳ ಜತೆ ಪ್ರಧಾನಿ ಮೋದಿ ಸಭೆ
ನ್ಯೂಯಾರ್ಕ್​ನಲ್ಲಿ ಟೆಕ್ ಕಂಪನಿಗಳ ಸಿಇಒಗಳ ಜತೆ ಪ್ರಧಾನಿ ಮೋದಿ ಸಭೆ
ಮಂತ್ರಾಲಯದಲ್ಲಿ ಪರಿಮಳ ಪ್ರಸಾದ ತಯಾರಿ ಪ್ರಕ್ರಿಯೆ ಹೇಗಿದೆ ಗೊತ್ತಾ?
ಮಂತ್ರಾಲಯದಲ್ಲಿ ಪರಿಮಳ ಪ್ರಸಾದ ತಯಾರಿ ಪ್ರಕ್ರಿಯೆ ಹೇಗಿದೆ ಗೊತ್ತಾ?
ವಿಶ್ವವಿಖ್ಯಾತ ಮೈಸೂರು ದಸರಾ ಕುರಿತು ಜಿಲ್ಲಾಡಳಿತದಿಂದ ವಿಶೇಷ ವಿಡಿಯೋ
ವಿಶ್ವವಿಖ್ಯಾತ ಮೈಸೂರು ದಸರಾ ಕುರಿತು ಜಿಲ್ಲಾಡಳಿತದಿಂದ ವಿಶೇಷ ವಿಡಿಯೋ
ಹೇಗಿತ್ತು ನೋಡಿ ಹರ್ಷಿಕಾ ಪೂಣಚ್ಚ ಬೇಬಿ ಶವರ್; ಯಾರೆಲ್ಲಾ ಬಂದಿದ್ರು?
ಹೇಗಿತ್ತು ನೋಡಿ ಹರ್ಷಿಕಾ ಪೂಣಚ್ಚ ಬೇಬಿ ಶವರ್; ಯಾರೆಲ್ಲಾ ಬಂದಿದ್ರು?
Daily Devotional: ಲಲಿತಾ ಸಹಸ್ರನಾಮದ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಲಲಿತಾ ಸಹಸ್ರನಾಮದ ಮಹತ್ವ ಹಾಗೂ ಫಲ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ 4ನೇ ಸೋಮವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ 4ನೇ ಸೋಮವಾರದ ದಿನ ಭವಿಷ್ಯ ತಿಳಿಯಿರಿ
PM Modi in US: ಭಾರತದ 5G ಮಾರುಕಟ್ಟೆ ಅಮೆರಿಕಕ್ಕಿಂತ ದೊಡ್ಡದು ಎಂದ ಮೋದಿ
PM Modi in US: ಭಾರತದ 5G ಮಾರುಕಟ್ಟೆ ಅಮೆರಿಕಕ್ಕಿಂತ ದೊಡ್ಡದು ಎಂದ ಮೋದಿ
‘ಅನ್ನ’ ಸಿನಿಮಾ ವೀಕ್ಷಿಸಿ ಭಾವುಕರಾದ ಸಿದ್ದರಾಮಯ್ಯ; ಕಾಡಿತು ಬಾಲ್ಯದ ನೆನಪು
‘ಅನ್ನ’ ಸಿನಿಮಾ ವೀಕ್ಷಿಸಿ ಭಾವುಕರಾದ ಸಿದ್ದರಾಮಯ್ಯ; ಕಾಡಿತು ಬಾಲ್ಯದ ನೆನಪು
ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್
ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್