IND W vs SL W: ಭಾರತದ ಕ್ಲೀನ್​ ಸ್ವೀಪ್ ಕನಸಿಗೆ ಕನಸಿಗೆ ತಣ್ಣೀರೆರೆಚಿದ ಲಂಕಾ ಕ್ಯಾಪ್ಟನ್; ಸರಣಿ ಗೆದ್ದ ಭಾರತ

| Updated By: ಪೃಥ್ವಿಶಂಕರ

Updated on: Jun 27, 2022 | 6:03 PM

IND W vs SL W: ಶ್ರೀಲಂಕಾ ಪರ ಚಾಮರಿ ಅಟಪಟ್ಟು 48 ಎಸೆತಗಳಲ್ಲಿ ಅಜೇಯ 80 ರನ್ ಗಳಿಸಿದರು. ಅಟಪಟ್ಟು ಅವರ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿತ್ತು.

IND W vs SL W: ಭಾರತದ ಕ್ಲೀನ್​ ಸ್ವೀಪ್ ಕನಸಿಗೆ ಕನಸಿಗೆ ತಣ್ಣೀರೆರೆಚಿದ ಲಂಕಾ ಕ್ಯಾಪ್ಟನ್; ಸರಣಿ ಗೆದ್ದ ಭಾರತ
IND W vs SL W
Follow us on

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡುವ ಟೀಂ ಇಂಡಿಯಾ ಕನಸಿಗೆ ವಿಘ್ನ ಎದುರಾಗಿದೆ. ದಂಬುಲ್ಲಾದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ (Sri Lanka Women vs India Women, 3rd T20I) ಲಂಕಾ ವಿರುದ್ಧ 7 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 138 ರನ್ ಗಳಿಸಿತು. ಉತ್ತರವಾಗಿ ಶ್ರೀಲಂಕಾ 17 ಓವರ್‌ಗಳಲ್ಲಿ ಈ ಗುರಿ ಸಾಧಿಸಿತು. ಶ್ರೀಲಂಕಾ ಪರ ಚಾಮರಿ ಅಟಪಟ್ಟು 48 ಎಸೆತಗಳಲ್ಲಿ ಅಜೇಯ 80 ರನ್ ಗಳಿಸಿದರು. ಅಟಪಟ್ಟು ಅವರ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿತ್ತು. ನೀಲಕಾಶಿ 30 ರನ್‌ಗಳ ಇನಿಂಗ್ಸ್‌ ಆಡಿದರು. ಭಾರತದ ಪರ ರಾಧಾ ಯಾದವ್ ಮತ್ತು ರೇಣುಕಾ ಸಿಂಗ್ (Radha Yadav and Renuka Singh) ಮಾತ್ರ ತಲಾ ಒಂದು ವಿಕೆಟ್ ಪಡೆದರು.

ಇನ್ನು ಬ್ಯಾಟಿಂಗ್ ಬಗ್ಗೆ ಮಾತನಾಡುವುದಾದರೆ, ಭಾರತದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅಜೇಯ 39 ರನ್ ಗಳಿಸಿದರು. ಜೆಮಿಮಾ ರಾಡ್ರಿಗಸ್ 33 ರನ್ ಗಳಿಸಿದರು. ಮೇಘನಾ 22 ರನ್‌ಗಳ ಇನಿಂಗ್ಸ್‌ ಆಡಿದರು. ಪೂಜಾ ವಸ್ತ್ರಾಕರ್ ಅಜೇಯ 13 ರನ್ ಗಳಿಸಿದರು. ಇವರ ಆಟ ಕಂಡ ಅಭಿಮಾನಿಗಳು ಭಾರತ ತಂಡವು ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಕೊನೆಯ ಪಂದ್ಯದಲ್ಲಿ ಅದು ವಿಫಲವಾಯಿತು.

ಸೋಲಿನ ಕಾರಣ ವಿವರಿಸಿದ ಹರ್ಮನ್‌ಪ್ರೀತ್

ಇದನ್ನೂ ಓದಿ
IND vs IRE 2nd T20 Match Live Streaming: ಸರಣಿ ಗೆಲ್ಲುವ ತವಕದಲ್ಲಿ ಭಾರತ; ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ
IND vs IRE: ರುತುರಾಜ್ ಬದಲು ಹೂಡಾ ಓಪನಿಂಗ್ ಬಂದಿದ್ಯಾಕೆ? ಹಾರ್ದಿಕ್ ನೀಡಿದ ಕಾರಣವೇನು ಗೊತ್ತಾ?
Virat Kohli: ಸಹ ಆಟಗಾರನನ್ನು ನಿಂಧಿಸಿದ ಭಾರತದ ಅಭಿಮಾನಿಗಳ ಬೆವರಿಳಿಸಿದ ಕಿಂಗ್ ಕೊಹ್ಲಿ; ವಿಡಿಯೋ ನೋಡಿ

ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಶ್ರೀಲಂಕಾದ ಅತ್ಯುತ್ತಮ ಆಟ ತಂಡದ ಸೋಲಿಗೆ ಕಾರಣ ಎಂದಿದ್ದಾರೆ. ಅಲ್ಲದೆ ಟೀಂ ಇಂಡಿಯಾ ಸ್ಕೋರ್ ಬೋರ್ಡ್​ನಲ್ಲಿ ಹೆಚ್ಚು ರನ್ ಗಳಿಸಿಲ್ಲ ಎಂದು ಹೇಳಿದ್ದಾರೆ. ಹರ್ಮನ್‌ಪ್ರೀತ್ ಕೌರ್, ‘ಶ್ರೀಲಂಕಾ ಈ ಗೆಲುವಿಗೆ ಅರ್ಹವಾಗಿದೆ ಎಂದು ನಾನು ಭಾವಿಸುತ್ತೇನೆ. ಶ್ರೀಲಂಕಾ ಅದ್ಭುತವಾಗಿ ಬ್ಯಾಟಿಂಗ್ ಮಾಡಿತು. ಪವರ್‌ಪ್ಲೇ ನಂತರವೂ ಎದುರಾಳಿ ಬ್ಯಾಟರ್​ಗಳು ನಮ್ಮ ಬೌಲರ್‌ಗಳ ಮೇಲೆ ಒತ್ತಡ ಹೇರಿದರು. ಅಲ್ಲದೆ ನಮ್ಮ ಸ್ಕೋರ್ ಸ್ಪರ್ಧಾತ್ಮಕವಾಗಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ನಮ್ಮ ಸ್ಟ್ರೈಕ್ ದರದಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಇದನ್ನೂ ಓದಿ: IND vs IRE 2nd T20 Match Live Streaming: ಸರಣಿ ಗೆಲ್ಲುವ ತವಕದಲ್ಲಿ ಭಾರತ; ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ

T20 ಸರಣಿಯಲ್ಲಿ ಚಾಮರಿ ಅಟಪಟ್ಟು ಅವರ ಸಾಧನೆ

ಶ್ರೀಲಂಕಾದ ನಾಯಕಿ ಚಾಮರಿ ಅಟಪಟ್ಟು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಅವರು ಒಟ್ಟಾರೆ T20 ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದರು. ಅಟಪಟ್ಟು ಅವರ ಬ್ಯಾಟ್ 3 ಪಂದ್ಯಗಳಲ್ಲಿ 69.50 ಸರಾಸರಿಯಲ್ಲಿ 139 ರನ್ ಗಳಿಸಿತು. ಅದೇ ಸಮಯದಲ್ಲಿ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

Published On - 5:48 pm, Mon, 27 June 22