ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನ 30 ನೇ ಪಂದ್ಯದಲ್ಲಿ, ಸಿಡ್ನಿ ಸಿಕ್ಸರ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಕಣಕ್ಕಿಳಿದಿದ್ದ ಸ್ಟೀವ್ ಸ್ಮಿತ್ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಇತ್ತೀಚೆಗೆ ನಡೆದಿದ್ದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಮಿಶ್ರ ಪ್ರದರ್ಶನ ನೀಡಿದ್ದ ಸ್ಟೀವ್ ಸ್ಮಿತ್, ಇದೀಗ ಬಿಗ್ ಬ್ಯಾಷ್ ಲೀಗ್‌ನಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪರ್ತ್ ಸ್ಕಾರ್ಚರ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಸ್ಮಿತ್ ಶತಕದ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯನ್ನು ಮಾಡಿದರು. ವಿಶೇಷವೆಂದರೆ ಈ ಪಂದ್ಯದಲ್ಲಿ ಓಪನಿಂಗ್ ಮಾಡಲು ಬಂದ ಅವರು ಅಜೇಯರಾಗಿ ಪೆವಿಲಿಯನ್ಗೆ ಮರಳಿದರು.
ಪರ್ತ್ ವಿರುದ್ಧದ ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 7 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ 121 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ಕೇವಲ 58 ಎಸೆತಗಳಲ್ಲಿ ಸ್ಟೀವ್ ಸ್ಮಿತ್ ತಮ್ಮ ಶತಕವನ್ನು ಪೂರೈಸಿದರು. ಇದು ಅವರ ಟಿ20 ವೃತ್ತಿಜೀವನದ ನಾಲ್ಕನೇ ಶತಕವಾಗಿದ್ದರೆ, ಬಿಗ್ ಬ್ಯಾಷ್ ಲೀಗ್‌ನಲ್ಲಿ ಇದು ಅವರ ಮೂರನೇ ಶತಕವಾಗಿದೆ.
ಸ್ಟೀವ್ ಸ್ಮಿತ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಇದುವರೆಗೆ ಕೇವಲ 32 ಪಂದ್ಯಗಳನ್ನು ಆಡಿದ್ದು, ಅತಿ ಹೆಚ್ಚು ಶತಕಗಳನ್ನು ಬಾರಿಸಿದ ದಾಖಲೆಯನ್ನು ಸರಿಗಟ್ಟಿದ್ದಾರೆ. ಇವರ ಹೊರತಾಗಿ ಬೆನ್ ಮೆಕ್‌ಡರ್ಮಾಟ್ ಮಾತ್ರ ಈ ಲೀಗ್‌ನಲ್ಲಿ 3 ಶತಕ ಸಿಡಿಸಿದ್ದಾರೆ. ಆದರೆ ಬೆನ್ ಮೆಕ್‌ಡರ್ಮೊಟ್ ಅವರ ಬಿಗ್ ಬ್ಯಾಷ್ ಲೀಗ್ ವೃತ್ತಿಜೀವನವು 100 ಪಂದ್ಯಗಳನ್ನು ಹೊಂದಿದೆ. ಅಂದರೆ ಸ್ಟೀವ್ ಸ್ಮಿತ್ ಬೆನ್ ಮೆಕ್‌ಡರ್ಮಾಟ್‌ಗಿಂತ ಕಡಿಮೆ ಪಂದ್ಯಗಳನ್ನು ಆಡಿದ್ದಾರೆ. ಇದಲ್ಲದೇ ಸಿಡ್ನಿ ಸಿಕ್ಸರ್ಸ್ ತಂಡದ ಪರ ಶತಕ ಸಿಡಿಸಿದ ಏಕೈಕ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್.
100 FOR STEVE SMITH!
That's his third BBL hundred, and he's done this one off just 58 balls 👏 #BBL14 pic.twitter.com/K6iqJ7HmYN
— KFC Big Bash League (@BBL) January 11, 2025
ಬಿಗ್ ಬ್ಯಾಷ್ ಲೀಗ್‌ನಲ್ಲಿ ಸ್ಟೀವ್ ಸ್ಮಿತ್ ಅವರ ಪ್ರದರ್ಶನ ಅಮೋಘವಾಗಿದೆ. ಈ ಲೀಗ್‌ನ ಕೊನೆಯ 7 ಇನ್ನಿಂಗ್ಸ್‌ಗಳಲ್ಲಿ ಅವರು 3 ಶತಕ ಮತ್ತು 2 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದಲ್ಲದೇ ಕಳೆದ 8 ಇನ್ನಿಂಗ್ಸ್‌ಗಳಲ್ಲಿ 88ರ ಸರಾಸರಿಯಲ್ಲಿ ಮತ್ತು 173.11 ರ ಸ್ಟ್ರೈಕ್ ರೇಟ್ನಲ್ಲಿ 528 ರನ್ ಗಳಿಸಿದ್ದಾರೆ.
ಇನ್ನು ಈ ಪಂದ್ಯದ ಬಗ್ಗೆ ಹೇಳುವುದಾದರೆ.. ಮೊದಲು ಬ್ಯಾಟಿಂಗ್ ಮಾಡಿದ ಸಿಡ್ನಿ ತಂಡವು ಪರ್ತ್ ವಿರುದ್ಧ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 222 ರನ್‌ಗಳ ದೊಡ್ಡ ಸ್ಕೋರ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪರ್ತ್ ಸ್ಕಾರ್ಚರ್ಸ್ ತಂಡ ಕೂಡ ಗೆಲುವಿಗಾಗಿ ಹೋರಾಟ ನೀಡಿತ್ತಾದರೂ ಕೇವಲ 14 ರನ್ಗಳಿಂದ ಸೊಲೊಪ್ಪಿಕೊಳ್ಳಬೇಕಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ