ಐಪಿಎಲ್ 2025 ರೊಂದಿಗೆ ಆರ್ಸಿಬಿ ಹೊಸ ಯುಗವನ್ನು ಪ್ರಾರಂಭಿಸಲಿದೆ. ಮುಂದಿನ ಮೂರು ವರ್ಷಗಳ ಪ್ರಯಾಣವು ಇದರೊಂದಿಗೆ ಆರಂಭವಾಗಲಿದ್ದು, ತಂಡದ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಹೀಗಾಗಿ ದೀರ್ಘಕಾಲದವರೆಗೆ ತಂಡವನ್ನು ಮುನ್ನಡೆಸಬಲ್ಲ ಆಟಗಾರನಿಗೆ ತಂಡದ ನಾಯಕತ್ವವನ್ನು ನೀಡಲಿದ್ದೇವೆ ಎಂದು ಆ್ಯಂಡಿ ಫ್ಲವರ್ ತಿಳಿಸಿದ್ದಾರೆ.