ಒಂದು ಕಾಲದಲ್ಲಿ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಬಲವಾದ ಕೊಂಡಿ ಎಂದು ಪರಿಗಣಿಸಲ್ಪಟ್ಟಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ಕಳೆದ ಎರಡು ವರ್ಷಗಳಿಂದ ಅತ್ಯಂತ ಕಳಪೆ ಫಾರ್ಮ್‌ನಲ್ಲಿರುವ ಪೂಜಾರ ಮತ್ತು ರಹಾನೆ ಅವರ ಫ್ಲಾಪ್ ಶೋ ದಕ್ಷಿಣ ಆಫ್ರಿಕಾದಲ್ಲೂ ಮುಂದುವರೆದಿದೆ. ನ್ಯೂಜಿಲೆಂಡ್ ಸರಣಿಯಲ್ಲಿನ ಕಳಪೆ ಪ್ರದರ್ಶನದ ಹೊರತಾಗಿಯೂ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮೊದಲ ಟೆಸ್ಟ್‌ನಲ್ಲಿ ಸೆಂಚುರಿಯನ್ ಟೆಸ್ಟ್‌ನಲ್ಲಿ ಇಬ್ಬರಿಗೂ ಅವಕಾಶ ನೀಡಿದರು. ಇದಾಗ್ಯೂ ಪೂಜಾರ-ರಹಾನೆ ವಿಫಲರಾದರು. ಇದರ ಹೊರತಾಗಿಯೂ, ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ಇಬ್ಬರಿಗೂ ಅವಕಾಶ ನೀಡಲಾಯಿತು. ಆದರೆ ಮೊದಲ ಇನಿಂಗ್ಸ್ನಲ್ಲಿ ಇಬ್ಬರ ಫ್ಲಾಪ್ ಶೋ ಮುಂದುವರೆಯಿತು.
ಜೋಹಾನ್ಸ್‌ಬರ್ಗ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಪೂಜಾರ 3 ರನ್‌ಗಳಿಗೆ ಔಟಾದರೆ, ಅಜಿಂಕ್ಯ ರಹಾನೆ (0) ಮೊದಲ ಎಸೆತದಲ್ಲೇ ಪೆವಿಲಿಯನ್‌ಗೆ ಮರಳಿದರು. ಇದೀಗ ರಹಾನೆ-ಪೂಜಾರ ಮೂರನೇ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಅತ್ತ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದ ವೇಳೆ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಟೀಮ್ ಇಂಡಿಯಾ ಇನ್ನಾದರೂ ಇನ್ ಫಾರ್ಮ್ ಬ್ಯಾಟರ್ಗಳಿಗೆ ಅವಕಾಶ ನೀಡುವ ಸಮಯ ಬಂದಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಕಾಮೆಂಟರಿ ವೇಳೆ ಸುನಿಲ್ ಗವಾಸ್ಕರ್, ಬಹುಶಃ ಪೂಜಾರ-ರಹಾನೆಗೆ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಉಳಿಸಲು ಮುಂದಿನ ಇನ್ನಿಂಗ್ಸ್ ಕೊನೆಯ ಅವಕಾಶ ಎಂದರು. ಇಬ್ಬರ ಟೆಸ್ಟ್ ತಂಡದಲ್ಲಿ ಈಗಾಗಲೇ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿದ್ದಾರೆ. ಈಗ ಈ ಫ್ಲಾಪ್ ಶೋ ನಂತರ, ಅವರಿಗೆ ಕೊನೆಯ ಅವಕಾಶ ಮಾತ್ರ ಉಳಿದಿದೆ ಎಂದು ಭಾವಿಸುತ್ತೇನೆ ಎಂದು ಸುನಿಲ್ ಗವಾಸ್ಕರ್ ತಿಳಿಸಿದರು.
ರಹಾನೆ ಫ್ಲಾಪ್ ಶೋ:
ಅಜಿಂಕ್ಯ ರಹಾನೆ ಅವರ 2020-21ರ ಅಂಕಿಅಂಶಗಳು ತುಂಬಾ ಕಳಪೆಯಾಗಿದೆ. 2020-21ರಲ್ಲಿ ರಹಾನೆ 8 ಟೆಸ್ಟ್‌ಗಳಲ್ಲಿ 29.23ರ ಸರಾಸರಿಯಲ್ಲಿ 380 ರನ್ ಗಳಿಸಿದ್ದರು. 2021 ರಲ್ಲಿ, ರಹಾನೆ 5 ಟೆಸ್ಟ್‌ಗಳಲ್ಲಿ ಕೇವಲ 19.22 ರ ಸರಾಸರಿಯಲ್ಲಿ 173 ರನ್ ಮಾತ್ರ ಗಳಿಸಿದ್ದಾರೆ. ಇದೀಗ ಪ್ರಸಕ್ತ ಋತುವಿನಲ್ಲಿ ರಹಾನೆ 21.40ರ ಸರಾಸರಿಯಲ್ಲಿ 107 ರನ್ ಗಳಿಸಿದ್ದಾರೆ.
ಇನ್ನು ಪೂಜಾರ ಕೂಡ ಕಳೆದ 2 ವರ್ಷಗಳಿಂದ ಶತಕ ಬಾರಿಸಿಲ್ಲ. 2020-21ರ ಸೀಸನ್ನಲ್ಲಿ ಪೂಜಾರ ಅವರ ಬ್ಯಾಟಿಂಗ್ ಸರಾಸರಿ 28.85 ಆಗಿತ್ತು. 2021 ರಲ್ಲಿ, ಪೂಜಾರ ಬ್ಯಾಟಿಂಗ್ 27.77 ರ ಸರಾಸರಿಗೆ ಇಳಿದಿದೆ. ಹಾಗೆಯೇ ಕಳೆದ 4 ಟೆಸ್ಟ್‌ಗಳ 7 ಇನ್ನಿಂಗ್ಸ್‌ಗಳಲ್ಲಿ ಕೇವಲ 16.28 ಸರಾಸರಿಯನ್ನು ಬ್ಯಾಟ್ ಮಾಡಿದ್ದಾರೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ರಹಾನೆ-ಪೂಜಾರ ತಂಡದಲ್ಲಿ ಉಳಿಯುವುದು ಅನುಮಾನ ಎನ್ನಬಹುದು. ಏಕೆಂದರೆ ತಂಡದಲ್ಲಿ ಶ್ರೇಯಸ್ ಅಯ್ಯರ್, ಹನುಮ ವಿಹಾರಿ ಮತ್ತು ಪ್ರಿಯಾಂಕ್ ಪಾಂಚಾಲ್ ಅವರಂತಹ ಆಟಗಾರರಿದ್ದು, ಈ ಆಟಗಾರರು ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ 3ನೇ ಟೆಸ್ಟ್ ಪಂದ್ಯದಿಂದ ಚೇತೇಶ್ವರ ಪೂಜಾರ ಅಥವಾ ಅಜಿಂಕ್ಯ ರಹಾನೆ, ಇಬ್ಬರಲ್ಲಿ ಒಬ್ಬರು ತಂಡದಿಂದ ಹೊರುಗಳಿಯುವ ಸಾಧ್ಯತೆಯಿದೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್..!
ಇದನ್ನೂ ಓದಿ: Ravindra Jadeja: ಸ್ಟಾರ್ ಆಲ್ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!
ಇದನ್ನೂ ಓದಿ: Rohit Sharma: ಫಿಟ್ನೆಸ್ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?
ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
(Sunil Gavaskar Makes Big Statement After Another Cheteshwar Pujara-Ajinkya Rahane Flop Show)