AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy: ದೇಶಿ ಕ್ರಿಕೆಟಿಗರಿಗೆ ಹೊಸ ವರ್ಷದ ಉಡುಗೊರೆ; ರದ್ದಾದ ರಣಜಿ ಟ್ರೋಫಿಗೆ ಪರಿಹಾರ ಪಾವತಿಸಿದ ಬಿಸಿಸಿಐ

Ranji Trophy: ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅಧ್ಯಕ್ಷತೆಯಲ್ಲಿ ಬಿಸಿಸಿಐ ಸಮಿತಿಯೊಂದನ್ನು ರಚಿಸಿದ್ದು, ಪಾವತಿ ಸೂತ್ರವನ್ನು ಸೂಚಿಸಿದೆ. ಈ ಸೂತ್ರವನ್ನು ಅಳವಡಿಸುವ ಮೂಲಕ ಮಂಡಳಿಯು ಈಗ ಆಟಗಾರರಿಗೆ ಹಣ ನೀಡಿದೆ.

Ranji Trophy: ದೇಶಿ ಕ್ರಿಕೆಟಿಗರಿಗೆ ಹೊಸ ವರ್ಷದ ಉಡುಗೊರೆ; ರದ್ದಾದ ರಣಜಿ ಟ್ರೋಫಿಗೆ ಪರಿಹಾರ ಪಾವತಿಸಿದ ಬಿಸಿಸಿಐ
ಬಿಸಿಸಿಐ
TV9 Web
| Updated By: ಪೃಥ್ವಿಶಂಕರ|

Updated on: Jan 03, 2022 | 5:55 PM

Share

ಪ್ರಸ್ತುತ ಭಾರತದ ದೇಶೀಯ ಕ್ರಿಕೆಟ್ ಸೀಸನ್ ನಡೆಯುತ್ತಿದೆ. ಮಹಿಳಾ ಸೀನಿಯರ್ ಏಕದಿನ ಪಂದ್ಯಾವಳಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಂತಹ ಪಂದ್ಯಾವಳಿಗಳು ನಡೆದಿದ್ದು, ಇದೀಗ ಕೆಲವೇ ದಿನಗಳಲ್ಲಿ ದೇಶದ ಪ್ರಮುಖ ಪಂದ್ಯಾವಳಿ ರಣಜಿ ಟ್ರೋಫಿ ಪ್ರಾರಂಭವಾಗಲಿದೆ. ಕೊರೊನಾವೈರಸ್‌ನಿಂದಾಗಿ ಪಂದ್ಯಾವಳಿಯ ಹಿಂದಿನ ಋತುವಿನಲ್ಲಿ ಆಡಲು ಸಾಧ್ಯವಾಗಲಿಲ್ಲ, ಆದರೆ ಈಗ ದೇಶೀಯ ಆಟಗಾರರು ಮತ್ತೆ ಮೈದಾನಕ್ಕಿಳಿಯುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಅವಕಾಶವನ್ನು ಪಡೆಯುತ್ತಾರೆ. ಆಟಗಾರರಿಗಾಗಿ ಟೂರ್ನಿ ಆಯೋಜನೆಗೆ ಮತ್ತೊಂದು ಶುಭ ಸುದ್ದಿ ಬಂದಿದೆ. ಕೊರೊನಾದಿಂದಾಗಿ ಕಳೆದ ಋತುವಿನಲ್ಲಿ ರದ್ದುಗೊಂಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ದೇಶೀಯ ಆಟಗಾರರಿಗೆ ಪರಿಹಾರವನ್ನು ಪಾವತಿಸಿದೆ.

ಟೂರ್ನಿಯ ರದ್ದತಿಯಿಂದಾಗಿ ಆಟಗಾರರಿಗೆ ಆದ ನಷ್ಟವನ್ನು ಮಂಡಳಿಯು ಭರಿಸಲಿದೆ ಎಂದು ಬಿಸಿಸಿಐ ಕಳೆದ ವರ್ಷ ಘೋಷಿಸಿತ್ತು. ಇದಕ್ಕಾಗಿ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅಧ್ಯಕ್ಷತೆಯಲ್ಲಿ ಬಿಸಿಸಿಐ ಸಮಿತಿಯೊಂದನ್ನು ರಚಿಸಿದ್ದು, ಪಾವತಿ ಸೂತ್ರವನ್ನು ಸೂಚಿಸಿದೆ. ಈ ಸೂತ್ರವನ್ನು ಅಳವಡಿಸುವ ಮೂಲಕ ಮಂಡಳಿಯು ಈಗ ಆಟಗಾರರಿಗೆ ಹಣ ನೀಡಿದೆ. ಕಳೆದ ವರ್ಷ, 85 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿ ಮೊದಲ ಬಾರಿಗೆ ಪಂದ್ಯಾವಳಿಯನ್ನು ರದ್ದುಗೊಳಿಸಬೇಕಾಯಿತು. ಆದರೆ, ಈ ವರ್ಷವೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗತೊಡಗಿದೆ. ಆದಾಗ್ಯೂ, ಬಹುತೇಕ ಎಲ್ಲಾ ಆಟಗಾರರು ಎರಡೂ ಡೋಸ್ ಲಸಿಕೆಗಳನ್ನು ಹೊಂದಿರುವ ಕಾರಣ, ಈ ಬಾರಿ ಇದು ಜನವರಿ 13 ರಿಂದ ಪ್ರಾರಂಭವಾಗುತ್ತಿದೆ.

ಆಟಗಾರರು ಪಂದ್ಯದ ಶುಲ್ಕದ 50 ಪ್ರತಿಶತವನ್ನು ಪಾವತಿಸಬೇಕು ಕ್ರಿಕೆಟ್ ವೆಬ್‌ಸೈಟ್ ESPN-ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಹಿಂದಿನ ಸೀಸನ್‌ಗೆ ಸರಿದೂಗಿಸುವ ಸಂದರ್ಭದಲ್ಲಿ, ಆಟಗಾರರಿಗೆ ತಮ್ಮ ಕೊನೆಯ ಋತುವಿನ ಸಂಬಳವನ್ನು ಹೊಸ ಋತುವಿನ ಆರಂಭದ ಮೊದಲು ಪಾವತಿಸಿದ್ದಾರೆ. ವರದಿಯ ಪ್ರಕಾರ, ಮಂಡಳಿಯು 2019-20 ಋತುವಿನ ವೇತನದ ಆಧಾರದ ಮೇಲೆ ಆಟಗಾರರಿಗೆ ನಿಯಮಿತ ಸಂಬಳದ 50 ಪ್ರತಿಶತವನ್ನು ನೀಡಿದೆ.

ಮಂಡಳಿಯು ಇತ್ತೀಚೆಗೆ ದೇಶೀಯ ಆಟಗಾರರ ವೇತನವನ್ನು ಬದಲಿಸುವ ಮೂಲಕ ಅದನ್ನು ಹೆಚ್ಚಿಸಿದೆ, ಆದರೆ ಇದು ಹೊಸ ಋತುವಿನಿಂದ ಅನ್ವಯಿಸುತ್ತದೆ. ಆದ್ದರಿಂದ, ಆಟಗಾರರಿಗೆ ಹಿಂದಿನ ಋತುವಿನ ದರದಲ್ಲಿ ಪಾವತಿಸಲಾಗಿದೆ. ರಣಜಿ ಟ್ರೋಫಿಗೆ ಸಂಬಂಧಿಸಿದಂತೆ, ಕಳೆದ ಋತುವಿನವರೆಗೆ, ಪ್ರತಿ ಆಟಗಾರನು ಪಂದ್ಯಗಳನ್ನು ಆಡುವ ಶುಲ್ಕವಾಗಿ ದಿನಕ್ಕೆ 35 ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದನು. ಈ ಅರ್ಥದಲ್ಲಿ, ಒಬ್ಬ ಆಟಗಾರನು 2019-20 ಋತುವಿನಲ್ಲಿ 8 ಪಂದ್ಯಗಳನ್ನು ಆಡಿದರೆ, 11.20 ಲಕ್ಷ ರೂ. ಪಡೆಯುತ್ತಿದ್ದ. ಈ ವೇತನದ ಆಧಾರದ ಮೇಲೆ ಪರಿಹಾರ ಸೂತ್ರವನ್ನು ಅನ್ವಯಿಸಿ, ರದ್ದುಗೊಂಡ ಋತುವಿಗಾಗಿ ಆ ಆಟಗಾರನಿಗೆ 5.10 ಲಕ್ಷ ರೂ. ನೀಡಲಾಗುತ್ತಿದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ