SRH vs GT: ಸೋಲಿನ ನಂತರ ಪೋಸ್ಟ್ ಮ್ಯಾಚ್ ವೇಳೆ ಮೂಕವಿಸ್ಮಿತರಾದ ಪ್ಯಾಟ್ ಕಮ್ಮಿನ್ಸ್: ಏನು ಹೇಳಿದ್ರು?

Pat Cummins post match presentation: ಸನ್ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ಪಂದ್ಯದ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಎಸ್ಆರ್ಹೆಚ್ ನಾಯಕ ಪ್ಯಾಟ್ ಕಮ್ಮಿನ್ಸ್, ಇದು ಸಾಂಪ್ರದಾಯಿಕವಾದ ಹೈದರಾಬಾದ್ ವಿಕೆಟ್ ಅಲ್ಲ, ಈ ಪಿಚ್ ತುಂಬಾ ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ.

SRH vs GT: ಸೋಲಿನ ನಂತರ ಪೋಸ್ಟ್ ಮ್ಯಾಚ್ ವೇಳೆ ಮೂಕವಿಸ್ಮಿತರಾದ ಪ್ಯಾಟ್ ಕಮ್ಮಿನ್ಸ್: ಏನು ಹೇಳಿದ್ರು?
Pat Cummins Post Match Presentation

Updated on: Apr 07, 2025 | 8:40 AM

ಬೆಂಗಳೂರು (ಏ. 07): ಇಂಡಿಯನ್ ಪ್ರೀಮಿಯರ್ ಲೀಗ್ ನ 19ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad vs Gujarat Titans) 7 ವಿಕೆಟ್ ಗಳಿಂದ ಸೋಲಿಸಿತು. ಈ ಋತುವಿನ ಮೊದಲ ಪಂದ್ಯದಲ್ಲಿ ಜಯಗಳಿಸಿದ ನಂತರ ಸನ್‌ರೈಸರ್ಸ್ ತಂಡಕ್ಕೆ ಇದು ಸತತ ನಾಲ್ಕನೇ ಸೋಲು. ಸನ್‌ರೈಸರ್ಸ್ ಹೈದರಾಬಾದ್ ತಂಡ ಗುಜರಾತ್ ವಿರುದ್ಧ ತನ್ನ ತವರು ನೆಲದಲ್ಲಿ ಪಂದ್ಯವನ್ನು ಆಡಿದರೂ ಇದರ ಹೊರತಾಗಿ ಸೋಲನ್ನು ಎದುರಿಸಬೇಕಾಯಿತು. ತಂಡದ ನಿರಂತರ ಸೋಲಿನಿಂದ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ತುಂಬಾ ನಿರಾಶೆಗೊಂಡಂತೆ ಕಂಡುಬಂತು. ಪರಿಸ್ಥಿತಿ ಹೇಗಾಗಿದೆ ಎಂದರೆ ತಂಡ 300 ರನ್ ಕಲೆಹಾಕುವುದು ಬಿಡಿ 150 ಸ್ಕೋರ್ ದಾಟುವುದು ಕೂಡ ಕಷ್ಟಕರವಾಗುತ್ತಿದೆ.

ಪಂದ್ಯದ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಎಸ್​ಆರ್​ಹೆಚ್ ನಾಯಕ ಪ್ಯಾಟ್ ಕಮ್ಮಿನ್ಸ್, ‘‘ಇದು ಸಾಂಪ್ರದಾಯಿಕವಾದ ಹೈದರಾಬಾದ್ ವಿಕೆಟ್ ಅಲ್ಲ, ಈ ಪಿಚ್ ತುಂಬಾ ಕಷ್ಟಕರವಾಗಿತ್ತು. ಕೊನೆಗೆ, ಈ ವಿಕೆಟ್ ನಾವು ಅಂದುಕೊಂಡಷ್ಟು ತಿರುಗುತ್ತಿರಲಿಲ್ಲ. ನಮ್ಮ ಸ್ಕೋರ್ ಕೂಡ ಚೆನ್ನಾಗಿರಲಿಲ್ಲ, ಆದರೆ ಅವರು ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಬೌಲಿಂಗ್ ಕೂಡ ತುಂಬಾ ಕಠಿಣವಾಗಿತ್ತು’’ ಎಂದು ಹೇಳಿದ್ದಾರೆ. ಸದ್ಯ ಸನ್‌ರೈಸರ್ಸ್ ತಂಡವು ತನ್ನ ತವರು ಮೈದಾನದ ಪಿಚ್ ಅನ್ನೇ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಈ ಋತುವಿನಲ್ಲಿ ಅವರು ಯಾವ ತಂತ್ರದೊಂದಿಗೆ ಮೈದಾನಕ್ಕೆ ಪ್ರವೇಶಿಸುತ್ತಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಹ್ಯಾಟ್ರಿಕ್ ಗೆಲುವಿನಿಂದ ಜಿಟಿ ನಾಯಕ ಶುಭ್​ಮನ್ ಗಿಲ್ ಸಂತೋಷ:

ಏತನ್ಮಧ್ಯೆ, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ನಂತರ ಗುಜರಾತ್ ಟೈಟಾನ್ಸ್ ನಾಯಕ ಶುಭ್​ಮನ್ ಗಿಲ್ ಬೌಲಿಂಗ್ ಅನ್ನು ಶ್ಲಾಘಿಸಿದರು. ವಿಶೇಷವಾಗಿ ಈ ಸ್ವರೂಪದಲ್ಲಿ ಬೌಲರ್‌ಗಳು “ಗೇಮ್ ಚೇಂಜರ್” ಎಂದು ಹೇಳಿದರು. ವೇಗಿ ಮೊಹಮ್ಮದ್ ಸಿರಾಜ್ (4-17) ಅವರ ಅದ್ಭುತ ಬೌಲಿಂಗ್ ಪ್ರದರ್ಶನ, ನಂತರ ಗಿಲ್ (ಅಜೇಯ 61) ಅವರ ಅರ್ಧಶತಕ ಮತ್ತು ವಾಷಿಂಗ್ಟನ್ ಸುಂದರ್ (49) ಅವರೊಂದಿಗೆ ಮೂರನೇ ವಿಕೆಟ್‌ಗೆ 56 ಎಸೆತಗಳಲ್ಲಿ 90 ರನ್‌ಗಳ ಜೊತೆಯಾಟ ಗುಜರಾತ್ ಟೈಟಾನ್ಸ್ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸತತ ಮೂರನೇ ಗೆಲುವು ದಾಖಲಿಸಿತು.

ಇದನ್ನೂ ಓದಿ
ಫಿಲಿಪ್ಸ್ ನೋವಿನಿಂದ ನರಳುತ್ತಿದ್ದರೂ ಕಿಶನ್ ಜೊತೆ ಮಜಾ ಮಾಡ್ತಿದ್ದ ಗಿಲ್
ಆರ್​ಸಿಬಿ- ಮುಂಬೈ ಕದನ; ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ 11?
2,3,4...; ಆರ್​ಸಿಬಿ ಬಿಟ್ಟ ಬಳಿಕ ಬೌಲಿಂಗ್ ಕಲಿತ್ರಾ ಸಿರಾಜ್?
ಆರ್​ಸಿಬಿ- ಮುಂಬೈ ಮುಖಾಮುಖಿ; ಹೆಡ್ ಟು ಹೆಡ್ ದಾಖಲೆ ಹೇಗಿದೆ?

Shubman Gill: ಸಹ ಆಟಗಾರ ನೋವಿನಿಂದ ನರಳುತ್ತಿದ್ದರೂ ಕಿಶನ್ ಜೊತೆ ಹರಟೆ: ಗಿಲ್ ವಿರುದ್ಧ ಬೈಗುಳಗಳ ಸುರಿಮಳೆ

‘‘ಬೌಲರ್‌ಗಳು ಪಂದ್ಯದ ಪಥವನ್ನು ಬದಲಾಯಿಸುತ್ತಾರೆ, ವಿಶೇಷವಾಗಿ ಈ ಸ್ವರೂಪದಲ್ಲಿ. ಟಿ20ಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಬಗ್ಗೆ ಬಹಳಷ್ಟು ಜನರು ಮಾತನಾಡುತ್ತಾರೆ. ಆದರೆ ಪಂದ್ಯಗಳನ್ನು ಬೌಲರ್‌ಗಳು ಗೆಲ್ಲುತ್ತಾರೆ ಎಂದು ನಾವು ಭಾವಿಸುತ್ತೇವೆ. ಅದಕ್ಕಾಗಿಯೇ ಈ ಫ್ರಾಂಚೈಸಿಯಲ್ಲಿ ಬೌಲರ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ’’ ಎಂದು ಶುಭ್​ಮನ್ ಗಿಲ್ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ