VIDEO: ಎಲ್ಲವೂ ಹೋಯ್ತು… SRH ಪ್ರದರ್ಶನ ನೋಡಿ ತಾಳ್ಮೆ ಕಳೆದುಕೊಂಡ ಕಾವ್ಯ ಮಾರನ್
IPL 2025 SRH vs GT: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 19ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ SRH 20 ಓವರ್ಗಳಲ್ಲಿ 152 ರನ್ ಕಲೆಹಾಕಿದರೆ, ಈ ಗುರಿಯನ್ನು GT ತಂಡ 16.4 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ರಲ್ಲಿ ಪರಾಕ್ರಮ ಮರೆಯುವ ಮುನ್ಸೂಚನೆಯೊಂದಿಗೆ ಕಣಕ್ಕಿಳಿದಿದ್ದ ಸನ್ರೈಸರ್ಸ್ ಹೈದರಾಬಾದ್ (SRH) ತಂಡವು ಇದೀಗ ಸತತ ಸೋಲುಗಳಿಂದ ಕಂಗೆಟ್ಟಿದೆ. ಮೊಲದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದಿದ್ದ ಎಸ್ಆರ್ಹೆಚ್ ಆ ಬಳಿಕ ಬ್ಯಾಕ್ ಟು ಬ್ಯಾಕ್ ನಾಲ್ಕು ಮ್ಯಾಚ್ಗಳಲ್ಲಿ ಮುಗ್ಗರಿಸಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಅತ್ಯಂತ ಸುಲಭವಾಗಿ ಸೋಲೊಪ್ಪಿಕೊಂಡಿತ್ತು. ಸನ್ರೈಸರ್ಸ್ ಹೈದರಾಬಾದ್ ತಂಡದ ಈ ಕಳಪೆ ಪ್ರದರ್ಶನ ನೋಡಿ ಮಾಲಕಿ ಕಾವ್ಯ ಮಾರನ್ ಕೂಡ ತಾಳ್ಮೆ ಕಳೆದುಕೊಂಡರು.
ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 50 ರನ್ಗಳಿಸುಲವಷ್ಟರಲ್ಲಿ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಅವರ ವಿಕೆಟ್ ಕಳೆದುಕೊಂಡಿತು.
ಈ ಮೂರು ವಿಕೆಟ್ ಪತನಗೊಳ್ಳುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಕಾವ್ಯ ಮಾರನ್ ಹೈರಾಣರಾದರು. ಅಲ್ಲದೆ ಏನು ಮಾಡುತ್ತಿದ್ದಾರೆ ಎಂಬಾರ್ಥದಲ್ಲಿ ನಿರಾಸೆ ವ್ಯಕ್ತಪಡಿಸಿದ್ದಾರೆ. ಎಸ್ಆರ್ಹೆಚ್ ತಂಡದ ಮಾಲಕಿಯ ಈ ರಿಯಾಕ್ಷನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 152 ರನ್ಗಳು ಮಾತ್ರ. ಈ ಗುರಿಯನ್ನು 16.4 ಓವರ್ಗಳಲ್ಲಿ ಬಿಟ್ಟು ಕೊಡುವ ಮೂಲಕ 7 ವಿಕೆಟ್ಗಳ ಸೋಲನುಭವಿಸಿತು. ಈ ಸುಲಭ ಸೋಲಿನಿಂದಲೂ ಕಾವ್ಯ ಮಾರನ್ ಹತಾಶರಾದರು. ಈ ವೇಳೆ ನೀಡಿದ ರಿಯಾಕ್ಷನ್ ಕೂಡ ವೈರಲ್ ಆಗಿದೆ.
ಕಾವ್ಯ ಮಾರನ್ ರಿಯಾಕ್ಷನ್ ವಿಡಿಯೋ:
Ruk jao bhai kya kar rahe ho Normal cricket khel lo ab 🤣🤣
Kavya maran’s reactions 🤌🏽🤣 pic.twitter.com/O39QTMNgPc
— ••TAUKIR•• (@iitaukir) April 6, 2025
ಒಟ್ಟಿನಲ್ಲಿ ಮೊದಲ ಪಂದ್ಯದಲ್ಲೇ 286 ರನ್ ಬಾರಿಸಿ ಅಬ್ಬರಿಸಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡವು ಇದೀಗ 200 ರನ್ಗಳ ಗುರಿ ನೀಡಲು ಒದ್ದಾಡುತ್ತಿದೆ. ಪರಿಣಾಮ 5 ಪಂದ್ಯಗಳಲ್ಲಿ 4 ರಲ್ಲಿ ಹೀನಾಯವಾಗಿ ಸೋಲನುಭವಿಸಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
ಇದನ್ನೂ ಓದಿ: ಡಾಟ್ ಬಾಲ್ನಲ್ಲೇ ಅರ್ಧಶತಕ: ಸರ್ವಶ್ರೇಷ್ಠ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್
ಇದಾಗ್ಯೂ ಸನ್ರೈಸರ್ಸ್ ಹೈದರಾಬಾದ್ ಮುಂದೆ ಇನ್ನೂ 9 ಪಂದ್ಯಗಳಿದ್ದು, ಈ ಮ್ಯಾಚ್ಗಳ ಮೂಲಕ ಎಸ್ಆರ್ಹೆಚ್ ಪಡೆ ಕಂಬ್ಯಾಖ್ ಮಾಡಲಿದೆಯಾ ಕಾದು ನೋಡಬೇಕಿದೆ.