
(ಬೆಂಗಳೂರು, ಏ. 04): ಐಪಿಎಲ್ 2025 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ಪ್ರದರ್ಶನವು ಏರಿಳಿತಗಳಿಂದ ಸಾಗುತ್ತಿದೆ. ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಹೀನಾಯವಾಗಿ ಸೋಲಿಸಿದ್ದರು. ಆದರೆ ನಂತರ ಎಸ್ಆರ್ಹೆಚ್ ನಿರಂತರ ಸೋಲುಗಳನ್ನು ಎದುರಿಸಬೇಕಾಯಿತು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳು ಸಂಪೂರ್ಣ ವಿಫಲರಾದರು. ತಂಡವು 80 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಮೊದಲ ಪಂದ್ಯದಲ್ಲಿ 286 ರನ್ ಗಳಿಸಿದ ನಂತರ ತಂಡದ ಪ್ರದರ್ಶನ ಸಂಪೂರ್ಣವಾಗಿ ಕುಸಿದಿದೆ. ಸತತ ಮೂರು ಪಂದ್ಯಗಳಲ್ಲಿ ಸೋತ ನಂತರ ಹೈದರಾಬಾದ್ ಪಾಯಿಂಟ್ ಪಟ್ಟಿಯಲ್ಲಿ ಕೂಡ ಪಾತಳಕ್ಕೆ (ಕೊನೆಯ ಸ್ಥಾನಕ್ಕೆ) ಕುಸಿದಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೈದರಾಬಾದ್ ತಂಡ ಐಪಿಎಲ್‌ನಲ್ಲಿ ತನ್ನ ಅತಿ ದೊಡ್ಡ ಸೋಲನ್ನು ಅನುಭವಿಸಿತು. 201 ರನ್‌ಗಳ ಗುರಿಯನ್ನು ಬೆನ್ನಟ್ಟಿದ ತಂಡ ಕೇವಲ 120 ರನ್‌ಗಳಿಗೆ ಪತನಗೊಂಡಿತು. ಇದಕ್ಕೂ ಮೊದಲು, ಐಪಿಎಲ್ 2024 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 78 ರನ್‌ಗಳಿಂದ ಸೋತಿದ್ದರು. ಆದರೆ ಈಗ ಹೈದರಾಬಾದ್ ಆ ದಾಖಲೆಯನ್ನೂ ಹಿಂದಿಕ್ಕಿದೆ. ಐಪಿಎಲ್ 2025 ರ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 286 ರನ್ ಗಳಿಸಿತು. ಆಗ ನಾಯಕ ಪ್ಯಾಟ್ ಕಮ್ಮಿನ್ಸ್ 300 ಕ್ಕೂ ಹೆಚ್ಚು ರನ್ ಗಳಿಸುವುದು ನಮ್ಮ ಗುರಿ ಎಂದು ಹೇಳಿಕೊಂಡಿದ್ದರು. ಹೈದರಾಬಾದ್ ತಂಡದ ಬಲಿಷ್ಠ ಬ್ಯಾಟಿಂಗ್ ಕಂಡು ಕ್ರಿಕೆಟ್ ತಜ್ಞರು ಕೂಡ ಇದನ್ನು ನಂಬಿದ್ದರು. ಅವರು ಐಪಿಎಲ್‌ನಲ್ಲಿ 300 ರನ್‌ಗಳ ಗಡಿ ದಾಟಬಹುದು ಎಂಬ ಸೂಚನೆ ಕೊಟ್ಟಿದ್ದರು. ಆದರೆ ಮೊದಲ ಪಂದ್ಯದ ನಂತರ ಹೈದರಾಬಾದ್ ತಂಡದ ಪ್ರದರ್ಶನ ಕಳಪೆಯಾಗಿದೆ. ನಾಯಕ ಪ್ಯಾಟ್ ಕಮ್ಮಿನ್ಸ್ ತಂತ್ರವೂ ಕೆಲಸ ಮಾಡುತ್ತಿಲ್ಲ.
ಮೊದಲ ಪಂದ್ಯದಲ್ಲಿ 286 ರನ್ ಗಳಿಸಿದ್ದು ಬಿಟ್ಟರೆ ನಂತರದ ಮೂರು ಪಂದ್ಯಗಳಲ್ಲಿ ತಂಡದ ಬ್ಯಾಟ್ಸ್‌ಮನ್‌ಗಳು 200 ರನ್‌ಗಳನ್ನು ಸಹ ಗಳಿಸಲು ಸಾಧ್ಯವಾಗಲಿಲ್ಲ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತಂಡವು ಕೇವಲ 190 ರನ್ ಗಳಿಸಲು ಶಕ್ತವಾಯಿತು. ಇಲ್ಲಿ ಐದು ವಿಕೆಟ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪರಿಸ್ಥಿತಿ ಇನ್ನೂ ಕೆಟ್ಟದಾಗಿತ್ತು. ಹೈದರಾಬಾದ್ ತಂಡವು 20 ಓವರ್‌ಗಳನ್ನು ಸಹ ಆಡಲು ಸಾಧ್ಯವಾಗಲಿಲ್ಲ ಮತ್ತು 163 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಅವರು 7 ವಿಕೆಟ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ಈಗ ಕೆಕೆಆರ್ ವಿರುದ್ಧದ ಸೋಲು ತಂಡದ ಸಮಸ್ಯೆಗಳನ್ನು ಹೆಚ್ಚಿಸಿದೆ.
KKR vs SRH: ಈಡನ್ ಗಾರ್ಡನ್ಸ್ ಖಾಲಿ.. ಖಾಲಿ..: ಐಪಿಎಲ್ ವೀಕ್ಷಣೆಗೆ ಜನರೇ ಬರದಿರಲು ಏನು ಕಾರಣ?
ಹೈದರಾಬಾದ್ ತಂಡದಲ್ಲಿ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ ಅವರಂತಹ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿದ್ದಾರೆ. ಆದರೆ ಈ ಆಟಗಾರರು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಪವರ್ ಪ್ಲೇನಲ್ಲಿಯೇ ತಂಡ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಿಂದಾಗಿ ತಂಡವು ಸಂಕಷ್ಟಕ್ಕೆ ಸಿಲುಕಿತು ಮತ್ತು ಪಂದ್ಯದುದ್ದಕ್ಕೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಂಡದ ಪರ ಹೆನ್ರಿಕ್ ಕ್ಲಾಸೆನ್ ಅತಿ ಹೆಚ್ಚು 33 ರನ್ ಗಳಿಸಿದರು. ಕಾಮಿಂಡು ಮೆಂಡಿಸ್ 27 ರನ್ ಗಳ ಕೊಡುಗೆ ನೀಡಿದರು. ಆದರೂ, ತಂಡವು 16.4 ಓವರ್‌ಗಳಲ್ಲಿ 120 ರನ್‌ಗಳಿಗೆ ಆಲೌಟ್ ಆಯಿತು.
ಕೆಕೆಆರ್ ವಿರುದ್ಧದ ಸೋಲು ಹೈದರಾಬಾದ್ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್ ಜೊತೆ ಫೀಲ್ಡಿಂಗ್ನಲ್ಲೂ ಸುಧಾರಣೆ ಕಾಣಬೇಕಾಗಿದೆ. ಪ್ಯಾಟ್ ಕಮ್ಮಿನ್ಸ್ ಕೂಡ ನಮ್ಮ ಸೋಲಿಗೆ ಕಳಪೆ ಫೀಲ್ಡಿಂಗ್ ಎಂಬ ಕಾರಣ ನೀಡಿದರು. ತಂಡವು ಪ್ಲೇಆಫ್‌ಗೆ ತಲುಪಬೇಕಾದರೆ, ಶೀಘ್ರದಲ್ಲೇ ಗೆಲುವಿನ ಹಾದಿಗೆ ಮರಳುವುದು ಅನಿವಾರ್ಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ