KKR vs SRH: ಈಡನ್ ಗಾರ್ಡನ್ಸ್ ಖಾಲಿ.. ಖಾಲಿ..: ಐಪಿಎಲ್ ವೀಕ್ಷಣೆಗೆ ಜನರೇ ಬರದಿರಲು ಏನು ಕಾರಣ?
Eden Gardens Stadium Empty: ತಮ್ಮ ತವರು ನೆಲದಲ್ಲಿ ಚಾಂಪಿಯನ್ ಆಗಿ ಬಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಬಾರಿ ಸನ್‌ರೈಸರ್ಸ್ ವಿರುದ್ಧ ಹೆಚ್ಚಿನ ಬೆಂಬಲ ಪಡೆಯುತ್ತೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅಲ್ಲಿ ನಡೆದದ್ದು ಅದಕ್ಕೆ ವಿರುದ್ಧವಾಗಿ. ಪಂದ್ಯದ ಟಾಸ್‌ಗೆ ಮುಂಚೆಯೇ, ಪ್ರೇಕ್ಷಕರ ಕೊರತೆಯು ಎಲ್ಲರ ಗಮನ ಸೆಳೆದಿತ್ತು.

(ಬೆಂಗಳೂರು, ಏ. 04): ಪ್ರತಿ ವರ್ಷ ಕ್ರಿಕೆಟ್ ಅಭಿಮಾನಿಗಳು ಐಪಿಎಲ್‌ನ (Indian Premier League) ಹೊಸ ಸೀಸನ್ ಆರಂಭವಾಗಲು ಕಾಯುತ್ತಿರುತ್ತಾರೆ. ಟಿ20 ಕ್ರಿಕೆಟ್‌ನ ಅತಿ ದೊಡ್ಡ ಸಂಭ್ರಮ ಆರಂಭವಾದ ತಕ್ಷಣ, ಕ್ರೀಡಾಂಗಣ ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿರುತ್ತದೆ. ಎರಡು ತಿಂಗಳು ಪೂರ್ತಿ, ಯಾವುದೇ ಕ್ರೀಡಾಂಗಣದಲ್ಲಿ ಪಂದ್ಯ ನಡೆದರೂ, ಯಾವುದೇ ತಂಡ ಆಡುತ್ತಿದ್ದರೂ, ಅದು ಜನರಿಂದ ತುಂಬಿದಂತೆ ಕಾಣುತ್ತದೆ. ಆದರೆ ಗುರುವಾರ, ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಅಂತಹ ದೃಶ್ಯ ಕಂಡುಬಂದಿಲ್ಲ.. ಇದು ಎಲ್ಲರಿಗೂ ಆಘಾತವನ್ನುಂಟು ಮಾಡಿತು. ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯವನ್ನು ವೀಕ್ಷಿಸಲು ಕೆಲವೇ ಅಭಿಮಾನಿಗಳು ಬಂದಿದ್ದರಿಂದ ಕ್ರೀಡಾಂಗಣ ಅರ್ಧಕ್ಕಿಂತ ಹೆಚ್ಚು ಖಾಲಿಯಾಗಿತ್ತು.
ಚಾಂಪಿಯನ್ ತಂಡದ ಕ್ರೀಡಾಂಗಣ ಅರ್ಧಕ್ಕಿಂತ ಹೆಚ್ಚು ಖಾಲಿ ಜನ
ತಮ್ಮ ತವರು ನೆಲದಲ್ಲಿ ಚಾಂಪಿಯನ್ ಆಗಿ ಬಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಬಾರಿ ಸನ್‌ರೈಸರ್ಸ್ ವಿರುದ್ಧ ಹೆಚ್ಚಿನ ಬೆಂಬಲ ಪಡೆಯುತ್ತೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅಲ್ಲಿ ನಡೆದದ್ದು ಅದಕ್ಕೆ ವಿರುದ್ಧವಾಗಿ. ಪಂದ್ಯದ ಟಾಸ್‌ಗೆ ಮುಂಚೆಯೇ, ಪ್ರೇಕ್ಷಕರ ಕೊರತೆಯು ಎಲ್ಲರ ಗಮನ ಸೆಳೆದಿತ್ತು. ನಂತರ ಟಾಸ್ ಸಮಯದಲ್ಲಿಯೂ ಕ್ರೀಡಾಂಗಣದಲ್ಲಿ ಯಾವುದೇ ರೀತಿಯ ಶಬ್ದವಿಲ್ಲದ ಕಾರಣ ಅಭಿಮಾನಿಗಳ ಕೊರತೆ ಕಂಡುಬಂದಿತು. ಆದಾಗ್ಯೂ, ಪಂದ್ಯ ಪ್ರಾರಂಭವಾಗುವ ಸ್ವಲ್ಪ ಮೊದಲು ಕ್ರೀಡಾಂಗಣವು ಅಭಿಮಾನಿಗಳಿಂದ ತುಂಬಿರುತ್ತದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅದು ಆಗಲಿಲ್ಲ.
Why is Eden Gardens empty ? pic.twitter.com/ttsU5QshL0
— 🖤 (@ameye_17) April 3, 2025
ಪಂದ್ಯ ಪ್ರಾರಂಭವಾದ ನಂತರವೂ ಕ್ರೀಡಾಂಗಣದ ವಿವಿಧ ಭಾಗಗಳಲ್ಲಿ ಕೆಲವೇ ಅಭಿಮಾನಿಗಳು ಕಂಡುಬಂದರು. ಸುಮಾರು 68 ಸಾವಿರ ಪ್ರೇಕ್ಷಕರ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ 10 ಸಾವಿರ ಅಭಿಮಾನಿಗಳು ಕೂಡ ಇರಲಿಲ್ಲ. ಪರಿಸ್ಥಿತಿ ಎಷ್ಟರ ಮಟ್ಟಿಗೆ ತಲುಪಿತ್ತೆಂದರೆ, ಎಸ್ಆರ್ಹೆಚ್ ವಿಕೆಟ್ ಪತನವಾದಾಗ, ಅಭಿಮಾನಿಗಳ ಸಂಭ್ರಮಾಚರಣೆಯ ಸದ್ದು ಕೇಳಲೇ ಇಲ್ಲ.
KKR vs SRH, IPL 2025: ಬ್ಯಾಟಿಂಗ್-ಬೌಲಿಂಗ್ ಅಲ್ಲ… ಸೋತಿದ್ದಕ್ಕೆ ಪ್ಯಾಟ್ ಕಮ್ಮಿನ್ಸ್ ದೂರಿದ್ದು ಯಾರನ್ನ ನೋಡಿ
ಕ್ರೀಡಾಂಗಣ ಖಾಲಿಯಾಗಿರುವುದಕ್ಕೆ ಇದೇ ಕಾರಣವೇ?
ಕಳೆದ ಬಾರಿಗಿಂತ ಈ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಟಿಕೆಟ್‌ಗಳ ಬೆಲೆಯನ್ನು ಹೆಚ್ಚಿಸಿವೆ ಎಂದು ಹೇಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅಭಿಮಾನಿಗಳು ಇದನ್ನು ವಿರೋಧಿಸಿ ಪಂದ್ಯವನ್ನು ಬಹಿಷ್ಕರಿಸಿದ್ದಾರೆ. ಈ ಮೈದಾನದಲ್ಲಿ ಇದು ಐಪಿಎಲ್ 2025 ರ ಕೇವಲ ಎರಡನೇ ಪಂದ್ಯವಾಗಿತ್ತು. ಆದಾಗ್ಯೂ, ಕಳೆದ ಪಂದ್ಯದಲ್ಲಿ ಕ್ರೀಡಾಂಗಣವು ಸಂಪೂರ್ಣವಾಗಿ ತುಂಬಿತ್ತು ಏಕೆಂದರೆ ಅದು ಐಪಿಎಲ್ 2025 ರ ಋತುವಿನ ಮೊದಲ ಪಂದ್ಯ. ಇದರಲ್ಲಿ ಕೋಲ್ಕತ್ತಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಿತ್ತು.
So, Eden Gardens (KKR) increased the price of Tickets & the result is Half Empty Eden Gardens. This is how you respond 👏🏽 Don’t go to the stadium because of these exuberant prices, let them suffer & they’ll drop the price eventually. All other Team fans should learn #KKRvsSRH pic.twitter.com/kAc5ts1Cqa
— WTF Cricket (@CricketWtf) April 3, 2025
Overpriced tickets, 900 and 1200 1500 tickets are being blacked for 2500 3000 3500 each so uts better to watch matches at home on our television rather than paying 4k for upper block tickets
— Aaditya Agarwal (@Aadityafanroman) April 3, 2025
ನಿನ್ನೆ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 80 ರನ್‌ಗಳಿಂದ ಸೋಲಿಸುವ ಮೂಲಕ ಅದ್ಭುತ ಸಾಧನೆ ಮಾಡಿತು. ಈಡನ್ ಗಾರ್ಡನ್ಸ್ನಲ್ಲಿ ಕೋಲ್ಕತ್ತಾ ಮೊದಲು 200 ರನ್ ಗಳಿಸಿತು, ಉತ್ತರವಾಗಿ ಹೈದರಾಬಾದ್ ಕೇವಲ 120 ರನ್ ಗಳಿಸಷ್ಟೆ ಶಕ್ತವಾಯಿತು. ಈ ಗೆಲುವಿನ ನಂತರ, ಕೆಕೆಆರ್ ತಂಡವು ಕೊನೆಯ ಸ್ಥಾನದಿಂದ 5 ನೇ ಸ್ಥಾನಕ್ಕೆ ಏರಿದರೆ ಅತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ