Suresh Raina: ವಿದಾಯ ಹೇಳಿದ 4 ದಿನಗಳಲ್ಲೇ ಮತ್ತೆ ಅಖಾಡಕ್ಕಿಳಿದ ರೈನಾ..! ಇಂದಿನ ಪಂದ್ಯದ ಬಗೆಗಿನ ವಿವರ ಹೀಗಿದೆ
Suresh Raina: ಇಂದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ ತಂಡ ಜಾಂಟಿ ರೋಡ್ಸ್ ನೇತೃತ್ವದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡವನ್ನು ಎದುರಿಸಲಿದೆ.
ಇತ್ತೀಚೆಗಷ್ಟೆ ಟೀಂ ಇಂಡಿಯಾದ ಮಾಜಿ ಮಿಡಲ್ ಆರ್ಡರ್ ಬ್ಯಾಟರ್ ಸುರೇಶ್ ರೈನಾ (Suresh Raina) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.ಆದರೆ ಈಗ ನಿವೃತ್ತಿ ಘೋಷಿಸಿದ 4 ದಿನಗಳ ನಂತರ ಅವರು ಮತ್ತೆ ಕ್ರಿಕೆಟ್ ಅಖಾಡಕ್ಕೆ ಮರಳಲು ಮುಂದಾಗಿದ್ದಾರೆ. ರೈನಾ ಅಲ್ಲದೆ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ (Sachin Tendulkar), ಆಲ್ ರೌಂಡರ್ ಯುವರಾಜ್ ಸಿಂಗ್ ಕೂಡ ಇಂದು ಮೈದಾನಕ್ಕೆ ಮರಳಲಿದ್ದಾರೆ. ವಾಸ್ತವವಾಗಿ, ಇಂದಿನಿಂದ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ (Road Safety World Series) ಆರಂಭವಾಗುತ್ತಿದ್ದು, ರೈನಾ ಇಂಡಿಯಾ ಲೆಜೆಂಡ್ (India legend) ತಂಡದ ಪರ ಅಖಾಡಕ್ಕಿಳಿಯಲಿದ್ದಾರೆ. ಇಂದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ ತಂಡ ಜಾಂಟಿ ರೋಡ್ಸ್ ನೇತೃತ್ವದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡವನ್ನು ಎದುರಿಸಲಿದೆ.
8 ತಂಡಗಳ ನಡುವಿನ ಪಂದ್ಯ
ಈ 8 ತಂಡಗಳ ನಡುವಿನ ಪಂದ್ಯಾವಳಿಯು ಸೆಪ್ಟೆಂಬರ್ 10 ರಿಂದ ಅಕ್ಟೋಬರ್ 1 ರವರೆಗೆ 4 ಸ್ಥಳಗಳಾದ ಕಾನ್ಪುರ, ಇಂದೋರ್, ಡೆಹ್ರಾಡೂನ್ ಮತ್ತು ರಾಯ್‌ಪುರದಲ್ಲಿ ನಡೆಯಲಿದೆ. ಕ್ರಿಕೆಟ್ ಪ್ರೇಮಿಗಳು ತಮ್ಮ ಸ್ಟಾರ್ ಆಟಗಾರರನ್ನು ಮತ್ತೊಮ್ಮೆ ಹಳೆಯ ಶೈಲಿಯಲ್ಲಿ ಮೈದಾನದಲ್ಲಿ ನೋಡಲು ಕಾತರರಾಗಿದ್ದಾರೆ. ಅಭಿಮಾಣಿಗಳಿಗೆ ಮತ್ತಷ್ಟು ಮನರಂಜನೆ ನೀಡಲು ತೆಂಡೂಲ್ಕರ್, ರೈನಾ, ಯುವರಾಜ್ ಮೈದಾನದಲ್ಲಿ ಸಾಕಷ್ಟು ಬೆವರು ಹರಿಸುತ್ತಿದ್ದಾರೆ.
ಪಂದ್ಯದ ಬಗ್ಗೆ ಒಂದಿಷ್ಟು ವಿವರ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ರಸ್ತೆ ಸುರಕ್ಷತಾ ಸರಣಿಯ ಪಂದ್ಯ ಎಲ್ಲಿ ನಡೆಯಲಿದೆ?
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ನಡೆಯಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಯಾವಾಗ ಆರಂಭವಾಗುತ್ತದೆ?
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಸೆಪ್ಟೆಂಬರ್ 10 ರಂದು ಅಂದರೆ ಶನಿವಾರ ಸಂಜೆ 7.30ಕ್ಕೆ ಆರಂಭವಾಗಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ಲೆಜೆಂಡ್ ಪಂದ್ಯದ ಪ್ರಸಾರವನ್ನು ಯಾವ ಚಾನಲ್ನಲ್ಲಿ ವೀಕ್ಷಿಸಬಹುದು?
ಭಾರತ ಮತ್ತು ದಕ್ಷಿಣ ಆಫ್ರಿಕಾ ಲೆಜೆಂಡ್ ನಡುವಿನ ಪಂದ್ಯವನ್ನು ಭಾರತದಲ್ಲಿ ಕಲರ್ಸ್ ಸಿನೆಪ್ಲೆಕ್ಸ್ ಮತ್ತು ಕಲರ್ಸ್ ಸಿನೆಪ್ಲೆಕ್ಸ್ ಸೂಪರ್‌ಹಿಟ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ.
ರಸ್ತೆ ಸುರಕ್ಷತಾ ಸರಣಿ ಎಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ?
ಇಂಡಿಯಾ ಲೆಜೆಂಡ್ ಮತ್ತು ಸೌತ್ ಆಫ್ರಿಕಾ ಲೆಜೆಂಡ್ ನಡುವಿನ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು Voot ನಲ್ಲಿ ವೀಕ್ಷಿಸಬಹುದು.
ಭಾರತ ಲೆಜೆಂಡ್ ತಂಡ: ಸಚಿನ್ ತೆಂಡೂಲ್ಕರ್ (ನಾಯಕ), ಸುರೇಶ್ ರೈನಾ, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಮುನಾಫ್ ಪಟೇಲ್, ಎಸ್. ಬದ್ರಿನಾಥ್, ಸ್ಟುವರ್ಟ್ ಬಿನ್ನಿ, ನಮನ್ ಓಜಾ, ಮನ್‌ಪ್ರೀತ್ ಗೋನಿ, ಪ್ರಗ್ಯಾನ್ ಓಜಾ, ವಿನಯ್ ಕುಮಾರ್, ರಾಜೇಶ್ ಪೊವಾರ್, ರಾಹುಲ್ ಶರ್ಮಾ
Published On - 3:26 pm, Sat, 10 September 22