AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2022: 57 ಎಸೆತಗಳಿಗೆ ಸೀಮಿತ; 5 ಪಂದ್ಯಗಳಲ್ಲಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ ಪಾಕ್ ನಾಯಕ..!

Asia Cup 2022: ಕೆಲವೇ ಕೆಲವು ದಿನಗಳ ಹಿಂದೆ ಇಡೀ ಕ್ರಿಕೆಟ್ ಲೋಕದಲ್ಲೇ ಸಖತ್ ಸದ್ದು ಮಾಡಿದ್ದ ಪಾಕ್ ನಾಯಕ ಬಾಬರ್ ಅಜಮ್ ಏಷ್ಯಾಕಪ್‌ನಲ್ಲಿ ಕಳಪೆ ಫಾರ್ಮ್‌ನಿಂದ ತೀವ್ರ ಟೀಕೆಗೆ ಒಳಗಾಗುತ್ತಿದ್ದಾರೆ.

Asia Cup 2022: 57 ಎಸೆತಗಳಿಗೆ ಸೀಮಿತ; 5 ಪಂದ್ಯಗಳಲ್ಲಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ ಪಾಕ್ ನಾಯಕ..!
Babar Azam
TV9 Web
| Updated By: ಪೃಥ್ವಿಶಂಕರ|

Updated on:Sep 10, 2022 | 4:16 PM

Share

ಕೆಲವೇ ಕೆಲವು ದಿನಗಳ ಹಿಂದೆ ಇಡೀ ಕ್ರಿಕೆಟ್ ಲೋಕದಲ್ಲೇ ಸಖತ್ ಸದ್ದು ಮಾಡಿದ್ದ ಪಾಕ್ ನಾಯಕ ಬಾಬರ್ ಅಜಮ್ (Babar Azam) ಏಷ್ಯಾಕಪ್‌ನಲ್ಲಿ ಕಳಪೆ ಫಾರ್ಮ್‌ನಿಂದ ತೀವ್ರ ಟೀಕೆಗೆ ಒಳಗಾಗುತ್ತಿದ್ದಾರೆ. ಏಷ್ಯಾಕಪ್‌ಗೂ (Asia Cup 2022) ಮುನ್ನ ಅಮೋಘ ಫಾರ್ಮ್‌ನಲ್ಲಿದ್ದ ಬಾಬರ್‌ ಬಣ್ಣ ಈ ಟೂರ್ನಿಯಲ್ಲಿ ಬಯಲಾಗಿದೆ. ಟಿ20 ರ್ಯಾಕಿಂಗ್​ನ ಮಾಜಿ ನಂ.1 ಬ್ಯಾಟ್ಸ್‌ಮನ್ ಬಾಬರ್ ಲಂಕಾ ವಿರುದ್ಧದ ಔಪಚಾರಿಕ ಪಂದ್ಯದಲ್ಲೂ ರನ್ ಗಳಿಸಲು ವಿಫಲರಾದರು. ಇದರೊಂದಿಗೆ ಸತತ 5ನೇ ಬಾರಿ ಬಾಬರ್ ಬ್ಯಾಟ್ ರನ್ ಗಳಿಸದೆ ಮಂಕಾಗಿತ್ತು. ಶ್ರೀಲಂಕಾ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಕೇವಲ 30 ರನ್ ಗಳಿಸಲು 29 ಎಸೆತಗಳನ್ನು ಎದುರಿಸಬೇಕಾಯಿತು. ಈ ವೇಳೆ ಅವರ ಬ್ಯಾಟ್‌ನಿಂದ ಕೇವಲ 2 ಬೌಂಡರಿಗಳಷ್ಟೇ ಸಿಡಿದವು.

ಪಂದ್ಯಾವಳಿಯ ಬಾಬರ್ ಬೆಸ್ಟ್ ಇನ್ನಿಂಗ್ಸ್

ಬಾಬರ್ ಅವರ ಇನ್ನಿಂಗ್ಸ್‌ನಲ್ಲಿ ಒಮ್ಮೆಯೂ ಚೆಂಡು ಬೌಂಡರಿ ದಾಟಲು ಸಾಧ್ಯವಾಗಲಿಲ್ಲ. ಅಲ್ಲದೆ ಬಾಬರ್​ಗೆ ಈ ಪಂದ್ಯಾವಳಿಯಲ್ಲಿ ಇನ್ನೂ ಒಂದೇ ಒಂದು ಸಿಕ್ಸರ್ ಹೊಡೆಯಲು ಸಾಧ್ಯವಾಗಿಲ್ಲ. ಬಾಬರ್ ಅವರ ಈ ಪ್ರದರ್ಶನ ಅಭಿಮಾನಿಗಳು ಕೂಡ ಅಚ್ಚರಿಯನ್ನುಂಟು ಮಾಡಿದೆ. ಶ್ರೀಲಂಕಾ ವಿರುದ್ಧದ ಅವರ ಇನ್ನಿಂಗ್ಸ್ ಈ ಪಂದ್ಯಾವಳಿಯಲ್ಲಿ ಅವರ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ. ಇದಕ್ಕೂ ಮುನ್ನ ಭಾರತ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ 10 ರನ್​ಗಳಿಸಿದರೆ, ಹಾಂಕಾಂಗ್ ವಿರುದ್ಧ ಕೇವಲ 9 ರನ್ ಗಳಿಸಿದ್ದರು. ಬಳಿಕ ಸೂಪರ್ 4 ರಲ್ಲಿ ಭಾರತದ ವಿರುದ್ಧ 14 ರನ್ ಗಳಿಸಿದರೆ, ಅಫ್ಘಾನಿಸ್ತಾನ ವಿರುದ್ಧ ಶೂನ್ಯಕ್ಕೆ ಔಟಾಗಿದ್ದರು. ಹೀಗಾಗಿ ಏಷ್ಯಾಕಪ್​ನಲ್ಲಿ ರನ್ ಗಳಿಸಲು ಹೆಣಗಾಡುತ್ತಿರುವ ಪಾಕಿಸ್ತಾನದ ನಾಯಕ, ಭಾರತದ ವಿರುದ್ಧ 9, ಹಾಂಗ್ ಕಾಂಗ್ ವಿರುದ್ಧ 8, ಸೂಪರ್ 4 ರಲ್ಲಿ ಭಾರತದ ವಿರುದ್ಧ 10, ಅಫ್ಘಾನಿಸ್ತಾನ ವಿರುದ್ಧ 1 ಎಸೆತ ಮತ್ತು ಶ್ರೀಲಂಕಾ ವಿರುದ್ಧ 29 ಎಸೆತಗಳಲ್ಲಿ 30 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಅಂದರೆ ಇಡೀ ಪಂದ್ಯಾವಳಿಯಲ್ಲಿ ಒಟ್ಟಾಗಿ ಬಾಬರ್ 57 ಎಸೆತಗಳನ್ನು ಎದುರಿಸಿದ್ದು, ಇದರಲ್ಲಿ ಒಂದೇ ಒಂದು ಸಿಕ್ಸರ್‌ ಇಲ್ಲ.

ಏಕಾಂಗಿಯಾದ ಪಾಕಿಸ್ತಾನದ ನಾಯಕ

ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಸೂಪರ್ 4 ಪಂದ್ಯದ ಕುರಿತು ಮಾತನಾಡುವುದಾದರೆ, ಈ ಪಂದ್ಯವು ಎರಡೂ ತಂಡಗಳಿಗೂ ಫೈನಲ್‌ಗೆ ತಯಾರಿ ನಡೆಸಲು ಸೂಕ್ತ ವೇದಿಕೆಯಾಗಿತ್ತು. ಈ ಪಂದ್ಯದಲ್ಲಿ ಶ್ರೀಲಂಕಾ 18 ಎಸೆತಗಳು ಬಾಕಿ ಇರುವಂತೆಯೆ 5 ವಿಕೆಟ್ ನಷ್ಟಕ್ಕೆ 122 ರನ್‌ಗಳ ಗುರಿಯನ್ನು ಸಾಧಿಸಿತು. ಇದೀಗ ಏಷ್ಯಾಕಪ್‌ನ ಫೈನಲ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಶುಕ್ರವಾರ ಶ್ರೀಲಂಕಾ ಬೌಲರ್‌ಗಳ ಮುಂದೆ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಅಸಹಾಯಕರಾಗಿ ಕಾಣುತ್ತಿದ್ದರು. ಅಲ್ಲದೆ ಇಡೀ ತಂಡವು ಸಂಪೂರ್ಣ ಓವರ್‌ಗಳನ್ನು ಆಡಲು ಸಹ ಸಾಧ್ಯವಾಗಲಿಲ್ಲ. ಪಾಕಿಸ್ತಾನ ತಂಡವನ್ನು 19.1 ಓವರ್‌ಗಳಲ್ಲಿ 121 ರನ್‌ಗಳಿಗೆ ಲಂಕಾ ಬೌಲರ್​ಗಳು ಹೆಡೆಮುರಿ ಕಟ್ಟಿದರು. ಈ ಪಂದ್ಯದಲ್ಲಿ ನಾಯಕ ಬಾಬರ್ ಪಾಕ್ ಪರ ಅತಿ ಹೆಚ್ಚು ರನ್ ಗಳಿಸಿದರೆ, ಇವರಲ್ಲದೆ ಮೊಹಮ್ಮದ್ ನವಾಜ್ 26 ರನ್ ಗಳಿಸಿದರು.

Published On - 4:16 pm, Sat, 10 September 22

ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ