2 ತಿಂಗಳಲ್ಲಿ ಗುರುತೇ ಸಿಗದಷ್ಟು ಸಣ್ಣ ಆದ ಸರ್ಫರಾಜ್ ಖಾನ್: ಫೋಟೋ ನೋಡಿ
Surfaraz Khan's 17kg Weight Loss: 2024ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಯುವ ಕ್ರಿಕೆಟಿಗ ಸರ್ಫರಾಜ್ ಖಾನ್ಗೆ ಭಾರತ ತಂಡದಲ್ಲಿ ಇದುವರೆಗೆ ಖಾಯಂ ಜಾಗ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಅವರ ಫಿಟ್ನೇಸ್ ಸಮಸ್ಯೆ ಎನ್ನಬಹುದು. ಇದೀಗ ತಮ್ಮ ಫಿಟ್ನೆಸ್ ಮೇಲೆ ಗಮನ ಹರಿಸಿರುವ ಸರ್ಫರಾಜ್ 17 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

2024 ರಲ್ಲಿಯೇ ಇಂಗ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಭಾರತದ ಯುವ ಕ್ರಿಕೆಟಿಗ ಸರ್ಫರಾಜ್ ಖಾನ್ (Surfaraz Khan) ಅವರಿಗೆ ಇನ್ನೂ ವಿದೇಶಿ ನೆಲದಲ್ಲಿ ಟೆಸ್ಟ್ ಆಡಲು ಅವಕಾಶ ಸಿಕ್ಕಿಲ್ಲ. ಭಾರತ ಎ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸ ಮಾಡಿದ್ದ ಸರ್ಫರಾಜ್ಗೆ ಭಾರತ ತಂಡದಲ್ಲಿ ಅವಕಾಶ ಸಿಗಲಿಲ್ಲ. ಈ ಆಘಾತದ ನಡುವೆಯೇ ಭಾರತಕ್ಕೆ ಬಂದಿದ್ದ ಸರ್ಫರಾಜ್ ಖಾನ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ತಮ್ಮ ವೃತ್ತಿಜೀವನಕ್ಕೆ ಹೊಸ ಆರಂಭ ನೀಡುವತ್ತ ಹೆಜ್ಜೆಹಾಕಿದ್ದಾರೆ. ತಂಡಕ್ಕೆ ತಮ್ಮ ಆಯ್ಕೆಗೆ ಅಡ್ಡಿಯಾಗಿದ್ದ ಫಿಟ್ನೆಸ್ ಮೇಲೆ ಸಾಕಷ್ಟು ಕೆಲಸ ಮಾಡಿರುವ ಸರ್ಫರಾಜ್ ಬರೋಬ್ಬರಿ 15 ಕೆಜಿ ತೂಕ ಇಳಿಸಿಕೊಂಡಿದ್ದು, ಗುರುತೇ ಸಿಗದಷ್ಟು ಬದಲಾಗಿದ್ದಾರೆ.
17 ಕೆಜಿ ತೂಕ ಇಳಿಸಿಕೊಂಡ ಸರ್ಫರಾಜ್
ಮೇಲೆ ಹೇಳಿದಂತೆ ಸರ್ಫರಾಜ್ ಖಾನ್ ಅವರ ಫಿಟ್ನೆಸ್ ಯಾವಾಗಲೂ ಪ್ರಶ್ನಾರ್ಹವಾಗಿದೆ. ಆದರೆ ಈಗ ಅವರು ತಮ್ಮ ದೇಹದಲ್ಲಿ ಅಚ್ಚರಿಯ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯದ ನಂತರ ಧೃತಿಗೆಡದ ಸರ್ಫರಾಜ್, ತಮ್ಮ ಫಿಟ್ನೆಸ್ ಮೇಲೆ ಕೆಲಸ ಮಾಡಿದ್ದಾರೆ. ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಈಗ ಎಲ್ಲರ ಗಮನ ಸೆಳೆದಿದೆ. ವರದಿಗಳ ಪ್ರಕಾರ, ಸರ್ಫರಾಜ್ ಖಾನ್ ಕೇವಲ ಎರಡು ತಿಂಗಳಲ್ಲಿ 17 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ಸರ್ಫರಾಜ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ, ಈ ಫೋಟೋದಲ್ಲಿ ಅವರು ಜಿಮ್‌ನಲ್ಲಿ ಕಾಣಿಸಿಕೊಂಡಿದ್ದು, ತುಂಬಾ ಸ್ಲಿಮ್ ಆಗಿ ಕಾಣುತ್ತಿದ್ದಾರೆ. ತಮ್ಮ ಅಧಿಕ ತೂಕಕ್ಕಾಗಿ ಟ್ರೋಲ್ ಮತ್ತು ಟೀಕೆಗೆ ಒಳಗಾಗಿದ್ದ ಸರ್ಫರಾಜ್ ಈಗ ಸಾಕಷ್ಟು ಫಿಟ್ ಆಗಿ ಕಾಣುತ್ತಿದ್ದಾರೆ, ಇದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಫಿಟ್ನೆಸ್‌ನಲ್ಲಿ ಸರ್ಫರಾಜ್ ಖಾನ್ ವಿರಾಟ್ ಕೊಹ್ಲಿಗೆ ಸ್ಪರ್ಧೆ ನೀಡಿದ್ದಾರೆ ಎಂದು ಅಭಿಮಾನಿಗಳು ಹೇಳುತಿದ್ದಾರೆ.
IND vs NZ: ಟೀಂ ಇಂಡಿಯಾದಲ್ಲಿ ಸರ್ಫರಾಜ್ಗೆ ಅನ್ಯಾಯ? ಅಸಮಾಧಾನಗೊಂಡ ಮಾಜಿ ಕ್ರಿಕೆಟಿಗ
ಇಂಗ್ಲೆಂಡ್‌ನಲ್ಲಿ ಮಿಂಚಿದ್ದ ಸರ್ಫರಾಜ್
ಸರ್ಫರಾಜ್ ಖಾನ್, ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಎ ಪರ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಮೊದಲ ಪಂದ್ಯದಲ್ಲಿ 92 ರನ್ ಬಾರಿಸಿದ್ದರಯ. ಇದಲ್ಲದೆ, ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ, ಅವರು 76 ಎಸೆತಗಳಲ್ಲಿ ಅಬ್ಬರದ 101 ರನ್ ಬಾರಿಸುವ ಮೂಲಕ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಸಾಬೀತುಪಡಿಸಿದ್ದರು. ಆದಾಗ್ಯೂ ಸರ್ಫರಾಜ್ಗೆ ಭಾರತ ತಂಡದಲ್ಲಿ ಅವಕಾಶ ಸಿಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
