AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND Vs SA: ಗುವಾಹಟಿಯಲ್ಲಿ ಸೂರ್ಯ ಸ್ಫೋಟ; ಕೇವಲ 573 ಎಸೆತಗಳಲ್ಲಿ 1000 ರನ್ ಪೂರ್ಣ..!

IND Vs SA: ಸೂರ್ಯ ಕೇವಲ 573 ಎಸೆತಗಳಲ್ಲಿ 174 ಸ್ಟ್ರೈಕ್ ರೇಟ್‌ನೊಂದಿಗೆ 1000 ರನ್ ಪೂರೈಸಿದರು. 604 ಎಸೆತಗಳಲ್ಲಿ (166 ಸ್ಟ್ರೈಕ್ ರೇಟ್) 1000 ರನ್ ಗಳಿಸಿದ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ದಾಖಲೆಯನ್ನು ಭಾರತದ ಸ್ಟಾರ್ ಮುರಿದರು.

TV9 Web
| Edited By: |

Updated on:Oct 02, 2022 | 10:02 PM

Share
ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ತನ್ನ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯಗೊಂಡಿರುವ ಆತಂಕದಲ್ಲಿದೆ. ಆದರೆ ಭಾರತ ತಂಡ ಬೌಲಿಂಗ್‌ನಲ್ಲಿ ಸ್ವಲ್ಪ ದುರ್ಬಲವಾಗಿದ್ದರೂ ಬ್ಯಾಟಿಂಗ್ ವಿಭಾಗದಲ್ಲಂತ್ತೂ ಬಲಿಷ್ಠವಾಗಿ ಕಾಣುತ್ತಿದೆ. ಅದರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತೊಮ್ಮೆ ಅಬ್ಬರಿಸಿದ ಸೂರ್ಯಕುಮಾರ್ ಯಾದವ್ ಅದ್ಭುತ ದಾಖಲೆಯೊಂದನ್ನು ಮಾಡಿದ್ದಾರೆ.

1 / 6
ತಿರುವನಂತಪುರದಲ್ಲಿ ನಡೆದ ಮೊದಲ ಟಿ20ಯಲ್ಲಿ ಅಬ್ಬರದ ಅರ್ಧಶತಕ ಸಿಡಿಸಿದ್ದ ಸೂರ್ಯ, ಗುವಾಹಟಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಅಕ್ಷರಶಃ ರೌದ್ರರೂಪ ತಾಳಿದರು. ತನ್ನ ಇನ್ನಿಂಗ್ಸ್​ನಲ್ಲಿ ಕೇವಲ 22 ಎಸೆತಗಳನ್ನು ಎದುರಿಸಿದ ಸೂರ್ಯ, 5 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಿತ 61 ರನ್‌ ಚಚ್ಚಿದ್ದಾರೆ.

2 / 6
ಈ ಇನ್ನಿಂಗ್ಸ್‌ ಮೂಲಕ ಸೂರ್ಯ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಿ ದಾಖಲೆ ಕೂಡ ನಿರ್ಮಿಸಿದರು. ಅದರ ಜೊತೆಗೆ ಕಡಿಮೆ ಎಸೆತಗಳಲ್ಲಿ ಈ ದಾಖಲೆ ಮಾಡಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆಗೂ ಪಾತ್ರರಾದರು .

3 / 6
ಸೂರ್ಯ ಕೇವಲ 573 ಎಸೆತಗಳಲ್ಲಿ 174 ಸ್ಟ್ರೈಕ್ ರೇಟ್‌ನೊಂದಿಗೆ 1000 ರನ್ ಪೂರೈಸಿದರು. 604 ಎಸೆತಗಳಲ್ಲಿ (166 ಸ್ಟ್ರೈಕ್ ರೇಟ್) 1000 ರನ್ ಗಳಿಸಿದ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ದಾಖಲೆಯನ್ನು ಭಾರತದ ಸ್ಟಾರ್ ಮುರಿದರು.

4 / 6
ಇದು ಮಾತ್ರವಲ್ಲದೆ, ಸೂರ್ಯ ತನ್ನ ಇನ್ನಿಂಗ್ಸ್‌ನಲ್ಲಿ ಕೇವಲ 18 ಎಸೆತಗಳಲ್ಲಿ ತನ್ನ ಅರ್ಧಶತಕವನ್ನು ಪೂರೈಸಿದರು. ಈ ಮೂಲಕ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಎರಡನೇ ಟೀಂ ಇಂಡಿಯಾ ಕ್ರಿಕೆಟರ್ ಎನಿಸಿಕೊಂಡರು. ಈ ಹಿಂದೆ ರಾಹುಲ್ ಕೂಡ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

5 / 6
ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯ ನಡೆಯಲಿದೆ. ಭಾರತ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದ್ದು, ಮೂರನೇ ಟಿ20ಯಲ್ಲಿ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ. ಮೂರನೇ ಟಿ20ಯಲ್ಲಿ ಭಾರತ ತಂಡದ ಆಡುವ ಇಲೆವೆನ್‌ನಲ್ಲಿ ಪ್ರಮುಖ ಬದಲಾವಣೆಯಾಗಲಿದೆ ಎಂಬ ವರದಿಗಳಿವೆ. ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಇಂದೋರ್ ಟಿ20ಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.

6 / 6

Published On - 10:02 pm, Sun, 2 October 22