Tilak Varma: ಮೊದಲ ಟೆಸ್ಟ್ ಆರಂಭವಾಗುತ್ತಿದ್ದಂತೆ ಕೆರಿಬಿಯನ್ ನಾಡಿಗೆ ಬಂದ ಸೂರ್ಯ, ತಿಲಕ್
IND vs WI ODI: ಸೂರ್ಯಕುಮಾರ್ ಯಾದವ್, ಉಮ್ರಾನ್ ಮಲಿಕ್, ಕುಲ್ದೀಪ್ ಯಾದವ್ ಹಾಗೂ ತಿಲಕ್ ವರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ವೈಟ್ ಬಾಲ್ ಪಂದ್ಯಕ್ಕಾಗಿ ಇಸ್ಲೆಂಡ್ ರಾಷ್ಟ್ರಕ್ಕೆ ತಲುಪಿದ್ದಾರೆ. ಸೂರ್ಯ ಹಾಗೂ ಕುಲ್ದೀಪ್ ಜೊತೆಯಾಗಿ ವಿಮಾನದಲ್ಲಿ ಕುಳಿತಿರುವ ಫೋಟೋ ಹಂಚಿಕೊಂಡಿದ್ದಾರೆ.
ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಣ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಿದೆ. ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ಶುರುವಾಗಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಮೊದಲ ದಿನದ ಯಶಸ್ಸು ಸಾಧಿಸಿದೆ. ಟಾಸ್ ಸೋತರು ಭರ್ಜರಿ ಬ್ಯಾಟಿಂಗ್ ನಡೆಸಿದ ರೋಹಿತ್ (Rohit Sharma) ಪಡೆ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 288 ರನ್ ಕಲೆಹಾಕಿದೆ. ಇದರ ನಡುವೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಾಗಿ ಟೆಸ್ಟ್ ಸರಣಿಯಲ್ಲಿ ಇಲ್ಲದ ಕೆಲ ಭಾರತೀಯ ಆಟಗಾರರು ಕೆರಿಬಿಯನ್ ನಾಡಿಗೆ ತಲುಪಿದ್ದಾರೆ.
ಸೂರ್ಯಕುಮಾರ್ ಯಾದವ್, ಉಮ್ರಾನ್ ಮಲಿಕ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ವೈಟ್ ಬಾಲ್ ಪಂದ್ಯಕ್ಕಾಗಿ ಇಸ್ಲೆಂಡ್ ರಾಷ್ಟ್ರಕ್ಕೆ ತಲುಪಿದ್ದಾರೆ. ಸೂರ್ಯ ಹಾಗೂ ಕುಲ್ದೀಪ್ ಜೊತೆಯಾಗಿ ವಿಮಾನದಲ್ಲಿ ಕುಳಿತಿರುವ ಫೋಟೋ ಹಂಚಿಕೊಂಡಿದ್ದಾರೆ. ಉಮ್ರಾನ್ ಮಲಿಕ್ ಕೂಡ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ತಿಲಕ್ ವರ್ಮಾ ಹೈದರಾಬಾದ್ನಿಂದ ಹೊರುಡುವ ಫೋಟೋ ಹಂಚಿಕೊಂಡಿದ್ದು, ಕುಟುಂಬ ಸದಸ್ಯರ ಜೊತೆ ಕಾಣಿಸಿಕೊಂಡಿದ್ದಾರೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿ ಜುಲೈ 27 ರಿಂದ ಆರಂಭವಾಗಲಿದೆ. ಒಟ್ಟು ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇದಾದ ಬಳಿಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಒಂದು ವಾರ ಮುಂಚಿತವಾಗಿಯೆ ಸೂರ್ಯ, ಕುಲ್ದೀಪ್ ಸೇರಿದಂತೆ ಕೆಲ ಪ್ಲೇಯರ್ಸ್ ಕೆರಿಬಿಯನ್ ನಾಡಿಗೆ ಬಂದಿದ್ದು, ಅಲ್ಲಿನ ಹವಾಮಾನಕ್ಕೆ ಹೊಂದಿಕೊಂಡು ಅಭ್ಯಾಸ ಶುರು ಮಾಡಲಿದ್ದಾರೆ.
IND vs WI: ಯಶಸ್ವಿ-ರೋಹಿತ್ ಭರ್ಜರಿ ಬ್ಯಾಟಿಂಗ್: ಹೊಸ ದಾಖಲೆ ನಿರ್ಮಾಣ
ಮೂರು ಪಂದ್ಯಗಳ ಏಕದಿನ ಸರಣಿ:
- ಮೊದಲ ಏಕದಿನ ಜುಲೈ 27 – ಕೆನ್ಸಿಂಗ್ಟನ್ ಓವಲ್, ಬಾರ್ಬಡಸ್
- ದ್ವಿತೀಯ ಏಕದಿನ ಜುಲೈ 29 – ಕೆನ್ಸಿಂಗ್ಟನ್ ಓವಲ್, ಬಾರ್ಬಡಸ್
- ತೃತೀಯ ಏಕದಿನ ಆಗಸ್ಟ್ 1 – ಬ್ರಿಯನ್ ಲಾರಾ ಸ್ಟೇಡಿಯಂ, ಟ್ರಿನಿಡಾಡ್
ಐದು ಪಂದ್ಯಗಳ ಟಿ20 ಸರಣಿ:
- ಮೊದಲ ಟಿ20 ಆಗಸ್ಟ್ 3 – ಬ್ರಿಯನ್ ಲಾರಾ ಸ್ಟೇಡಿಯಂ, ಟ್ರಿನಿಡಾಟ್
- ದ್ವಿತೀಯ ಟಿ20 ಆಗಸ್ಟ್ 6 – ಪ್ರೊವಿಡೆನ್ಸ್ ಸ್ಟೇಡಿಯಂ, ಗಯಾನ
- ತೃತೀಯ ಟಿ20 ಆಗಸ್ಟ್ 8 – ಪ್ರೊವಿಡೆನ್ಸ್ ಸ್ಟೇಡಿಯಂ, ಗಯಾನ
- ನಾಲ್ಕನೇ ಟಿ20 ಆಗಸ್ಟ್ 12 – ಸೆಂಟ್ರಲ್ ಬ್ರೊವರ್ಡ್ ಪಾರ್ಕ್ ಸ್ಟೇಡಿಯಂ, ಫ್ಲೋರಿಡಾ
- ಐದನೇ ಟಿ20 ಆಗಸ್ಟ್ 13 – ಸೆಂಟ್ರಲ್ ಬ್ರೊವರ್ಡ್ ಪಾರ್ಕ್ ಸ್ಟೇಡಿಯಂ, ಫ್ಲೋರಿಡಾ
ಭಾರತ ಟಿ20 ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ ( ನಾಯಕ), ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್.
ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ಉಮ್ರಾನ್ ಮಲಿಕ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ