ಧರ್ಮ ಹೇಳಿದಂತೆ ಬದುಕಲು 18ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಪಾಕ್ ತಂಡದ ಸ್ಫೋಟಕ ಬ್ಯಾಟರ್​..!

Ayesha Naseem: ಪಾಕಿಸ್ತಾನದ ಈ ಸ್ಫೋಟಕ ಬ್ಯಾಟರ್ ಇಸ್ಲಾಂ ಧರ್ಮದ ಪ್ರಕಾರ ತನ್ನ ಜೀವನವನ್ನು ನಡೆಸಲು ಬಯಸಿದ್ದರಿಂದ ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಧರ್ಮ ಹೇಳಿದಂತೆ ಬದುಕಲು 18ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಪಾಕ್ ತಂಡದ ಸ್ಫೋಟಕ ಬ್ಯಾಟರ್​..!
ಆಯೇಶಾ ನಸೀಮ್
Follow us
ಪೃಥ್ವಿಶಂಕರ
|

Updated on:Jul 21, 2023 | 6:47 AM

ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಪಾಕ್ ಮಹಿಳಾ ತಂಡದ (Pakistan women’s cricket) ಸ್ಫೋಟಕ ಬ್ಯಾಟರ್ 18 ವರ್ಷದ ಆಯೇಶಾ ನಸೀಮ್ (Ayesha Naseem) ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಇನ್ನು ಮುಂದೆ ಇಸ್ಲಾಂ (Islam) ಧರ್ಮದ ಪ್ರಕಾರ ತನ್ನ ಜೀವನವನ್ನು ನಡೆಸಲು ಕ್ರಿಕೆಟ್ ತ್ಯಜಿಸುವುದಾಗಿ ಆಯೇಶಾ ಹೇಳಿಕೆ ನೀಡಿರುವುದು ಇನ್ನಷ್ಟು ಅಚ್ಚರಿಯನ್ನುಂಟು ಮಾಡಿದೆ. ವಾಸ್ತವವಾಗಿ ಈ ವರ್ಷದ ಆರಂಭದಲ್ಲಿ ಟೀಂ ಇಂಡಿಯಾ (Team India) ವಿರುದ್ಧ ಹಾಗೂ ಅದಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ಅತಿ ಉದ್ಧದ ಸಿಕ್ಸರ್ ಬಾರಿಸಿ ಮಹಿಳಾ ಕ್ರಿಕೆಟ್​ನಲ್ಲಿ ಸಂಚಲನ ಮೂಡಿಸಿದ್ದ ಆಯೇಶಾ ಅವರ ಬ್ಯಾಟಿಂಗ್​ಗೆ ಪಾಕಿಸ್ತಾನದ ಮಾಜಿ ಅನುಭವಿ ಆಟಗಾರ ವಾಸಿಂ ಅಕ್ರಮ್ (Wasim Akram) ಕೂಡ ಫಿದಾ ಆಗಿದ್ದರು. ಆಕೆಯನ್ನು ಪಾಕಿಸ್ತಾನ ಮಹಿಳಾ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ ಎಂದು ಹೇಳಲಾಗುತ್ತಿತ್ತು.

ಆಯೇಶಾ ತನ್ನ ನಿರ್ಧಾರದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೂ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಈ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಆಡಿದ್ದ ಆಯೇಶಾ, ಭಾರತದ ವಿರುದ್ಧದ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ ಅಜೇಯ 43 ರನ್ ಸಿಡಿಸಿದ್ದರು. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ 20 ಎಸೆತಗಳಲ್ಲಿ 4ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 24 ರನ್ ಕಲೆಹಾಕಿದ್ದರು.

ಏಷ್ಯಾಕಪ್, ವಿಶ್ವಕಪ್​ಗೂ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಇಬ್ಬರು ಪಾಕ್ ಕ್ರಿಕೆಟಿಗರು..!

ಇಸ್ಲಾಂಗಾಗಿ ವೃತ್ತಿ ಬದುಕಿಗೆ ವಿದಾಯ

ಪಾಕಿಸ್ತಾನದ ಈ ಸ್ಫೋಟಕ ಬ್ಯಾಟರ್ ಇಸ್ಲಾಂ ಧರ್ಮದ ಪ್ರಕಾರ ತನ್ನ ಜೀವನವನ್ನು ನಡೆಸಲು ಬಯಸಿದ್ದರಿಂದ ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಾನು ಇಸ್ಲಾಂ ಧರ್ಮದ ಪ್ರಕಾರ ತನ್ನ ಜೀವನವನ್ನು ನಡೆಸಲು ಬಯಸುತ್ತಿರುವುದರಿಂದ ಕ್ರಿಕೆಟ್ ತ್ಯಜಿಸುತ್ತಿದ್ದೇನೆ ಎಂದು ಆಯೇಶಾ, ಪಾಕಿಸ್ತಾನ ಮಂಡಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಆಯೇಶಾ ವೃತ್ತಿಬದುಕು ಹೀಗಿತ್ತು

ಸುಮಾರು 3 ವರ್ಷಗಳ ಹಿಂದೆ 2020 ರಲ್ಲಿ ಥಾಯ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಪರ ತಮ್ಮ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯವನ್ನಾಡಿದ ಆಯೇಶಾ, ತಂಡದ ಪರ ಒಟ್ಟು 30 ಟಿ20 ಪಂದ್ಯಗಳಲ್ಲಿ 369 ರನ್ ಮತ್ತು 4 ಏಕದಿನ ಪಂದ್ಯಗಳಲ್ಲಿ 33 ರನ್ ಕಲೆಹಾಕಿದ್ದಾರೆ . ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಅಜೇಯ 45 ರನ್ ಬಾರಿಸಿರುವುದು ಆಯೇಶಾ ಅವರ ವೃತ್ತಿಜೀವನದ ಅತಿದೊಡ್ಡ ಇನ್ನಿಂಗ್ಸ್ ಆಗಿದೆ. ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಡಿದ ಅಜೇಯ 43 ರನ್‌ಗಳ ಇನ್ನಿಂಗ್ಸ್ ಅವರ ವೃತ್ತಿಜೀವನದ ಎರಡನೇ ದೊಡ್ಡ ಇನ್ನಿಂಗ್ಸ್ ಆಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:46 am, Fri, 21 July 23

ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್