Suryakumar Yadav: ಸೂರ್ಯಕುಮಾರ್ ಸಿಡಿಸಿದ ಸ್ಫೋಟಕ ಸಿಕ್ಸ್​ಗೆ ಅಫ್ಘಾನ್ ಡಗೌಟ್​ನಲ್ಲಿದ್ದ ಫ್ರಿಡ್ಜ್ ಪುಡಿಪುಡಿ: ವಿಡಿಯೋ

| Updated By: Vinay Bhat

Updated on: Sep 09, 2022 | 10:39 AM

India vs Afghanistan, Asia Cup 2022: ಏಷ್ಯಾಕಪ್​ನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಬೇಗನೆ ನಿರ್ಗಮಿಸಿದರು. ಆದರೆ, ಇವರು ಔಟಾಗುವುದಕ್ಕೂ ಮುನ್ನ ಸಿಡಿಸಿದ ಒಂದು ಸಿಕ್ಸ್​ನ ವಿಡಿಯೋ ವೈರಲ್ ಆಗುತ್ತಿದೆ.

Suryakumar Yadav: ಸೂರ್ಯಕುಮಾರ್ ಸಿಡಿಸಿದ ಸ್ಫೋಟಕ ಸಿಕ್ಸ್​ಗೆ ಅಫ್ಘಾನ್ ಡಗೌಟ್​ನಲ್ಲಿದ್ದ ಫ್ರಿಡ್ಜ್ ಪುಡಿಪುಡಿ: ವಿಡಿಯೋ
Suryakumar Yadav Six
Follow us on

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರವಾರ ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ಏಷ್ಯಾಕಪ್ 2022 ರಲ್ಲಿ ಕೊನೆಯ ಬಾರಿ ಮುಖಾಮುಖಿ ಆಗುವ ಮೂಲಕ ಟೂರ್ನಿಗೆ ವಿದಾಯ ಹೇಳಿದೆ. ಕೇವಲ ಒನ್ ಸೈಡ್ ಆಗಿದ್ದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 101 ರನ್​ಗಳ ಅಮೋಘ ಗೆಲುವು ಸಾಧಿಸಿ ಮೆರೆಯಿತು. ಇಡೀ ಪಂದ್ಯದ ಮುಖ್ಯ ಹೈಲೇಟ್ ವಿರಾಟ್ ಕೊಹ್ಲಿ (Virat Kohli) ಶತಕ. ಅದು 1021 ದಿನಗಳ ಬಳಿಕ ಮೂಡಿಬಂದ ಸೆಂಚುರಿಯಾಗಿತ್ತು. ಇವರಿಗೆ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಉತ್ತಮ ಸಾಥ್ ನೀಡಿದರು. ಇದರ ನಡುವೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಸೂರ್ಯಕುಮಾರ್ ಯಾದವ್ (Suryakumar Yadav) ಬೇಗನೆ ನಿರ್ಗಮಿಸಿದರು. ಆದರೆ, ಇವರು ಔಟಾಗುವುದಕ್ಕೂ ಮುನ್ನ ಸಿಡಿಸಿದ ಒಂದು ಸಿಕ್ಸ್​ನ ವಿಡಿಯೋ ಈಗ ಭರ್ಜರಿ ವೈರಲ್ ಆಗುತ್ತಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಸ್ಫೋಟಕ ಆರಂಭ ಪಡೆದುಕೊಂಡಿತು. ರೋಹಿತ್ ಶರ್ಮಾ ವಿಶ್ರಾಂತಿ ಪಡೆದುಕೊಂಡಿದ್ದ ಕಾರಣ ನಾಯಕನಾಗಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದರು. ಕೊಹ್ಲಿ ಪವರ್ ಪ್ಲೇನಲ್ಲಿ ನಿಧಾನಗತಿಯಲ್ಲಿ ಎಚ್ಚರಿಕೆಯಿಂದ ಆಟವಾಡಿದರೆ ರಾಹುಲ್ ಬೊಂಬಾಟ್ ಬ್ಯಾಟಿಂಗ್ ನಡೆಸಿದರು. ಆಡಲೇ ಬೇಕಾದ ಪಂದ್ಯದಲ್ಲಿ ಇವರು 41 ಎಸೆತಗಳಲ್ಲಿ 61 ರನ್ ಬಾರಿಸಿದರು. ರಾಹುಲ್ ನಿರ್ಗಮನದ ಬಳಿಕ ಸೂರ್ಯಕುಮಾರ್ ಯಾದವ್ ಕ್ರೀಸ್​ಗೆ ಬಂದರು.

ಇದನ್ನೂ ಓದಿ
Virat Kohli: ಕೊಹ್ಲಿಯ ಶತಕದ ವೈಭವ: ವಿರಾಟ ಪ್ರದರ್ಶನದ ರೋಚಕ ಫೋಟೋಗಳು ಇಲ್ಲಿದೆ ನೋಡಿ
Virat Kohli: ವಿರಾಟ್ ಕೊಹ್ಲಿ ಶತಕ ಸಿಡಿಸಿ ಪೆವಿಲಿಯನ್​ಗೆ ಬಂದಾಗ ರೋಹಿತ್ ಶರ್ಮಾ ಏನು ಮಾಡಿದ್ರು ನೋಡಿ
Neeraj Chopra: ಡೈಮಂಡ್ ಲೀಗ್​ನಲ್ಲಿ ಇತಿಹಾಸ ನಿರ್ಮಿಸಿದ ಗೋಲ್ಡನ್ ಬಾಯ್: ನೀರಜ್ ಚೋಪ್ರಾ ಐತಿಹಾಸಿಕ ಸಾಧನೆ
IND vs AFG: ಕೊಹ್ಲಿಯ ಶತಕ, ಭುವಿಯ ಮಾರಕ ದಾಳಿ; ಗೆಲುವಿನೊಂದಿಗೆ ಏಷ್ಯಾಕಪ್ ಪಯಣ ಮುಗಿಸಿದ ಭಾರತ

ಅಚ್ಚರಿ ಎಂದರೆ ಸೂರ್ಯಕುಮಾರ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ತಮ್ಮ ವಿಭಿನ್ನ ಶಾಟ್ ಮೂಲಕ ಚೆಂಡನ್ನು ಸಿಕ್ಸ್​ಗೆ ಅಟ್ಟಿದರು. 13ನೇ ಓವರ್​ನ ಫರೀದ್ ಅಹ್ಮದ್ ಬೌಲಿಂಗ್​ನ 5ನೇ ಎಸೆತದಲ್ಲಿ ಮತ್ತು ತಾವು ಎದುರಿಸಿದ ಮೊದಲ ಎಸೆತದಲ್ಲೇ ಫೈನ್ ಲೆಗ್ ಮೂಲಕ ಸಿಕ್ಸ್ ಸಿಡಿಸಿದರು. ಬಾನೆತ್ತರಕ್ಕೆ ಸಾಗಿದ ಚೆಂಡು ನೇರವಾಗಿ ಅಫ್ಘಾನಿಸ್ತಾನ ಡಗೌಟ್​ ಕಡೆ ಸಾಗಿ ಅವರ ಫ್ರಿಡ್ಜ್​ಗೆ ಬಡಿದಿದೆ. ಚೆಂಡು ಬಿದ್ದ ರಭಸಕ್ಕೆ ಫ್ರಿಡ್ಜ್​ನ ಮೇಲಿನ ಗಾಜು ಪುಡಿಪುಡಿ ಆಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮುಂದಿನ ಎಸೆತದಲ್ಲಿ ಸೂರ್ಯ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರು.

 

ನಂತರ ಜೊತೆಯಾದ ರಿಷಭ್ ಪಂತ್ ಹಾಗೂ ವಿರಾಟ್ ಕೊಹ್ಲಿ ಬೊಂಬಾಟ್ ಜೊತೆಯಾಟ ಆಡಿದರು. ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದರೆ ಪಂತ್ ಅತ್ಯುತ್ತಮ ಸಾಥ್ ನೀಡಿದರು. ಕೊಹ್ಲಿ ಶತಕದ ನೆರವಿನಿಂದ 20 ಓವರ್​ಗಳಲ್ಲಿ 2 ವಿಕಕೆಟ್ ನಷ್ಟಕ್ಕೆ 212 ರನ್ ಬಾರಿಸಿತು. ಕೊಹ್ಲಿ 61 ಎಸೆತಗಳಲ್ಲಿ ಅಜೇಯ 122 ರನ್ ಬಾರಿಸಿದರು. ಪಂತ್ ಅಜೇಯ 20 ರನ್ ಗಳಿಸಿದರು.

ಟಾರ್ಗೆಟ್ ಬೆನ್ನಟ್ಟಲು ಬಂದ ಅಫ್ಘಾನಿಸ್ತಾನ ಭುವನೇಶ್ವರ್ ಸ್ವಿಂಗ್ ದಾಳಿಗೆ ನಲುಗಿ ಹೋಯಿತು. 21 ರನ್ ಆಗುವ ಹೊತ್ತಿಗೆ ತಂಡ 6 ವಿಕೆಟ್ ಕಳೆದುಕೊಂಡಿತು. ಇಬ್ರಾಹಿಂ ಝದರ್ನ್ 64 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರಷ್ಟೆ. ಕೊನೆಯಲ್ಲಿ ರಶೀದ್ ಖಾನ್ 15, ಮುಜೀಬ್ ಉರ್ ರೆಹಮಾನ್ 18 ರನ್ ಗಳಿಸಿದರು. ಅಂತಿಮವಾಗಿ ಆಫ್ಘನ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿ ಸೋಲಿಗೆ ಶರಣಾಯಿತು. ಭಾರತ ಪರ ಭುವನೇಶ್ವರ್ 5 ವಿಕೆಟ್ ಕಿತ್ತು ಮಿಂಚಿದರು.

Published On - 10:39 am, Fri, 9 September 22