Dinesh Karthik: 18 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಮೊದಲ ಬಾರಿ ಬೌಲಿಂಗ್ ಮಾಡಿದ ದಿನೇಶ್ ಕಾರ್ತಿಕ್: ವಿಡಿಯೋ
India vs Afghanistan, Asia Cup 2022: ದಿನೇಶ್ ಕಾರ್ತಿಕ್ ತಮ್ಮ 18 ವರ್ಷಗಳ ಕ್ರಿಕೆಟ್ ವೃತ್ತಿ ಜೀವನಲ್ಲಿ ಚೊಚ್ಚಲ ಬಾರಿಗೆ ಬೌಲಿಂಗ್ ಮಾಡಿದ್ದಾರೆ. ಏಷ್ಯಾಕಪ್ ಸೂಪರ್ 4 ಹಂತದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಾರ್ತಿಕ್ 20ನೇ ಓವರ್ ಬೌಲಿಂಗ್ ಮಾಡಿದರು.
ದಿನೇಶ್ ಕಾರ್ತಿಕ್ (Dinesh Karthik) ಅವರು ಸೆಪ್ಟಂಬರ್ 25, 2004 ರಲ್ಲಿ ಇಂಗ್ಲೆಂಡ್ ವಿರುದ್ಧ ವಿಕೆಟ್ ಕೀಪರ್– ಬ್ಯಾಟರ್ ಆಗಿ ಭಾರತ ಪರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಇದೀಗ ತಮ್ಮ 18 ವರ್ಷಗಳ ಕ್ರಿಕೆಟ್ ವೃತ್ತಿ ಜೀವನಲ್ಲಿ ಕಾರ್ತಿಕ್ ಚೊಚ್ಚಲ ಬಾರಿಗೆ ಬೌಲಿಂಗ್ ಮಾಡಿದ್ದಾರೆ. ಏಷ್ಯಾಕಪ್ ಸೂಪರ್ 4 ಹಂತದ ಅಫ್ಘಾನಿಸ್ತಾನ (India vs Afghanistan) ವಿರುದ್ಧದ ಪಂದ್ಯದಲ್ಲಿ ಕಾರ್ತಿಕ್ 20ನೇ ಓವರ್ ಬೌಲಿಂಗ್ ಮಾಡಿದರು. ಈ ಸಂದರ್ಭ ಅಫ್ಘಾನ್ ತಂಡಕ್ಕೆ ಗೆಲ್ಲಲು 6 ಎಸೆತಗಳಲ್ಲಿ 120 ರನ್ಗಳು ಬೇಕಾಗಿದ್ದವು. ಇದು ಅಸಾಧ್ಯವಾದ ಕಾರಣ ನಾಯಕ ಕೆಎಲ್ ರಾಹುಲ್ (KL Rahul) ಅವರು ಕಾರ್ತಿಕ್ಗೆ ಬೌಲಿಂಗ್ ಮಾಡಲು ನೀಡಿದ್ದಾರೆ.
170 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮೊದಲ ಬಾರಿಗೆ ಬೌಲಿಂಗ್ ಮಾಡಿದ ಕಾರ್ತಿಕ್ ಮಾರಕವಾಗಿ ಪರಿಣಮಿಸಲಿಲ್ಲ. ಮೊದಲ ಎಸೆತದಲ್ಲಿ 2 ರನ್ ನೀಡಿದರೆ, ಎರಡನೇ ಎಸೆತದಲ್ಲಿ ಇಬ್ರಾಹೀಂ ಸಿಕ್ಸ್ ಸಿಡಿಸಿದರು. ಮೂರನೇ ಎಸೆತದಲ್ಲೂ ಸಿಕ್ಸ್ ಬಂತು. 4ನೇ ಹಾಗೂ 5ನೇ ಎಸೆತದಲ್ಲಿ 2 ರನ್ ನೀಡಿದರೆ, ಕೊನೆಯ ಎಸೆತ ಡಾಟ್ ಆಯಿತು. ಹೀಗೆ ತಮ್ಮ ಚೊಚ್ಚಲ ಓವರ್ನಲ್ಲಿ 18 ರನ್ ನೀಡಿದರು. ವಿಶೇಷ ಎಂದರೆ ಏಷ್ಯಾಕಪ್ 2022 ರಲ್ಲಿ ಕಾರ್ತಿಕ್ಗೆ ಬ್ಯಾಟಿಂಗ್ ಮಾಡಲು ಸಿಕ್ಕಿದ್ದು ಕೇವಲ ಒಂದು ಬಾಲ್. ಆದರೆ, ಬೌಲಿಂಗ್ನಲ್ಲಿ ಒಂದು ಓವರ್ ಮಾಡಿದರು.
India vs Afghanistan #AsiaCup2022 #DineshKarthik bowling pic.twitter.com/PEo8lxmuaw
— Deepak Dagar (@deepak123dagar) September 8, 2022
Dk bhaiya? OP Last over bowling ?#ViratKohli?#INDvsAFG #DineshKarthik pic.twitter.com/94yfIIIjFd
— THE SRIVASTAVA’s? (@akhouri_akash) September 8, 2022
ಕೊಹ್ಲಿ ಶತಕ ಹೈಲೇಟ್:
ಈ ಬಾರಿಯ ಏಷ್ಯಾಕಪ್ನಲ್ಲಿ ಭಾರತ ಫೈನಲ್ ತಲುಪದೆ ಬೇಗನೆ ನಿರ್ಗಮಿಸಿತು ಎಂಬ ನೋವನ್ನು ಕಮ್ಮಿ ಮಾಡಿದ್ದು ವಿರಾಟ್ ಕೊಹ್ಲಿಯ ಶತಕ. 1021 ದಿನಗಳ ಬಳಿಕ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಕೊನೆಗೂ ಶತಕವೊಂದು ಮೂಡಿಬಂತು. ಅದುಕೂಡ 120 ಎಸೆತಗಳಿರುವ ಟಿ20 ಕ್ರಿಕೆಟ್ ನಲ್ಲಿ ಎಂಬುದು ವಿಶೇಷ. ಆರಂಭಿಕನನಾಗಿ ಕಣಕ್ಕಿಳಿದು ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿದ ಕೊಹ್ಲಿ ಸೆಟಲ್ ಆದ ಮೇಲೆ ತಮ್ಮ ವಿರಾಟ್ ರೂಪ ಪ್ರದರ್ಶಿಸಿದರು. ಕೇವಲ 61 ಎಸೆತಗಳಲ್ಲಿ 12 ಬೌಂಡರಿ, 6 ಅಮೋಘ ಸಿಕ್ಸರ್ ಸಹಿತ ಅಜೇಯ 122 ರನ್ ಚಚ್ಚಿದ ಕೊಹ್ಲಿ 200 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು. ಇದು ಟಿ20 ವಿಶ್ವಕಪ್ ಗೂ ಮುನ್ನ ಭಾರತಕ್ಕೆ ಸಿಕ್ಕ ಶುಭಸುದ್ದಿಯೂ ಹೌದು.
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ಸ್ಫೋಟಕ ಆರಂಭ ಪಡೆದುಕೊಂಡಿತು. ರಾಹುಲ್ 41 ಎಸೆತಗಳಲ್ಲಿ 61 ರನ್ ಬಾರಿಸಿದರು. ಸೂರ್ಯಕುಮಾರ್ ಯಾದವ್ ಒಂದು ಸಿಕ್ಸ್ ಸಿಡಿಸಿ ಔಟಾದರು. ನಂತರ ಜೊತೆಯಾದ ರಿಷಭ್ ಪಂತ್ (20*) ಹಾಗೂ ವಿರಾಟ್ ಕೊಹ್ಲಿ ಬೊಂಬಾಟ್ ಆಟವಾಡಿ ಭಾರತ 20 ಓವರ್ಗಳಲ್ಲಿ 2 ವಿಕಕೆಟ್ ನಷ್ಟಕ್ಕೆ 212 ರನ್ ಬಾರಿಸಿತು. ಟಾರ್ಗೆಟ್ ಬೆನ್ನಟ್ಟಲು ಬಂದ ಅಫ್ಘಾನಿಸ್ತಾನ ಭುವನೇಶ್ವರ್ (5 ವಿಕೆಟ್) ಸ್ವಿಂಗ್ ದಾಳಿಗೆ ನಲುಗಿ ಹೋಯಿತು. ಇಬ್ರಾಹಿಂ ಝದರ್ನ್ 64 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರಷ್ಟೆ. ಆಫ್ಘನ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿ ಸೋಲಿಗೆ ಶರಣಾಯಿತು.
Published On - 11:52 am, Fri, 9 September 22