ಟೀಮ್ ಇಂಡಿಯಾ (Team India) ವಿರುದ್ದ ಪಾಕ್ ತಂಡವು ಐತಿಹಾಸಿಕ ಗೆಲುವು ದಾಖಲಿಸಿದ ಬೆನ್ನಲ್ಲೇ ಅತ್ತ ಪಾಕಿಸ್ತಾನದಲ್ಲಿ ಸಂಭ್ರಮ ಮನೆಮಾಡಿತ್ತು. ಪಾಕ್ನ ಪ್ರಮುಖ ನಗರಗಳಾದ ಇಸ್ಲಾಮಾಬಾದ್, ಕರಾಚಿ, ರಾವಲ್ಪಿಂಡಿ ಮತ್ತು ಕ್ವೆಟ್ಟಾ ನಗರಗಳಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಅಷ್ಟೇ ಅಲ್ಲದೆ ಪಟಾಕಿ-ಸಿಡಿಮದ್ದುಗಳನ್ನು ಸಿಡಿಸಿ ಪಾಕ್ ಕ್ರಿಕೆಟ್ ಪ್ರೇಮಿಗಳು ಕುಣಿದು ಕುಪ್ಪಿಳಿಸಿದರು. ಇನ್ನೊಂದೆಡೆ ಕರಾಚಿಯಲ್ಲಿ ಗೆಲುವಿನ ಸಂಭ್ರಮ ಅತಿರೇಕ್ಕೆ ಹೋಗಿ 12 ಮಂದಿ ಆಸ್ಪತ್ರೆ ಸೇರಿದ್ದಾರೆ.
ಹೌದು, ಟೀಮ್ ಇಂಡಿಯಾ ವಿರುದ್ದ ಪಾಕ್ ಗೆಲ್ಲುತ್ತಿದ್ದಂತೆ ಕರಾಚಿಯ ಒರಂಗಿ ಟೌನ್ ಬೀದಿಯಲ್ಲಿ ಜನ ಸಮೂಹ ಸೇರಿತ್ತು. ಈ ಸಂಭ್ರಮಕ್ಕೆ ಕಿಚ್ಚು ಹಚ್ಚಲೆಂದು ಬಂದ ಯುವಕರ ಗುಂಪೊಂದು ಬಂದೂಕು ಮೂಲಕ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅತಿರೇಕಕ್ಕೆ ಹೋದ ಸಂಭ್ರಮದಿಂದಾಗಿ ಸ್ಥಳದಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ 12 ಮಂದಿ ಅಪರಿಚಿತರ ಗುಂಡಿನ ದಾಳಿಯಲ್ಲಿ ಗಾಯಗೊಂಡರು. ಇದೀಗ ಗೆಲುವನ್ನು ಸಂಭ್ರಮಿಸಲು ಬೀದಿಗಿಳಿದಿದ್ದ ಜನರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದು, ಇವರಲ್ಲಿ ಬಂದೂಕಿನೊಂದಿಗೆ ಬಂದ ವ್ಯಕ್ತಿಗಾಗಿ ಬಲೆಬೀಸಿದ್ದಾರೆ.
ಈ ಘಟನೆಯ ಹೊರತಾಗಿ, ಪಾಕಿಸ್ತಾನಿಗಳು ಬೀದಿಗಳಲ್ಲಿ ನೃತ್ಯ ಮತ್ತು ಹಾಡುಗಳನ್ನು ಹಾಡುತ್ತಾ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪಾಕಿಸ್ತಾನದ ಈ ಐತಿಹಾಸಿಕ ಗೆಲುವಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಾಬರ್ ಆಜಂ ಬಳಗವನ್ನು ಅಭಿನಂದಿಸಿದ್ದಾರೆ. ಒಟ್ಟಿನಲ್ಲಿ ಮಿತಿ ಮೀರಿದ ಸಂಭ್ರಮದಿಂದಾಗಿ 12 ಮಂದಿ ಆಸ್ಪತ್ರೆ ಸೇರುವಂತಾಗಿದೆ.
ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ್ ನಡುವಣ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ನಾಯಕ ಬಾಬರ್ ಆಜಂ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಪಾಕ್ ವೇಗಿ ಶಾಹಿನ್ ಅಫ್ರಿದಿ ಟೀಮ್ ಇಂಡಿಯಾ ಆರಂಭಿಕರನ್ನು ಪವರ್ಪ್ಲೇನಲ್ಲೇ ಪೆವಿಲಿಯನ್ಗೆ ಕಳುಹಿಸಿ ನಾಯಕನ ನಿರ್ಧಾರವನ್ನು ಸಮರ್ಥಿಸಿದ್ದರು. ಅಷ್ಟೇ ಅಲ್ಲದೆ ಭಾರತ ತಂಡವನ್ನು 20 ಓವರ್ನಲ್ಲಿ ಪಾಕ್ ಬೌಲರುಗಳು ಕೇವಲ 151 ರನ್ಗಳಿಗೆ ನಿಯಂತ್ರಿಸಿದ್ದರು. 152 ರನ್ಗಳ ಸ್ಪರ್ಧಾತ್ಮಕ ಸವಾಲನ್ನು ಬೆನ್ನತ್ತಿದ ಪಾಕ್ ತಂಡಕ್ಕೆ ಆರಂಭಿಕರಾದ ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ ಭರ್ಜರಿ ಆರಂಭ ಒದಗಿಸಿದ್ದರು. ಟೀಮ್ ಇಂಡಿಯಾ ಬೌಲರುಗಳನ್ನು ಲೀಲಾಜಾಲವಾಗಿ ಎದುರಿಸಿದ ಈ ಜೋಡಿ ವಿಶ್ವಕಪ್ ಇತಿಹಾಸದಲ್ಲೇ ಭಾರತದ ವಿರುದ್ದ ಪಾಕಿಸ್ತಾನಕ್ಕೆ ಮೊದಲ ಜಯ ತಂದುಕೊಟ್ಟಿದ್ದರು.
ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮಂಡಿಯೂರಿದ್ದು ಯಾಕೆ ಗೊತ್ತಾ?
ಇದನ್ನೂ ಓದಿ: Virat Kohli: ಸೋತರೂ ಟಿ20 ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಇದನ್ನೂ ಓದಿ: T20 World Cup 2021: ಟಿ20 ರ್ಯಾಂಕಿಂಗ್ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?
(T20 World Cup, 12 Injured In Joy Firing Celebrating Victory Against India Across Karachi)