AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2021: ಇಂದು ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷೆ! ಪಾಸಾದರಷ್ಟೇ ತಂಡದಲ್ಲಿ ಅವಕಾಶ

T20 World Cup 2021: ಈ ಪರೀಕ್ಷೆಯಲ್ಲಿ ಅವರಿಗೆ ನೆಟ್ಸ್‌ನಲ್ಲಿ 3 ರಿಂದ 4 ಓವರ್‌ಗಳ ಸ್ಪೆಲ್ ನೀಡಲಾಗುತ್ತದೆ. ಈ ಫಿಟ್‌ನೆಸ್ ಪರೀಕ್ಷೆಯ ನಂತರವೇ ನ್ಯೂಜಿಲೆಂಡ್ ವಿರುದ್ಧದ ತಂಡಕ್ಕೆ ಹಾರ್ದಿಕ್ ಸೇರ್ಪಡೆಯಾಗುತ್ತಾರೋ, ಇಲ್ಲವೋ ಎಂಬುದನ್ನು ತಂಡದ ಆಡಳಿತವು ಅಂತಿಮಗೊಳಿಸಲಿದೆ.

T20 World Cup 2021: ಇಂದು ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷೆ! ಪಾಸಾದರಷ್ಟೇ ತಂಡದಲ್ಲಿ ಅವಕಾಶ
ಹಾರ್ದಿಕ್ ಪಾಂಡ್ಯ
TV9 Web
| Edited By: |

Updated on: Oct 29, 2021 | 4:19 PM

Share

ಪಾಕಿಸ್ತಾನ ವಿರುದ್ಧದ ದೊಡ್ಡ ಸೋಲು ಮತ್ತು ನ್ಯೂಜಿಲೆಂಡ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಕುರಿತ ಚರ್ಚೆ ತೀವ್ರಗೊಂಡಿದೆ. ಅವರು ನ್ಯೂಜಿಲೆಂಡ್ ವಿರುದ್ಧ ಆಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯವಿದೆ. ಆದರೆ ಅಂತಿಮ ನಿರ್ಧಾರವನ್ನು ಟೀಮ್ ಮ್ಯಾನೇಜ್‌ಮೆಂಟ್ ತೆಗೆದುಕೊಳ್ಳಬೇಕು. ಅದನ್ನು ಕ್ಯಾಪ್ಟನ್ ವಿರಾಟ್ ಕೊಹ್ಲಿ ತೆಗೆದುಕೊಳ್ಳಬೇಕು. ಈ ನಿರ್ಧಾರವನ್ನು ಜಾರಿಗೆ ತರಲು ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಪರೀಕ್ಷೆ ಇಂದು ನಡೆಯಲಿದೆ. ಭಾರತದ ಆಲ್‌ರೌಂಡರ್ ಈ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ನ್ಯೂಜಿಲೆಂಡ್ ವಿರುದ್ಧ ಆಡುವ XI ಗೆ ಅವರನ್ನು ಆಯ್ಕೆ ಮಾಡಬಹುದು.

ಇನ್‌ಸೈಡ್‌ಸ್ಪೋರ್ಟ್ ವರದಿ ಪ್ರಕಾರ, “ಹಾರ್ದಿಕ್ ಪಾಂಡ್ಯ ಅವರ ಫಿಟ್‌ನೆಸ್ ಪರೀಕ್ಷೆ ಇಂದು ಸಂಜೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಅವರಿಗೆ ನೆಟ್ಸ್‌ನಲ್ಲಿ 3 ರಿಂದ 4 ಓವರ್‌ಗಳ ಸ್ಪೆಲ್ ನೀಡಲಾಗುತ್ತದೆ. ಈ ಫಿಟ್‌ನೆಸ್ ಪರೀಕ್ಷೆಯ ನಂತರವೇ ನ್ಯೂಜಿಲೆಂಡ್ ವಿರುದ್ಧದ ತಂಡಕ್ಕೆ ಹಾರ್ದಿಕ್ ಸೇರ್ಪಡೆಯಾಗುತ್ತಾರೋ, ಇಲ್ಲವೋ ಎಂಬುದನ್ನು ತಂಡದ ಆಡಳಿತವು ಅಂತಿಮಗೊಳಿಸಲಿದೆ. ಆದರೆ, ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಹಾರ್ದಿಕ್ ನೆಟ್ಸ್​ನಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ.ಆದರೆ, ನೆಟ್ಸ್ ಬೌಲಿಂಗ್​ಗೂ ಮ್ಯಾಚ್​ಗೂ ವ್ಯತ್ಯಾಸವಿದೆ.

ಹಾರ್ದಿಕ್ ಪಾಂಡ್ಯ ಬೌಲಿಂಗ್​ನಿಂದ ದೂರ ಉಳಿದಿದ್ದರು ಟೀಂ ಇಂಡಿಯಾದ ಈ ಆಲ್ ರೌಂಡರ್ ಬೌಲಿಂಗ್​ನಿಂದ ದೂರ ಉಳಿದಿದ್ದರು. ಅವರು ಸಂಪೂರ್ಣ IPL 2021 ರಲ್ಲಿ ಬೌಲಿಂಗ್ ಮಾಡಲಿಲ್ಲ. ಇದರ ನಂತರ, ಅವರು ಅಭ್ಯಾಸ ಪಂದ್ಯಗಳಲ್ಲಿ ಮತ್ತು ಪಾಕಿಸ್ತಾನದ ವಿರುದ್ಧದ ಭಾರತದ ಮೊದಲ T20 ವಿಶ್ವಕಪ್‌ನಲ್ಲಿ ಒಂದೇ ಒಂದು ಓವರ್ ಅನ್ನು ಸಹ ಬೌಲ್ ಮಾಡಲಿಲ್ಲ. ಈ ಕಾರಣಕ್ಕಾಗಿಯೇ ಎಲ್ಲಾ ಕ್ರಿಕೆಟ್ ಪಂಡಿತರು ತಂಡದಲ್ಲಿ ಅವರ ಸ್ಥಾನವನ್ನು ಸರಿಯಾಗಿ ಪರಿಗಣಿಸುತ್ತಿಲ್ಲ. ಈಗ ಅಂತಹ ಪರಿಸ್ಥಿತಿಯಲ್ಲಿ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧ ಆಡಬೇಕಾದರೆ ಮತ್ತು ತನ್ನನ್ನು ತಾನು ಸಾಬೀತುಪಡಿಸಲು ಅವಕಾಶ ನೀಡಬೇಕಾದರೆ. ಹಾಗಾಗಿ ಇಂದಿನ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

ಹಾರ್ದಿಕ್ ಅವರ ಬ್ಯಾಟಿಂಗ್ ಆದರೆ, ಭಾರತದ ಸಮಸ್ಯೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾತ್ರವಲ್ಲ, ಅವರ ಬ್ಯಾಟಿಂಗ್ ಕೂಡ ಹಾಗೆಯೇ. ಅವರೂ ಬ್ಯಾಟ್‌ನಿಂದ ಫಾರ್ಮ್‌ ಕಳೆದುಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಅವರ ಬ್ಯಾಟ್ ಕೆಲಸ ಮಾಡಲಿಲ್ಲ. ಅದಕ್ಕೂ ಮೊದಲು ಐಪಿಎಲ್ 2021ರಲ್ಲೂ ಅವರ ಸ್ಟೈಲ್ ಕಳೆಗುಂದಿತ್ತು. ಅಲ್ಲಿ ಅವರು 12 ಪಂದ್ಯಗಳಲ್ಲಿ 14.11 ರ ಕಳಪೆ ಸರಾಸರಿಯಲ್ಲಿ ಕೇವಲ 127 ರನ್ ಗಳಿಸಿದರು, ಅದರಲ್ಲಿ ಅವರ ಅತ್ಯುತ್ತಮ ಸ್ಕೋರ್ 40 ನಾಟೌಟ್ ಆಗಿತ್ತು. ಈ ಸಮಯದಲ್ಲಿ ಅವರ ಸ್ಟ್ರೈಕ್ ರೇಟ್ ಕೂಡ 113.39 ಆಗಿತ್ತು.