T20 World Cup 2021: 3 ಇನ್ನಿಂಗ್ಸ್ನಲ್ಲಿ ಕೇವಲ 5 ರನ್; ಒಂದು ಬಾಲ್ ಕೂಡ ಆಡದೇ ವಿಕೆಟ್ ಒಪ್ಪಿಸಿದ ರಸೆಲ್!
T20 World Cup 2021: ಬಾಂಗ್ಲಾದೇಶದ ವಿರುದ್ಧ ಆಂಡೆ ರಸೆಲ್ ಅವರ ಸ್ಕೋರ್ 0 ಎಸೆತಗಳಲ್ಲಿ 0 ರನ್ ಆಗಿತ್ತು. ಇದು ಸೇರಿದಂತೆ ಟೂರ್ನಿಯಲ್ಲಿ ಆಡಿದ 3 ಪಂದ್ಯಗಳಲ್ಲಿ ಕೇವಲ 5 ರನ್ ಗಳಿಸಿದ್ದಾರೆ.
ಆಂಡ್ರೆ ರಸೆಲ್ ತನ್ನ ಪವರ್ ಹಿಟ್ಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಆದರೆ 2021ರ ಟಿ20 ವಿಶ್ವಕಪ್‌ನಲ್ಲಿ ಅವರ ಈ ಕಲೆ ತುಕ್ಕು ಹಿಡಿದಂತಿದೆ. ಅವರ ಬ್ಯಾಟ್‌ನಲ್ಲಿ ಜೀವವೇ ಇರಲಿಲ್ಲ. ಈಗ ಅದು ಕಾಣಿಸುತ್ತಿಲ್ಲ. ಅವರ ಫೈರ್‌ಪವರ್‌ನಿಂದಾಗಿ ಇಡೀ ಕ್ರಿಕೆಟ್ ಜಗತ್ತಲ್ಲಿ ಹೆಸರುವಾಸಿಯಾದವರು. ಆದರೆ ಅವರ ಬ್ಯಾಟ್ನಿಂದ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ.
ವಾಸ್ತವವಾಗಿ, ಪೊಲಾರ್ಡ್ 13 ನೇ ಓವರ್‌ನ ಮೂರನೇ ಎಸೆತದಲ್ಲಿ ಗಾಯಗೊಂಡಾಗ, ಆಂಡ್ರೆ ರಸೆಲ್ ಕ್ರೀಸ್‌ಗೆ ಬಂದರು. ಅವರು ನಾನ್ ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದರು. ರೋಸ್ಟನ್ ಚೇಸ್ ಬ್ಯಾಟಿಂಗ್ನಲ್ಲಿದ್ದರು. ಬಾಂಗ್ಲಾದೇಶದ ಬೌಲರ್ ತಸ್ಕಿನ್ ಅಹ್ಮದ್ ಓವರ್‌ನ ನಾಲ್ಕನೇ ಎಸೆತವನ್ನು ಬೌಲ್ ಮಾಡಿದರು. ಚೇಸ್ ನಾನ್-ಸ್ಟ್ರೈಕರ್ ಕಡೆಗೆ ಆಡಿದರು. ಬೌಲಿಂಗ್ ಮಾಡಿ ನಿಂತಿದ್ದ ತಸ್ಕಿನ್ ತಮ್ಮ ಕಾಲ್ನಿಂದ ಬಾಲನ್ನು ಟಚ್ ಮಾಡಿದ್ದರು. ಈ ವೇಳೆ ರಸೆಲ್ ಕ್ರೀಸ್‌ನಿಂದ ಹೊರಗಿದ್ದರು. ಪರಿಣಾಮ ಅವರು ರನ್ ಔಟ್ ಆದರು ಮತ್ತು ಯಾವುದೇ ಚೆಂಡನ್ನು ಆಡದೆ ಡಗೌಟ್‌ಗೆ ಮರಳಬೇಕಾಯಿತು.
5 ರನ್ ಗಳಿಸಿ 3 ಬಾರಿ ಔಟ್ ಬಾಂಗ್ಲಾದೇಶದ ವಿರುದ್ಧ ಆಂಡೆ ರಸೆಲ್ ಅವರ ಸ್ಕೋರ್ 0 ಎಸೆತಗಳಲ್ಲಿ 0 ರನ್ ಆಗಿತ್ತು. ಇದು ಸೇರಿದಂತೆ ಟೂರ್ನಿಯಲ್ಲಿ ಆಡಿದ 3 ಪಂದ್ಯಗಳಲ್ಲಿ ಕೇವಲ 5 ರನ್ ಗಳಿಸಿದ್ದಾರೆ. ಈ 5 ರನ್ ಮಾಡಲು, ಅವರು ಕೇವಲ 5 ಎಸೆತಗಳನ್ನು ಎದುರಿಸಿದ್ದಾರೆ. ವಿಶೇಷವೆಂದರೆ 3 ತಂಡಗಳ ವಿರುದ್ಧ ಆಡುವ ಮೂಲಕ ಈ 5 ರನ್ ಕಲೆಹಾಕಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು 1 ಎಸೆತವನ್ನು ಎದುರಿಸಿದರು, ಯಾವುದೇ ರನ್ ಗಳಿಸಲಿಲ್ಲ. ಇದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದಲ್ಲಿ 4 ಎಸೆತಗಳನ್ನು ಆಡಿ 1 ಬೌಂಡರಿ ಸಹಿತ 5 ರನ್ ಗಳಿಸಿದ್ದರು. ಬಾಂಗ್ಲಾದೇಶದ ವಿರುದ್ಧ ಆಡುವಾಗ ಚೆಂಡನ್ನು ಸ್ಪರ್ಶಿಸುವುದು ಕೂಡ ಅವರಿಗೆ ಕಷ್ಟವಾಯಿತು.