T20 World Cup 2021: ಒಂದು ಪಂದ್ಯ, ಐದು ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
Team India's Record: ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ಕೇವಲ 85 ರನ್ಗೆ ಆಲೌಟ್ ಆಯಿತು. ಈ ಸಾಧಾರಣ ಸವಾಲು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 6.3 ಓವರ್ನಲ್ಲಿ ಗೆಲುವು ದಾಖಲಿಸಿತು.
ಟೀಮ್ ಇಂಡಿಯಾ (Team India) ಸ್ಕಾಟ್ಲೆಂಡ್ ವಿರುದ್ದ (India vs Scotland) ಭರ್ಜರಿ ಜಯ ಸಾಧಿಸಿದೆ. ಸ್ಕಾಟ್ಲೆಂಡ್ ನೀಡಿ 86 ರನ್ಗಳ ಟಾರ್ಗೆಟ್ ಅನ್ನು ಟೀಮ್ ಇಂಡಿಯಾ 6.3 ಓವರ್ನಲ್ಲಿ ಚೇಸ್ ಮಾಡುವ ಮೂಲಕ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು 3 ವರ್ಷಗಳ ಹಿಂದಿನ ದಾಖಲೆ ಮುರಿದರು. ಅಷ್ಟೇ ಅಲ್ಲದೆ ಒಟ್ಟು 6 ದಾಖಲೆಗಳನ್ನು ಬರೆದರು. ಆ ದಾಖಲೆಗಳಾವುವು ನೋಡೋಣ.
1- 86 ರನ್ಗಳ ಟಾರ್ಗೆಟ್ನೊಂದಿಗೆ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 5 ಓವರ್ನಲ್ಲಿ 70 ರನ್ ಬಾರಿಸುವ ಮೂಲಕ ಅಬ್ಬರಿಸಿದ್ದರು. ಈ ಹಂತದಲ್ಲಿ ಹಿಟ್ಮ್ಯಾನ್ ಔಟಾದರೂ ಮತ್ತೊಂದೆಡೆ ರಾಹುಲ್ ಅಬ್ಬರ ಮುಂದುವರೆದಿತ್ತು. ಅಂತಿಮವಾಗಿ ಪವರ್ಪ್ಲೇನಲ್ಲಿ ಟೀಮ್ ಇಂಡಿಯಾ ಕಲೆಹಾಕಿದ್ದು ಬರೋಬ್ಬರಿ 82 ರನ್ಗಳು. ಇದು ಟೀಮ್ ಇಂಡಿಯಾ ಪಾಲಿಗೆ ಹೊಸ ದಾಖಲೆ. ಈ ಹಿಂದೆ 2018 ರಲ್ಲಿ ಸೌತ್ ಆಫ್ರಿಕಾ ವಿರುದ್ದ ಟಿ20ಯಲ್ಲಿ ಪವರ್ಪ್ಲೇನಲ್ಲಿ 78 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಸ್ಕಾಟ್ಲೆಂಡ್ ವಿರುದ್ದ ಅಬ್ಬರಿಸುವ ಮೂಲಕ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಪವರ್ಪ್ಲೇನಲ್ಲಿ 82 ರನ್ ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ.
2- ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ಕೇವಲ 85 ರನ್ಗೆ ಆಲೌಟ್ ಆಯಿತು. ಈ ಸಾಧಾರಣ ಸವಾಲು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 6.3 ಓವರ್ನಲ್ಲಿ ಗೆಲುವು ದಾಖಲಿಸಿತು. ಅಂದರೆ 39 ಬಾಲ್ನಲ್ಲಿ ಚೇಸ್ ಮಾಡುವ ಮೂಲಕ ಟೀಮ್ ಇಂಡಿಯಾ 81 ಎಸೆತಗಳನ್ನು ಬಾಕಿ ಉಳಿಸಿದರು. ಇದು ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪಾಲಿಗೆ ದಾಖಲೆಯಾಗಿದೆ. ಇದಕ್ಕೂ ಮುನ್ನ2016 ರಲ್ಲಿ ಯುಎಇ ವಿರುದ್ದ ಭಾರತ 59 ಬಾಲ್ ಬಾಕಿ ಇರುವಾಗ ಗೆದ್ದಿರುವುದು ದಾಖಲೆಯಾಗಿತ್ತು. ಇದೀಗ 81 ಎಸೆತಗಳು ಬಾಕಿ ಇರುವಾಗಲೇ ಭರ್ಜರಿ ಜಯ ಸಾಧಿಸಿ ಹೊಸ ಇತಿಹಾಸ ನಿರ್ಮಿಸಿದೆ.
3- ಇನ್ನು ಟಿ20 ವಿಶ್ವಕಪ್ನಲ್ಲಿ ಅತೀ ಹೆಚ್ಚು ಬಾಲ್ ಬಾಕಿ ಇರುವಂತೆ ಗೆದ್ದ ತಂಡಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮೂರನೇ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ 2014 ರಲ್ಲಿ 90 ಎಸೆತಗಳು ಬಾಕಿ ಇರುವಾಗ ನೆದರ್ಲ್ಯಾಂಡ್ಸ್ ವಿರುದ್ದ ಗೆದ್ದಿರುವ ಶ್ರೀಲಂಕಾ ಅಗ್ರಸ್ಥಾನದಲ್ಲಿದೆ. ಇನ್ನು 2021 ರಲ್ಲೇ ಬಾಂಗ್ಲಾದೇಶದ ವಿರುದ್ದ 82 ಎಸೆತಗಳನ್ನು ಉಳಿಸಿ ಆಸ್ಟ್ರೇಲಿಯಾ ಜಯ ಸಾಧಿಸಿ 2ನೇ ಸ್ಥಾನ ಅಲಂಕರಿಸಿದೆ. ಇದೀಗ 81 ಎಸೆತಗಳು ಬಾಕಿ ಇರುವಾಗಲೇ ಗೆದ್ದು ಟೀಮ್ ಇಂಡಿಯಾ ಮೂರನೇ ಸ್ಥಾನಕ್ಕೇರಿದೆ.
4- ಟಿ20 ವಿಶ್ವಕಪ್ನಲ್ಲಿ ಪವರ್ಪ್ಲೇನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ತಂಡಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಲ್ಕನೇ ಸ್ಥಾನ ಅಲಂಕರಿಸಿದೆ. ಸ್ಕಾಟ್ಲೆಂಡ್ ವಿರುದ್ದ ಪವರ್ಪ್ಲೇನಲ್ಲಿ 82 ರನ್ ಬಾರಿಸುವ ಮೂಲಕ ಈ ಬಾರಿಯ ವಿಶ್ವಕಪ್ನಲ್ಲಿ ಮೊದಲ 6 ಓವರ್ನಲ್ಲಿ ಅತ್ಯಧಿಕ ರನ್ಗಳಿಸಿದ ತಂಡ ಎನಿಸಿಕೊಂಡಿದೆ. ಇನ್ನು ಒಟ್ಟಾರೆ ಟಿ20 ಕ್ರಿಕೆಟ್ನಲ್ಲಿ ಪವರ್ಪ್ಲೇನಲ್ಲಿ ಅತ್ಯಧಿಕ ರನ್ ಕಲೆಹಾಕಿದ್ದು ನೆದರ್ಲ್ಯಾಂಡ್ ತಂಡ. 2014 ರಲ್ಲಿ ನೆದರ್ಲ್ಯಾಂಡ್ ತಂಡವು ಐರ್ಲೆಂಡ್ ವಿರುದ್ದ ಪವರ್ಪ್ಲೇನಲ್ಲಿ 91 ರನ್ಗಳಿಸಿತ್ತು. ನಂತರದ ಸ್ಥಾನದಲ್ಲಿ ಸೌತ್ ಆಫ್ರಿಕಾ ವಿರುದ್ದ 89 ರನ್ಗಳಿಸಿದ ಇಂಗ್ಲೆಂಡ್ ತಂಡವಿದೆ. ಹಾಗೆಯೇ ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್ ವಿರುದ್ದ 83 ರನ್ ಬಾರಿಸಿದ ಸೌತ್ ಆಫ್ರಿಕಾವಿದೆ. ಇದೀಗ ಪವರ್ಪ್ಲೇನಲ್ಲಿ 82 ರನ್ ಬಾರಿಸಿ ಟೀಮ್ ಇಂಡಿಯಾ ನಾಲ್ಕನೇ ಸ್ಥಾನ ಅಲಂಕರಿಸಿದೆ.
5- ಸ್ಕಾಟ್ಲೆಂಡ್ ವಿರುದ್ದ ಅಬ್ಬರಿಸುವ ಮೂಲಕ ಕೆಎಲ್ ರಾಹುಲ್ ದಾಖಲೆ ಬರೆದಿದ್ದಾರೆ. ರಾಹುಲ್ ಕೇವಲ 18 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ನೊಂದಿಗೆ ಅರ್ಧಶತಕದ ಪೂರೈಸಿದ್ದರು. ಇದು ಈ ಬಾರಿಯ ಟಿ20 ವಿಶ್ವಕಪ್ನ ವೇಗದ ಅರ್ಧಶತಕವಾಗಿದೆ. ಅಷ್ಟೇ ಅಲ್ಲದೆ ಒಟ್ಟಾರೆ ಟಿ20 ವಿಶ್ವಕಪ್ನ 4ನೇ ವೇಗದ ಹಾಫ್ ಸೆಂಚುರಿ.
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ
(T20 World Cup 2021: India set 5 records while thrashing Scotland)