AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2021: ಭಾರತ ಸೆಮಿಫೈನಲ್​ಗೆ ಏರಬೇಕೆಂದ ಪಾಕ್ ಕ್ರಿಕೆಟಿಗ: ಆದರೆ ಉದ್ದೇಶವೇ ಬೇರೆ

India vs Pakistan: ಈಗಾಗಲೇ ನಾಲ್ಕು ಗೆಲುವು ದಾಖಲಿಸಿರುವ ಪಾಕಿಸ್ತಾನ್ ಗ್ರೂಪ್-2 ನಿಂದ ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದೆ. ಇನ್ನು 2ನೇ ಸ್ಥಾನಕ್ಕಾಗಿ ಭಾರತ, ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ್ ನಡುವೆ ಪೈಪೋಟಿ ಇದೆ.

T20 World Cup 2021: ಭಾರತ ಸೆಮಿಫೈನಲ್​ಗೆ ಏರಬೇಕೆಂದ ಪಾಕ್ ಕ್ರಿಕೆಟಿಗ: ಆದರೆ ಉದ್ದೇಶವೇ ಬೇರೆ
India vs Pakistan
TV9 Web
| Updated By: ಝಾಹಿರ್ ಯೂಸುಫ್|

Updated on: Nov 06, 2021 | 6:00 PM

Share

ಟಿ20 ವಿಶ್ವಕಪ್​ನಲ್ಲಿ (T20 World Cup 2021) ಈಗ ನ್ಯೂಜಿಲೆಂಡ್​ ಹಾಗೂ ಅಫ್ಘಾನಿಸ್ತಾನ್ (new zealand vs afghanistan) ನಡುವಣ ಪಂದ್ಯದ ಬಗ್ಗೆ ಚರ್ಚೆ ಶುರುವಾಗಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋತರೆ ಭಾರತಕ್ಕೆ (Team India) ಸೆಮಿಫೈನಲ್​ಗೇರುವ ಅವಕಾಶ ಇರಲಿದೆ. ಹೀಗಾಗಿ ನವೆಂಬರ್ 7 ರಂದು ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿದೆ. ಅತ್ತ ಗ್ರೂಪ್-2 ನಿಂದ ಈಗಾಗಲೇ ಪಾಕಿಸ್ತಾನ್ ಸೆಮಿಫೈನಲ್ ಪ್ರವೇಶಿಸಿದೆ. ಹೀಗಾಗಿಯೇ ಪಾಕ್ ತಂಡದ ಮಾಜಿ ವೇಗಿ ಶೊಯೇಬ್ ಅಖ್ತರ್ ಕೂಡ ಭಾರತ ತಂಡ ಸೆಮಿಫೈನಲ್​ಗೆ ತಲುಪಬೇಕೆಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಖ್ತರ್, ನನ್ನ ಆಸೆ ಟೀಮ್ ಇಂಡಿಯಾ ಸೆಮಿಫೈನಲ್​ಗೆ ಬರಬೇಕು. ಅಷ್ಟೇ ಅಲ್ಲದೆ ಸೆಮಿಫೈನಲ್​ನಲ್ಲೂ ಗೆಲ್ಲಬೇಕು. ಇನ್ನೊಂದು ಸೆಮಿಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ್ ಗೆದ್ದು ಫೈನಲ್​ಗೆ ಬರಲಿದೆ. ಈ ಮೂಲಕ ಭಾರತ ಹಾಗೂ ಪಾಕಿಸ್ತಾನ್ ಫೈನಲ್​ನಲ್ಲಿ ಮುಖಾಮುಖಿಯಾಗಬಹುದು. ಅಲ್ಲಿ ಟೀಮ್ ಇಂಡಿಯಾವನ್ನು ಮತ್ತೆ ಪಾಕಿಸ್ತಾನ್ ಸೋಲಿಸುವುದನ್ನು ನೋಡಬೇಕು ಎಂದು ಅಖ್ತರ್ ಹೇಳಿದ್ದಾರೆ.

ಇನ್ನು ಪಾಕ್ ತಂಡಕ್ಕೆ ಸಲಹೆ ನೀಡಿದ ಅಖ್ತರ್, ನೀವು ನಿಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಯೋಚಿಸಬೇಡಿ. ಸ್ಕಾಟ್ಲೆಂಡ್ ಅನ್ನು ಸೋಲಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್​ಗೆ ಪ್ರವೇಶಿಸಿ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ನಾನು ಭಾರತ ವಿರುದ್ದ ಮತ್ತೊಂದು ಅವಕಾಶ ಯಾಕೆ ಸಿಗಲ್ಲ ಎಂಬುದನ್ನು ಯೋಚಿಸುತ್ತಿದ್ದೆ. ಈ ಎರಡೂ ತಂಡಗಳೇಕೆ ಫೈನಲ್​ ಆಡಬಾರದು?. ಇದಕ್ಕೂ ಅವಕಾಶವಿದೆ. ಮೊದಲೆರಡು ಸೋಲಿನ ಬಳಿಕ ಭಾರತ ಕಂಬ್ಯಾಕ್ ಮಾಡಿದೆ. ಈ ಮೂಲಕ ಸೆಮಿಫೈನಲ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಹಾಗಾಗಿ ನನ್ನ ಪ್ರಕಾರ ಫೈನಲ್​ನಲ್ಲಿ ಭಾರತ ಮತ್ತು ಪಾಕಿಸ್ತಾನ್ ಸೆಮಿಫೈನಲ್​ನಲ್ಲಿ ಗೆದ್ದು ಫೈನಲ್​ ಪ್ರವೇಶಿಸಬೇಕು. ಫೈನಲ್​ನಲ್ಲಿ ಮತ್ತೊಮ್ಮೆ ಪಾಕಿಸ್ತಾನ್ ಟೀಮ್ ಇಂಡಿಯಾವನ್ನು ಸೋಲಿಸುವುದನ್ನು ನೋಡಬೇಕೆಂದು ಅಖ್ತರ್ ತಿಳಿಸಿದ್ದಾರೆ.

ಈಗಾಗಲೇ ನಾಲ್ಕು ಗೆಲುವು ದಾಖಲಿಸಿರುವ ಪಾಕಿಸ್ತಾನ್ ಗ್ರೂಪ್-2 ನಿಂದ ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದೆ. ಇನ್ನು 2ನೇ ಸ್ಥಾನಕ್ಕಾಗಿ ಭಾರತ, ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ್ ನಡುವೆ ಪೈಪೋಟಿ ಇದೆ. ಇಲ್ಲಿ ನ್ಯೂಜಿಲೆಂಡ್ ಅಫ್ಘಾನಿಸ್ತಾನ್ ವಿರುದ್ದ ಗೆದ್ದರೆ ಭಾರತ ಹಾಗೂ ಅಫ್ಘಾನ್ ತಂಡಗಳು ಸೆಮಿಫೈನಲ್​ ರೇಸ್​ನಿಂದ ಹೊರಬೀಳಲಿದೆ. ಅಷ್ಟೇ ಅಲ್ಲದೆ ನ್ಯೂಜಿಲೆಂಡ್ ಸೆಮೀಸ್​ಗೆ ಎಂಟ್ರಿ ಕೊಡಲಿದೆ. ಒಂದು ವೇಳೆ ಅಫ್ಘಾನಿಸ್ತಾನ್ ನ್ಯೂಜಿಲೆಂಡ್ ವಿರುದ್ದ ಗೆದ್ದರೆ, ನೆಟ್​ ರನ್​ ರೇಟ್ ಮೂಲಕ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಟೀಮ್ ಇಂಡಿಯಾಗೆ ಸಿಗಲಿದೆ. ಹೀಗಾಗಿ ನವೆಂಬರ್ 7 ರಂದು ನಡೆಯಲಿರುವ ಅಫ್ಘಾನಿಸ್ತಾನ್-ನ್ಯೂಜಿಲೆಂಡ್ ನಡುವಣ ಪಂದ್ಯದ ಫಲಿತಾಂಶ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

(‘Want India to reach final so that Pakistan can beat them again’: Akhtar)