AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 world cup 2021: ಪಾಕ್​ಗೆ ಮಣ್ಣು ಮುಕ್ಕಿಸಲು ಬಲಿಷ್ಠ ಪಡೆ: ಸಂಭಾವ್ಯ ಟೀಮ್ ಇಂಡಿಯಾ ಪ್ಲೇಯಿಂ​ಗ್​ 11

India’s Predicted Playing 11: ಮತ್ತೊಂದೆಡೆ ಪಾಕಿಸ್ತಾನ್ ತಂಡವು ಪ್ಲೇಯಿಂಗ್ ಇಲೆವೆನ್​ ಆಯ್ಕೆಗಾಗಿ 12 ಆಟಗಾರರನ್ನು ಹೆಸರಿಸಿದೆ. ಈ ಆಟಗಾರರ ಪಟ್ಟಿಯಿಂದ ಅಂತಿಮ 11 ಆಟಗಾರರನ್ನು ಕಣಕ್ಕಿಳಿಸುವುದಾಗಿ ತಿಳಿಸಿದೆ.

T20 world cup 2021: ಪಾಕ್​ಗೆ ಮಣ್ಣು ಮುಕ್ಕಿಸಲು ಬಲಿಷ್ಠ ಪಡೆ: ಸಂಭಾವ್ಯ ಟೀಮ್ ಇಂಡಿಯಾ ಪ್ಲೇಯಿಂ​ಗ್​ 11
India vs Pakistan
TV9 Web
| Updated By: ಝಾಹಿರ್ ಯೂಸುಫ್|

Updated on:Oct 23, 2021 | 8:33 PM

Share

ದುಬೈ ಇಂಟರ್​ನ್ಯಾಷನಲ್​ ಸ್ಟೇಡಿಯಂ ಹೈವೊಲ್ಟೇಜ್ ಪಂದ್ಯಕ್ಕಾಗಿ ಸಜ್ಜಾಗಿ ನಿಂತಿದೆ. ನಾಳೆ ಸಂಜೆ 7.30ಕ್ಕೆ ಮರಳುಗಾಡಿನ ಮೈದಾನದಲ್ಲಿ ಪ್ರತಿಷ್ಠಿತ ಜಯಕ್ಕಾಗಿ ಭಾರತ-ಪಾಕಿಸ್ತಾನ್ (India vs Pakistan)  ನಡುವಣ ಕಾದಾಟ ನಡೆಸಲಿದೆ. ಇದುವರೆಗೆ ಟಿ20 ವಿಶ್ವಕಪ್ (T20 World Cup 2021)​ ಪಾಕ್ ವಿರುದ್ದ ಸೋಲು ಕಾಣದ ಟೀಮ್ ಇಂಡಿಯಾ (Team India) ಈ ಬಾರಿ ಕೂಡ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದೆ. ಇದಾಗ್ಯೂ ಪಾಕ್ ವಿರುದ್ದ ಕೊಹ್ಲಿ ಪಡೆಯಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. ಏಕೆಂದರೆ ತಂಡದಲ್ಲಿರುವ ಬಹುತೇಕ ಆಟಗಾರರು ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಯಾರನ್ನು ಕೈ ಬಿಡೋದು, ಯಾರನ್ನು ಪ್ಲೇಯಿಂಗ್​ ಇಲೆವೆನ್​ನಲ್ಲಿ ಆಯ್ಕೆ ಮಾಡೋದು ಎಂಬುದು ಕೊಹ್ಲಿಗೆ ದೊಡ್ಡ ಸವಾಲು. ಇದಾಗ್ಯೂ ಕಳೆದೆರಡು ಅಭ್ಯಾಸ ಪಂದ್ಯಗಳಲ್ಲಿ ಕಣಕ್ಕಿಳಿದ ಆಟಗಾರರನ್ನೇ ಟೀಮ್ ಇಂಡಿಯಾ ಪಾಕ್ ವಿರುದ್ದ ಕೂಡ ಕಣಕ್ಕಿಳಿಸಬಹುದು. ಅದರಂತೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ (India’s Predicted Playing 11) ಹೇಗಿರಲಿದೆ ನೋಡೋಣ.

ಆರಂಭಿಕರು: ನಾಯಕ ವಿರಾಟ್ ಕೊಹ್ಲಿ ಮೊದಲ ಅಭ್ಯಾಸ ಪಂದ್ಯದಲ್ಲಿಯೇ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬುದನ್ನು ಖಚಿತಪಡಿಸಿದ್ದರು. ಹೀಗಾಗಿ ಓಪನರ್​ಗಳಾಗಿ ರಾಹುಲ್-ರೋಹಿತ್ ಜೋಡಿ ಆಡುವುದು ಖಚಿತ.

ಮಧ್ಯಮ ಕ್ರಮಾಂಕ: ಮೂರನೇ ಕ್ರಮಾಂಕದಲ್ಲಿ ನಾಯಕ ಕೊಹ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಕೊಹ್ಲಿಯ ನಂತರದ ಸ್ಥಾನ ಸೂರ್ಯಕುಮಾರ್ ಯಾದವ್ ಅವರಿಗೆ ಸಿಗಲಿದೆ. ಇನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ 5ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಸೂರ್ಯಕುಮಾರ್ ಅವರನ್ನು ಆಯ್ಕೆ ಮಾಡದಿದ್ದರೆ ಇಶಾನ್ ಕಿಶನ್​ಗೆ ಚಾನ್ಸ್ ಸಿಗಬಹುದು.

ಆಲ್​ರೌಂಡರ್​: ತಂಡದಲ್ಲಿ ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಪಾಂಡ್ಯ ಇದುವರೆಗೆ ಬೌಲಿಂಗ್ ಮಾಡದಿದ್ದರೂ, ಅವಶ್ಯಕತೆಯಿದ್ದಲ್ಲಿ ಒಂದೆರೆಡು ಓವರ್ ಮಾಡಲು ಅವರು ಫಿಟ್ ಆಗಿದ್ದಾರೆ ಎಂದು ಖುದ್ದು ಕೊಹ್ಲಿಯೇ ತಿಳಿಸಿದ್ದಾರೆ. ಹೀಗಾಗಿ ಪಾಕ್ ವಿರುದ್ದ ಹಾರ್ದಿಕ್ ಆಡುವುದು ಖಚಿತ.

ಸ್ಪಿನ್ನರ್: ದೀರ್ಘ ಕಾಲದ ಬಳಿಕ ಟಿ20 ತಂಡಕ್ಕೆ ವಾಪಸಾಗಿರುವ ಆರ್ ಅಶ್ವಿನ್‌ಗೆ ದುಬೈ ಪಿಚ್ ಸಹಾಯಕವಾಗಿದೆ. ಹೀಗಾಗಿ ಅವರನ್ನೂ ಸಹ ಪ್ಲೇಯಿಂಗ್​ 11ನಲ್ಲಿ ಸೇರಿಸಿಕೊಳ್ಳಬಹುದು. ಹೀಗಾಗಿಯೇ ಅಶ್ವಿನ್ ಅವರನ್ನು ಅಭ್ಯಾಸ ಪಂದ್ಯಗಳಲ್ಲಿ ಪವರ್​ಪ್ಲೇನಲ್ಲಿ ಬೌಲಿಂಗ್ ಮಾಡಿಸಿದ್ದರು. ಇನ್ನು ಎರಡನೇ ಸ್ಪಿನ್ನರ್ ಆಗಿ ಜಡೇಜಾ ಅವರನ್ನು ಬಳಸಿಕೊಳ್ಳಬಹುದು.

ವೇಗಿಗಳು: ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮೂವರು ಅನುಭವಿ ವೇಗದ ಬೌಲರ್‌ಗಳು ಕಣಕ್ಕಿಳಿಯಬಹುದು. ಅದರಂತೆ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಸ್ಥಾನ ಸಿಗಲಿದೆ. ಇದಾಗ್ಯೂ ಬದಲಾವಣೆ ಮಾಡಿದ್ರೆ, ಭುವಿ ಸ್ಥಾನದಲ್ಲಿ ಶಾರ್ದೂಲ್​ಗೆ ಅವಕಾಶ ನೀಡಬಹುದು. ಇದರಿಂದ ಹೆಚ್ಚುವರಿ ಆಲ್​ರೌಂಡರ್ ಸಿಕ್ಕಂತಾಗಲಿದೆ.

ಭಾರತದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿದೆ (India’s Predicted Playing 11): ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ .

ಮತ್ತೊಂದೆಡೆ ಪಾಕಿಸ್ತಾನ್ ತಂಡವು ಪ್ಲೇಯಿಂಗ್ ಇಲೆವೆನ್​ ಆಯ್ಕೆಗಾಗಿ 12 ಆಟಗಾರರನ್ನು ಹೆಸರಿಸಿದೆ. ಈ ಆಟಗಾರರ ಪಟ್ಟಿಯಿಂದ ಅಂತಿಮ 11 ಆಟಗಾರರನ್ನು ಕಣಕ್ಕಿಳಿಸುವುದಾಗಿ ತಿಳಿಸಿದೆ. ಅದರಂತೆ ಪಾಕ್​ ತಂಡ ಪ್ಲೇಯಿಂಗ್ 11 ನಲ್ಲಿ ಈ ಆಟಗಾರರು ಕಾಣಿಸಿಕೊಳ್ಳಬಹುದು…ಒಂದು ದಿನ ಮೊದಲೇ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ

ಇದನ್ನೂ ಓದಿ: India vs Pakistan, T20 World cup 2021: ಒಂದು ದಿನ ಮೊದಲೇ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ್

ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(T20 world cup 2021: india vs pakistan predicted playing 11)

Published On - 8:32 pm, Sat, 23 October 21

ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ