T20 World Cup 2021: ರಾಹುಲ್, ರೋಹಿತ್, ಕೊಹ್ಲಿಯನ್ನು ಗೇಲಿ ಮಾಡಿದ ಪಾಕ್ ಬೌಲರ್

| Updated By: ಝಾಹಿರ್ ಯೂಸುಫ್

Updated on: Nov 10, 2021 | 9:46 PM

T20 World Cup: ಇದೀಗ ಟೀಮ್ ಇಂಡಿಯಾ ಆಟಗಾರರ ಔಟಾಗಿರುವ ವಿಷಯ ಮತ್ತೆ ಮುನ್ನಲೆಗೆ ಬಂದಿದೆ. ಇದಕ್ಕೆ ಕಾರಣ ಶಾಹೀನ್ ಅಫ್ರಿದಿ ಭಾರತದ ಬ್ಯಾಟರುಗಳನ್ನು ಅಪಹಾಸ್ಯ ಮಾಡಿರುವುದು.

T20 World Cup 2021: ರಾಹುಲ್, ರೋಹಿತ್, ಕೊಹ್ಲಿಯನ್ನು ಗೇಲಿ ಮಾಡಿದ ಪಾಕ್ ಬೌಲರ್
T20 World Cup 2021
Follow us on

ಟೀಮ್ ಇಂಡಿಯಾದ ಟಿ20 ವಿಶ್ವಕಪ್ ಅಭಿಯಾನ ಅಂತ್ಯಗೊಂಡಿದೆ. ಇದಾಗ್ಯೂ ವಿಶ್ವಕಪ್​ನಲ್ಲಿ ಭಾರತ ತಂಡದ ಚರ್ಚೆಗಳು ಮಾತ್ರ ಮುಂದುವರೆದಿದೆ. ಅದರಲ್ಲೂ ಪಾಕಿಸ್ತಾನ್ ವಿರುದ್ದ ಸೋತಿರುವುದು ಇನ್ನೂ ಕೂಡ ಚರ್ಚಾ ವಿಷಯವಾಗಿದೆ. 1992 ರಿಂದ 2019 ರವರೆಗೆ, ಭಾರತ ತಂಡವು ODI ಮತ್ತು T20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಎಲ್ಲಾ 12 ಪಂದ್ಯಗಳನ್ನು ಗೆದ್ದಿತ್ತು. ಆದರೆ ಅಕ್ಟೋಬರ್‌ 24 ರಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನವು 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಟೀಮ್ ಇಂಡಿಯಾ ವಿಶ್ವಕಪ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿತ್ತು. ಈ ಪಂದ್ಯದಲ್ಲಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದು ಎಡಗೈ ವೇಗಿ ಶಾಹೀನ್ ಅಫ್ರಿದಿ. ಆರಂಭದಲ್ಲೇ ರೋಹಿತ್ ಶರ್ಮಾರನ್ನು ಎಲ್​ಬಿಡಬ್ಲೂ ಮಾಡಿದ್ದ ಅಫ್ರಿದಿ, ಅದರ ಬೆನ್ನಲ್ಲೇ ಕೆಎಲ್ ರಾಹುಲ್​ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಇನ್ನು 18ನೇ ಓವರ್​ನಲ್ಲಿ ವಿರಾಟ್ ಕೊಹ್ಲಿಯ ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣರಾಗಿದ್ದರು.

ಇದಾಗಿ ವಾರಗಳೇ ಕಳೆದರೂ ಇದೀಗ ಟೀಮ್ ಇಂಡಿಯಾ ಆಟಗಾರರ ಔಟಾಗಿರುವ ವಿಷಯ ಮತ್ತೆ ಮುನ್ನಲೆಗೆ ಬಂದಿದೆ. ಇದಕ್ಕೆ ಕಾರಣ ಶಾಹೀನ್ ಅಫ್ರಿದಿ ಭಾರತದ ಬ್ಯಾಟರುಗಳನ್ನು ಅಪಹಾಸ್ಯ ಮಾಡಿರುವುದು. ಸ್ಕಾಟ್ಲೆಂಡ್​ ವಿರುದ್ದದ ಕೊನೆಯ ಲೀಗ್​ ಪಂದ್ಯದ ವೇಳೆ ಶಾಹೀನ್ ಅಫ್ರಿದಿ ಡೀಪ್ ಸ್ಕ್ವೇರ್​ ಲೆಗ್​ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದರು.

ಈ ವೇಳೆ ಅಭಿಮಾನಿಗಳು ರೋಹಿತ್ ಶರ್ಮಾ, ಕೆಎಲ್ ರಾಹುಲ್ ಜೋರಾಗಿ ಕೂಗಲಾರಂಭಿಸಿದ್ದಾರೆ. ಇತ್ತ ಅಭಿಮಾನಿಗಳ ಪ್ರೋತ್ಸಾಹ ಮುಗಿಲು ಮುಟ್ಟುತ್ತಿದ್ದಂತೆ ಶಾಹೀನ್ ಅಫ್ರಿದಿ, ರೋಹಿತ್ ಶರ್ಮಾ ಹೇಗೆ ಔಟಾಗಿದ್ದರು ಎಂಬುದನ್ನು ತೋರಿಸಿದರು. ಇದರ ಬೆನ್ನಲ್ಲೇ ರಾಹುಲ್ ಹೆಸರು ಕೂಗಲಾರಂಭಿಸಿದರು. ಇದೇ ವೇಳೆ ರಾಹುಲ್ ಕ್ಲೀನ್ ಬೌಲ್ಡ್​ ಆಗಿದ್ದೇಕೆ ಎಂಬುದನ್ನು ಅನುಕರಿಸಿದರು. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿಯ ಹೆಸರು ಕೂಗುತ್ತಿದ್ದಂತೆ ಟೀಮ್ ಇಂಡಿಯಾ ನಾಯಕ ಹೇಗೆ ಔಟಾಗಿದ್ದರು ಎಂಬುದನ್ನೂ ಸಹ ಗೇಲಿ ಮಾಡಿದರು. ಇದೀಗ ಶಾಹೀನ್ ಅಫ್ರಿದಿಯ ಅಪಹಾಸ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

 

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ: India T20 squad: ಟೀಮ್ ಇಂಡಿಯಾಗೆ ಹೊಸ ನಾಯಕ: ಯುವ ಪಡೆಯನ್ನು ಪ್ರಕಟಿಸಿದ ಬಿಸಿಸಿಐ

(T20 World Cup 2021: Shaheen Afridi imitates Rohit Rahul and Kohli’s wicket)