T20 World Cup 2021: ಪಾಕಿಸ್ತಾನ್-ಆಸ್ಟ್ರೇಲಿಯಾ 2ನೇ ಸೆಮಿಫೈನಲ್: ಪಾಕ್ ಆಟಗಾರರಿಗೆ ಜ್ವರ
Pakistan vs Australia Semi Final: ಮೊಹಮ್ಮದ್ ರಿಜ್ವಾನ್ , ಬಾಬರ್ ಅಜಮ್ (ನಾಯಕ) , ಫಖರ್ ಝಮಾನ್ , ಮೊಹಮ್ಮದ್ ಹಫೀಜ್ , ಶೋಯೆಬ್ ಮಲಿಕ್ , ಆಸಿಫ್ ಅಲಿ , ಶಾದಾಬ್ ಖಾನ್ , ಇಮಾದ್ ವಾಸಿಂ.
ಐಸಿಸಿ ಟಿ20 ವಿಶ್ವಕಪ್ನ (T20 World Cup 2021) ಎರಡನೇ ಸೆಮಿಫೈನಲ್ನಲ್ಲಿ ಪಾಕಿಸ್ತಾನ್ ಹಾಗೂ ಆಸ್ಟ್ರೇಲಿಯಾ (Pakistan vs Australia) ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಪಾಕ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಇಬ್ಬರು ಪ್ರಮುಖ ಆಟಗಾರರಾದ ಶೊಯೇಬ್ ಮಲಿಕ್ ಹಾಗೂ ಮೊಹಮ್ಮದ್ ರಿಜ್ವಾನ್ ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರು ಬುಧವಾರ ನಡೆದ ಅಭ್ಯಾಸದ ವೇಳೆ ಕಾಣಿಸಿಕೊಂಡಿರಲಿಲ್ಲ. ಇನ್ನು ಇಬ್ಬರು ಆಟಗಾರರನ್ನು ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗಿದ್ದು, ಇಬ್ಬರ ವರದಿಯು ನೆಗೆಟಿವ್ ಬಂದಿದ್ದು, ವೈದ್ಯರು ವಿಶ್ರಾಂತಿ ಸೂಚಿಸಿದ್ದಾರೆ. ಗುರುವಾರ ಮತ್ತೊಮ್ಮೆ ತಪಾಸಣೆಗೆ ಒಳಪಡಲಿದ್ದು, ಆ ಬಳಿಕ ಆಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಒಂದು ವೇಳೆ ಜ್ವರ ಕಡಿಮೆಯಾಗದಿದ್ದರೆ, ಆಸೀಸ್ ವಿರುದ್ದ ನಿರ್ಣಾಯಕ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ.
ಲೀಗ್ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ್ ಸೆಮಿಫೈನಲ್ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ದ ಮುಖಾಮುಖಿಯಾಗುತ್ತಿರುವುದು ವಿಶೇಷ. ದುಬೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಕಣಕ್ಕಿಳಿಯದಿದ್ದರೆ ಪಾಕ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಇನ್ನೊಂದೆಡೆ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿರುವ ಶೊಯೇಬ್ ಮಲಿಕ್ ಕೂಡ ಜ್ವರದಿಂದ ಬಳಲುತ್ತಿರುವುದು ಪಾಕ್ ತಂಡದ ಚಿಂತೆಯನ್ನು ಹೆಚ್ಚಿಸಿದೆ.
ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್) , ಬಾಬರ್ ಅಜಮ್ (ನಾಯಕ) , ಫಖರ್ ಝಮಾನ್ , ಮೊಹಮ್ಮದ್ ಹಫೀಜ್ , ಶೋಯೆಬ್ ಮಲಿಕ್ , ಆಸಿಫ್ ಅಲಿ , ಶಾದಾಬ್ ಖಾನ್ , ಇಮಾದ್ ವಾಸಿಂ , ಹಸನ್ ಅಲಿ , ಹಾರಿಸ್ ರೌಫ್ , ಶಹೀನ್ ಆಫ್ರಿದಿ , ಮೊಹಮ್ಮದ್ ನವಾಜ್ , ಹೈದರ್ ಅಲಿ , ಮೊಹಮ್ಮದ್ ವಾಸಿಂ ಜೂನಿಯರ್ , ಸರ್ಫರಾಜ್ ಅಹಮದ್
ಆಸ್ಟ್ರೇಲಿಯಾ ತಂಡ: ಆರೋನ್ ಫಿಂಚ್ (ನಾಯಕ) , ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್) , ಡೇವಿಡ್ ವಾರ್ನರ್ , ಮಿಚೆಲ್ ಮಾರ್ಷ್ , ಗ್ಲೆನ್ ಮ್ಯಾಕ್ಸ್ವೆಲ್ , ಸ್ಟೀವನ್ ಸ್ಮಿತ್ , ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮ್ಮಿನ್ಸ್ , ಮಿಚೆಲ್ ಸ್ಟಾರ್ಕ್ ,ಆ್ಯಡಂ ಝಂಪಾ , ಜೋಶ್ ಹ್ಯಾಝಲ್ವುಡ್ , ಕೇನ್ ರಿಚರ್ಡ್ಸನ್ , ಆಷ್ಟನ್ ಅಗಾರ್ , ಮಿಚೆಲ್ ಸ್ವೀಪ್ಸನ್ , ಜೋಶ್ ಇಂಗ್ಲಿಸ್
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ
ಇದನ್ನೂ ಓದಿ: IPL 2022: ಯುವ ನಾಯಕನ ಮೇಲೆ ಕಣ್ಣಿಟ್ಟಿರುವ CSK
(T20 World Cup 2021: Mohammad Rizwan, Shoaib Malik miss training with mild flu ahead of semis)