T20 World Cup 2022: ಟಿ20 ವಿಶ್ವಕಪ್​ಗೆ ಹೊಸ ಜೆರ್ಸಿ ಅನಾವರಣಗೊಳಿಸಿದ ಆಸ್ಟ್ರೇಲಿಯಾ

Australia New Jersey for T20 World Cup 2022: ಈ ಕಿಟ್ ಅನ್ನು ಆಂಟಿ ಫಿಯೋನಾ ಕ್ಲಾರ್ಕ್ ಮತ್ತು ಕರ್ಟ್ನಿ ಹ್ಯಾಗನ್ ಅವರು ಆಸಿಕ್ಸ್ ಸಹಯೋಗದೊಂದಿಗೆ ವಿನ್ಯಾಸಗೊಳಿಸಿದ್ದಾರೆ.

T20 World Cup 2022: ಟಿ20 ವಿಶ್ವಕಪ್​ಗೆ ಹೊಸ ಜೆರ್ಸಿ ಅನಾವರಣಗೊಳಿಸಿದ ಆಸ್ಟ್ರೇಲಿಯಾ
Australia New Jersey for T20 WC
Edited By:

Updated on: Sep 14, 2022 | 1:32 PM

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗಾಗಿ ಈಗಾಗಲೇ ಬಹುತೇಕ ತಂಡಗಳ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಇದೀಗ ಎಲ್ಲಾ ತಂಡಗಳು ಟಿ20 ವಿಶ್ವಕಪ್ ಜೆರ್ಸಿಯನ್ನು ಅನಾವರಣಗೊಳಿಸಲು ಸಜ್ಜಾಗುತ್ತಿದೆ. ಅದರಲ್ಲೂ ಟಿ20 ವಿಶ್ವಕಪ್​ಗೆ ಆತಿಥ್ಯವಹಿಸುತ್ತಿರುವ ಆಸ್ಟ್ರೇಲಿಯಾ ತನ್ನ ನೂತನ ಜೆರ್ಸಿಯನ್ನು ಪ್ರದರ್ಶಿಸಿದೆ.

ಆಸ್ಟ್ರೇಲಿಯಾ ತಂಡದ ಈ ಹೊಸ ಜೆರ್ಸಿಯು ಹಳದಿ ಬಣ್ಣದಲ್ಲೇ ಇದ್ದು, ತೋಳಿನ ಭಾಗಕ್ಕೆ ಕಪ್ಪು ಬಣ್ಣವನ್ನು ನೀಡಲಾಗಿದೆ. ಅದರ ಜೊತೆ ಹಸಿರು ಮತ್ತು ಕೆಂಪು ಮಿಶ್ರಿತ ಕಲಾಕೃತಿಯ ವಿನ್ಯಾಸಗಳನ್ನು ನೀಡಲಾಗಿದೆ. ಇನ್ನು ಈ ಜೆರ್ಸಿಯ ಕಿಟ್​ನಲ್ಲಿರುವ ಪ್ಯಾಂಟ್​ಗಳು ಕಪ್ಪು ಬಣ್ಣದಲ್ಲಿರಲಿದೆ.

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಈ ಕಿಟ್ ಅನ್ನು ಆಂಟಿ ಫಿಯೋನಾ ಕ್ಲಾರ್ಕ್ ಮತ್ತು ಕರ್ಟ್ನಿ ಹ್ಯಾಗನ್ ಅವರು ಆಸಿಕ್ಸ್ ಸಹಯೋಗದೊಂದಿಗೆ ವಿನ್ಯಾಸಗೊಳಿಸಿದ್ದಾರೆ. ಈ ಜೋಡಿಯು ಹಿಂದೆ ಆಸ್ಟ್ರೇಲಿಯಾ ತಂಡ ಧರಿಸಿರುವ ಇತರ ಜೆರ್ಸಿಗಳ ವಿನ್ಯಾಸಗಳನ್ನು ಕೂಡ ಮಾಡಿದ್ದರು.

ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡ:

ಆರೋನ್ ಫಿಂಚ್ (ನಾಯಕ), ಪ್ಯಾಟ್ ಕಮ್ಮಿನ್ಸ್ (ಉಪನಾಯಕ), ಆಷ್ಟನ್ ಅಗರ್, ಟಿಮ್ ಡೇವಿಡ್, ಜೋಶ್ ಹ್ಯಾಝಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್. ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್ ಮತ್ತು ಆ್ಯಡಂ ಝಂಪಾ.

ಟಿ-20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ:

ಸೂಪರ್ 12: ಗ್ರೂಪ್ 1 ಪಂದ್ಯಗಳ ವೇಳಾಪಟ್ಟಿ

  • ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ – 23 ಅಕ್ಟೋಬರ್ – 3:30 PM
  • ಇಂಗ್ಲೆಂಡ್ vs ವೆಸ್ಟ್​ ಇಂಡೀಸ್ – 23 ಅಕ್ಟೋಬರ್ – 7:30 PM
  • A1 vs B2 – 24 ಅಕ್ಟೋಬರ್ – 3:30 PM
  • ದಕ್ಷಿಣ ಆಫ್ರಿಕಾ vs ವೆಸ್ಟ್​ ಇಂಡೀಸ್ – ಅಕ್ಟೋಬರ್ 26 – 3:30 PM
  • ಇಂಗ್ಲೆಂಡ್ vs B2 – ಅಕ್ಟೋಬರ್ 24 – 3:30 PM
  • ಆಸ್ಟ್ರೇಲಿಯಾ vs A2 – ಅಕ್ಟೋಬರ್ 28 – 7:30 PM
  • ವೆಸ್ಟ್​ ಇಂಡೀಸ್ vs B2 – ಅಕ್ಟೋಬರ್ 29 – 3:30 PM
  • ದಕ್ಷಿಣ ಆಫ್ರಿಕಾ vs A1 – ಅಕ್ಟೋಬರ್ 30 – 3:30 PM
  • ಇಂಗ್ಲೆಂಡ್ vs ಆಸ್ಟ್ರೇಲಿಯಾ – ಅಕ್ಟೋಬರ್ 30 – 7:30 PM
  • ಇಂಗ್ಲೆಂಡ್ vs A1 – ನವೆಂಬರ್ 01 – 7:30 PM
  • ದಕ್ಷಿಣ ಆಪ್ರಿಕಾ vs B2 – ನವೆಂಬರ್ 02 – 3:30 PM
  • ಆಸ್ಟ್ರೇಲಿಯಾ vs B2 – ನವೆಂಬರ್ 04 – 3:30 PM
  • ವೆಸ್ಟ್​ ಇಂಡೀಸ್ vs A1 – ನವೆಂಬರ್ 04- 7:30 PM
  • ಆಸ್ಟ್ರೇಲಿಯಾ vs ವೆಸ್ಟ್​ ಇಂಡೀಸ್ – ನವೆಂಬರ್ 06 – 3:30 PM
  • ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ – ನವೆಂಬರ್ 06 – 7:30 PM

ಸೂಪರ್ 12: ಗ್ರೂಪ್ 2 ಪಂದ್ಯಗಳ ವೇಳಾಪಟ್ಟಿ:

  • ಭಾರತ vs ಪಾಕಿಸ್ತಾನ – ಅಕ್ಟೋಬರ್ 24 – 7:30 PM
  • ಅಫ್ಘಾನಿಸ್ತಾನ vs B1 – ಅಕ್ಟೋಬರ್ 25 – 7:30 PM
  • ಪಾಕಿಸ್ತಾನ vs ನ್ಯೂಜಿಲೆಂಡ್ – ಅಕ್ಟೋಬರ್ 26 – 7:30 PM
  • B1 vs A2 – 27 ಅಕ್ಟೋಬರ್ – 7:30 PM
  • ಅಫ್ಘಾನಿಸ್ತಾನ vs ಪಾಕಿಸ್ತಾನ – 29 ಅಕ್ಟೋಬರ್ – 7:30 PM
  • ಅಫ್ಘಾನಿಸ್ತಾನ vs A2 – 31 ಅಕ್ಟೋಬರ್ – 3:30 PM
  • ಭಾರತ vs ನ್ಯೂಜಿಲೆಂಡ್ – 31 ಅಕ್ಟೋಬರ್ – 7:30 PM
  • ಪಾಕಿಸ್ತಾನ vs A2 – 2 ನವೆಂಬರ್ – 7:30 PM
  • ನ್ಯೂಜಿಲೆಂಡ್ vs  B1 – 3 ನವೆಂಬರ್ – 3:30 PM
  • ಭಾರತ vs ಅಫ್ಘಾನಿಸ್ತಾನ – 3 ನವೆಂಬರ್ – 7:30 PM
  • ನ್ಯೂಜಿಲೆಂಡ್ vs A2 – 5 ನವೆಂಬರ್ – 3:30 PM
  • ಭಾರತ vs B1 – 5 ನವೆಂಬರ್ – 7:30 PM
  • ನ್ಯೂಜಿಲೆಂಡ್ vs ಅಫ್ಘಾನಿಸ್ತಾನ – 7 ನವೆಂಬರ್ – 3:30 PM
  • ಪಾಕಿಸ್ತಾನ vs B1 – 7 ನವೆಂಬರ್ – 7:30 PM
  • ಭಾರತ vs A2 – 8 ನವೆಂಬರ್ – 7:30 PM

ಸೆಮಿ ಫೈನಲ್ ಪಂದ್ಯ:

  • ಸೆಮಿ ಫೈನಲ್ 1 – A1 vs B2 – 10 ನವೆಂಬರ್
  • ಸೆಮಿ ಫೈನಲ್ 2- A2 vs B1 – 11 ನವೆಂಬರ್

ಫೈನಲ್ ಪಂದ್ಯ: ನವೆಂಬರ್ 14, 2022

Published On - 1:31 pm, Wed, 14 September 22