BAN Vs PAK, Match Report: ಭಾರತದೊಂದಿಗೆ ಸೆಮಿಫೈನಲ್ಗೆ ಎಂಟ್ರಿಕೊಟ್ಟ ಪಾಕಿಸ್ತಾನ..!
ICC Men's T20 World Cup BAN Vs PAK Match Report: ಭಾನುವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಿದ್ದ ಪಾಕ್ ತಂಡ ಐದು ವಿಕೆಟ್‌ಗಳಿಂದ ಗೆದ್ದು ಭಾರತದೊಂದಿಗೆ ಸೆಮಿಫೈನಲ್ ಟಿಕೆಟ್ ಕಾಯ್ದಿರಿಸಿತು.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ (T20 World Cup 2022) ರೋಚಕತೆಯ ಪಾದರಸ ಎಷ್ಟರಮಟ್ಟಿಗೆ ಹೆಚ್ಚಿದೆ ಎಂದರೆ ಸೂಪರ್ 12 ರ ಕೊನೆಯ ದಿನದಂದು ಸೆಮಿಫೈನಲ್‌ನ ನಾಲ್ಕು ತಂಡಗಳು ಯಾವುವು ಎಂಬುದು ನಿರ್ಧರವಾಗಿದೆ. ಸೂಪರ್ 12 ರಲ್ಲಿ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಹೀನಾಯ ಸೋಲಿನ ಹೊರತಾಗಿಯೂ, ಪಾಕಿಸ್ತಾನ ತಂಡವು (Pakistan’s team) ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿತು. ಭಾನುವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಿದ್ದ ಪಾಕ್ ತಂಡ ಐದು ವಿಕೆಟ್‌ಗಳಿಂದ ಗೆದ್ದು ಭಾರತದೊಂದಿಗೆ ಸೆಮಿಫೈನಲ್ ಟಿಕೆಟ್ ಕಾಯ್ದಿರಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಪಾಕಿಸ್ತಾನದ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 127 ರನ್‌ಗಳಿಸಲಷ್ಟೇ ಶಕ್ತವಾಯಿತು. ಪಾಕ್ ಪರ ಮಿಂಚಿದ ಅಫ್ರಿದಿ 22 ರನ್ ನೀಡಿ 4 ವಿಕೆಟ್ ಪಡೆದರೆ, ಶಾದಾಬ್ ಖಾನ್ 30 ರನ್ ನೀಡಿ 2 ವಿಕೆಟ್ ಪಡೆದರು.
ಬಾಬರ್-ರಿಜ್ವಾನ್ ನಿಧಾನಗತಿಯ ಆರಂಭ
ಪಾಕಿಸ್ತಾನದ ಆರಂಭಿಕ ಜೋಡಿ ತಂಡಕ್ಕೆ ನಿಧಾನವಾದರೂ ನಿಧಾನಗತಿಯ ಆರಂಭವನ್ನು ನೀಡಿತು. ಇವರಿಬ್ಬರು ಮೊದಲ ವಿಕೆಟ್‌ಗೆ 57 ರನ್‌ಗಳ ಜೊತೆಯಾಟವಾಡಿದರು. ನಸುಮ್ ಅಹ್ಮದ್ 10ನೇ ಓವರ್‌ನಲ್ಲಿ ಬಾಬರ್ ಅಜಮ್ ಅವರ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು. ಬಾಬರ್ ಅವರ ಎಸೆತದಲ್ಲಿ ಮುಸ್ತಫಿಜರ್ಗೆ ಕ್ಯಾಚ್ ನೀಡಿದರು. ಅದೇ ಸಮಯದಲ್ಲಿ, ಮುಂದಿನ ಓವರ್‌ನಲ್ಲಿ ರಿಜ್ವಾನ್ ಕೂಡ ಇಬಾದತ್ ಹುಸೇನ್‌ಗೆ ಬಲಿಯಾದರು. ನಂತರ ಮೊಹಮ್ಮದ್ ನವಾಜ್ ಮತ್ತು ಹ್ಯಾರಿಸ್ ತಂಡಕ್ಕೆ ಪ್ರಮುಖ ಜೊತೆಯಾಟವನ್ನು ಮಾಡಿ ಉಳಿದ ಕೆಲಸವನ್ನು ಪೂರ್ಣಗೊಳಿಸಿದರು.
ಶಾಂಟೊ ಏಕಾಂಗಿ ಹೋರಾಟ
ಇದಕ್ಕೂ ಮೊದಲು ಕಷ್ಟಕರವಾದ ಪಿಚ್‌ನಲ್ಲಿ ಎಡಗೈ ಓಪನರ್ ನಜ್ಮುಲ್ ಹೊಸೈನ್ ಶಾಂಟೊ 48 ಎಸೆತಗಳಲ್ಲಿ 54 ರನ್ ಗಳಿಸಿದರು. ಆದರೆ ಇನ್ನುಳಿದಂತೆ ಬಾಂಗ್ಲಾದೇಶ ತಂಡ ಕೊನೆಯಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಅಫ್ರಿದಿ 22 ರನ್ ನೀಡಿ ನಾಲ್ಕು ವಿಕೆಟ್ ಪಡೆದರೆ, ಶಾಂಟೊ ಪಂದ್ಯಾವಳಿಯಲ್ಲಿ ತಮ್ಮ ಎರಡನೇ ಅರ್ಧಶತಕವನ್ನು ಗಳಿಸಿದರು. ಲಿಟನ್ ದಾಸ್ ಬೇಗನೆ ತಮ್ಮ ವಿಕೆಟ್ ಒಪ್ಪಿಸಿದ ಬಳಿಕ, ಶಾಂಟೊ ಮತ್ತು ಸೌಮ್ಯ ಸರ್ಕಾರ್ (20 ರನ್, 17 ಎಸೆತ, ಒಂದು ಬೌಂಡರಿ, ಒಂದು ಸಿಕ್ಸರ್) ಎರಡನೇ ವಿಕೆಟ್‌ಗೆ 47 ಎಸೆತಗಳಲ್ಲಿ 72 ರನ್ ಗಳಿಸಿ ಬಾಂಗ್ಲಾದೇಶಕ್ಕೆ ಉತ್ತಮ ಅಡಿಪಾಯ ಹಾಕಿದರು.
ಈ ವೇಳೆ ತಂಡ 150ಕ್ಕೂ ಹೆಚ್ಚು ರನ್ ಗಳಿಸುವ ಸೂಚನೆ ನೀಡಿತ್ತು. ಆದರೆ ನಂತರ ಶಾದಾಬ್ ಖಾನ್ (30ಕ್ಕೆ 2) ಬಾಂಗ್ಲಾ ತಂಡಕ್ಕೆ ದುಸ್ವಪ್ನವಾಗಿ ಕಾಡಲಾರಂಭಿಸಿದರು. ಈ ಲೆಗ್ ಸ್ಪಿನ್ನರ್ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದರೆ, ಬಾಂಗ್ಲಾದೇಶದ ನಾಯಕ ಶಕಿಬುಲ್ ಹಸನ್ ವಿವಾದಾತ್ಮಕ ಡಿಆರ್ಎಸ್ನಲ್ಲಿ ಶೂನ್ಯಕ್ಕೆ ಔಟಾದರು. ನಂತರ ಅಫ್ರಿದಿ ಎರಡು ಓವರ್‌ಗಳಲ್ಲಿ ಮೊಸದ್ದೆಕ್ ಹೊಸೈನ್, ನೂರುಲ್ ಹಸನ್ ಮತ್ತು ತಸ್ಕಿನ್ ಅಹ್ಮದ್ ಅವರ ವಿಕೆಟ್ ಪಡೆದರು. ವೇಗಿ ಹ್ಯಾರಿಸ್ ರೌಫ್ ಕೂಡ ಉತ್ತಮವಾಗಿ ಬೌಲಿಂಗ್ ಮಾಡಿ 21 ರನ್ ನೀಡಿ ಒಂದು ವಿಕೆಟ್ ಪಡೆದರು.
Published On - 1:04 pm, Sun, 6 November 22
