T20I World Cup 2022: ಇಂದು ಬ್ರಿಸ್ಬೇನ್ ತಲುಪಲಿದೆ ಭಾರತ: ಆಸೀಸ್, ಕಿವೀಸ್ ವಿರುದ್ಧ ಅಭ್ಯಾಸ ಪಂದ್ಯ ಯಾವಾಗ?, ಎಷ್ಟು ಗಂಟೆಗೆ?

| Updated By: Vinay Bhat

Updated on: Oct 14, 2022 | 9:38 AM

India vs Australia Warm-up Match: ಇಂದು ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಟಿ20 ವಿಶ್ವಕಪ್ ಅಧಿಕೃತ ಅಭ್ಯಾಸ ಪಂದ್ಯಕ್ಕಾಗಿ ಬ್ರಿಸ್ಬೇನ್​ಗೆ ಪ್ರಯಾಣ ಬೆಳೆಸಲಿದ್ದಾರೆ.

T20I World Cup 2022: ಇಂದು ಬ್ರಿಸ್ಬೇನ್ ತಲುಪಲಿದೆ ಭಾರತ: ಆಸೀಸ್, ಕಿವೀಸ್ ವಿರುದ್ಧ ಅಭ್ಯಾಸ ಪಂದ್ಯ ಯಾವಾಗ?, ಎಷ್ಟು ಗಂಟೆಗೆ?
Team India T20 World Cup
Follow us on

ಐಸಿಸಿ ಟಿ20 ವಿಶ್ವಕಪ್​ಗಾಗಿ (T20I World Cup) ಆಸ್ಟ್ರೇಲಿಯಾಕ್ಕೆ ತೆರಳಿರುವ ಭಾರತಕ್ಕೆ ಆರಂಭದಲ್ಲೇ ಸೋಲು-ಗೆಲುವಿನ ದರ್ಶನವಾಗಿದೆ. ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ಆಡಿದ ಎರಡು ಅನಧಿಕೃತ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಪಡೆ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲಿಲ್ಲ. ಮೊದಲ ಅಭ್ಯಾಸ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ 36 ರನ್​ಗಳಿಂದ ಸೋಲುಂಡಿತು. ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮಿಂಚಿದರೆ, ಎರಡನೇ ಪಂದ್ಯದಲ್ಲಿ ಕೆಎಲ್ ರಾಹುಲ್ ಅರ್ಧಶತಕ ಸಿಡಿಸಿದರು. ಇದರ ನಡುವೆ ಎರಡೂ ಪ್ರ್ಯಾಕ್ಟೀಸ್ ಮ್ಯಾಚ್​ನಲ್ಲಿ ವಿರಾಟ್ ಕೊಹ್ಲಿ (Virat Kohli) ಬ್ಯಾಟಿಂಗ್ ಮಾಡಲಿಲ್ಲ. ಬದಲಾಗಿ ನೆಟ್​ನಲ್ಲಿ ಒಬ್ಬರೇ ಬೆವರು ಹರಿಸುತ್ತಿದ್ದರು. ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಫೀಲ್ಡಿಂಗ್ ಮಾತ್ರ ಮಾಡಿದ್ದರು. ಈ ವರೆಗೆ ಅಭ್ಯಾಸ ಪಂದ್ಯಕ್ಕಾಗಿ ಪರ್ತ್​ನಲ್ಲಿದ್ದ ಟೀಮ್ ಇಂಡಿಯಾ (Team India) ಇದೀಗ ಬ್ರಿಸ್ಬೇನ್​ಗೆ ತೆರಳಲು ಸಜ್ಜಾಗಿದೆ.

ಇಂದು ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಅಧಿಕೃತ ಅಭ್ಯಾಸ ಪಂದ್ಯಕ್ಕಾಗಿ ಬ್ರಿಸ್ಬೇನ್​ಗೆ ಪ್ರಯಾಣ ಬೆಳೆಸಲಿದ್ದಾರೆ. ಅಕ್ಟೋಬರ್ 17 ರಂದು ಬ್ರಿಸ್ಬೇನ್​ನ ಗಬ್ಬಾ ಕ್ರೀಡಾಂಗಣದಲ್ಲಿ ರೋಹಿತ್ ಪಡೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದು ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 9:30 ಕ್ಕೆ ಶುರುವಾಗಲಿದೆ.

ಕೊನೆಯ ವಾರ್ಮ್​-ಅಪ್ ಮ್ಯಾಚ್ ಅಕ್ಟೋಬರ್ 19 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಇದು ಮಧ್ಯಾಹ್ನ 1:30 ಕ್ಕೆ ಶುರುವಾಗಲಿದೆ. ಇದಾದ ಬಳಿಕ ಟೀಮ್ ಇಂಡಿಯಾ ಅ. 23 ರಂದು ಮೆಲ್ಬೋರ್ನ್‌ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಇದನ್ನೂ ಓದಿ
Virat Kohli: ಅಭ್ಯಾಸ ಪಂದ್ಯದಲ್ಲಿ ಹೀನಾಯವಾಗಿ ಸೋತ ಬೆನ್ನಲ್ಲೇ ಮೈದಾನಕ್ಕಿಳಿದ ಕೊಹ್ಲಿ, ರೋಹಿತ್: ಯಾಕೆ ಗೊತ್ತೇ?
SL-W vs PAK-W: ಪಾಕ್ ಮಹಿಳಾ ತಂಡದ ವಿರುದ್ಧ 1 ರನ್​ ರೋಚಕ ಜಯ ಸಾಧಿಸಿದಾಗ ಶ್ರೀಲಂಕಾ ಪ್ಲೇಯರ್ಸ್ ಏನು ಮಾಡಿದ್ರು ನೋಡಿ
T20 World Cup: ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಟೀಂ ಇಂಡಿಯಾ ಸೃಷ್ಟಿಸಿರುವ ಪ್ರಮುಖ 5 ದಾಖಲೆಗಳಿವು
Video: ಹೀನಾಯ ಸೋಲಿನ ಬಳಿಕ 6 ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ

ಅಭ್ಯಾಸ ಪಂದ್ಯದಲ್ಲಿ ಸೋಲು:

ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ಮೊದಲ ಅನಧಿಕೃತ ಅಭ್ಯಾಸ ಪಂದ್ಯದಲ್ಲಿ ಗೆದ್ದಿದ್ದ ಭಾರತ ಎರಡನೇ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಪಶ್ಚಿಮ ಆಸ್ಟ್ರೇಲಿಯಾ ನಿಕ್ ಹಾಬ್ಸನ್ ಮತ್ತು ಡಿ’ಆರ್ಸಿ ಶಾರ್ಟ್ ಅವರ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಆರ್. ಅಶ್ವಿನ್ ಮೂರು ವಿಕೆಟ್‌ ಪಡೆದು ಮಿಂಚಿದರೆ, ಹರ್ಷಲ್ ಪಟೇಲ್ 2 ಹಾಗೂ ಅರ್ಶ್​ದೀಪ್ ಸಿಂಗ್ 1 ವಿಕೆಟ್ ಕಿತ್ತರು.

169 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡ ಆರಂಭದಲ್ಲಿ ನಿಧಾನಗತಿ ಆಟ ಆಡಿದ್ದು ಸಂಕಷ್ಟಕ್ಕೆ ಸಿಲುಕಿತು. ಜೊತೆಗೆ ಪಂತ್ (9) ವಿಕೆಟ್ ಕಳೆದುಕೊಂಡಿತು. ಸಿಕ್ಕ ಅವಕಾಶವನ್ನು ದೀಪಕ್ ಹೂಡ 6 ಉಪಯೋಗಿಸಿಕೊಳ್ಳಲಿಲ್ಲ. ಹಾರ್ದಿಕ್ ಪಾಂಡ್ಯ ಎರಡು ಸಿಕ್ಸ್​ ಸಿಡಿಸಿ 9 ಎಸೆತಗಳಲ್ಲಿ 17 ರನ್​ ಗಳಿಸಿ ನಿರ್ಗಮಿಸಿದರು. ಆಲ್‌ರೌಂಡರ್ ಅಕ್ಷರ್ ಪಟೇಲ್ ಆಟ2 ರನ್​ಗೆ ಅಂತ್ಯವಾಯಿತು. ಫಿನಿಶರ್ ದಿನೇಶ್ ಕಾರ್ತಿಕ್ (10) ಆಟ ಕೂಡ ನಡೆಯಲಿಲ್ಲ.

ಅರ್ಧಶತಕದ ಬಳಿಕ ಸ್ಫೋಟಕ ಆಟವಾಡಿದ ರಾಹುಲ್​ಗೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. 55 ಎಸೆತಗಳಲ್ಲಿ 9 ಬೌಂಡರಿ ಮತ್ತು ಎರಡು ಸಿಕ್ಸರ್​ನೊಂದಿಗೆ ರಾಹುಲ್ 74 ರನ್ ಗಳಿಸಿ ಔಟಾದರು. ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 8 ವಿಕೆಟ್​ ಕಳೆದುಕೊಂಡು ಕೇವಲ 132 ರನ್​ ಗಳಿಸಲು ಮಾತ್ರ ಶಕ್ತವಾಗಿ ಸೋಲು ಕಂಡಿತು.

Published On - 9:38 am, Fri, 14 October 22