IND vs BAN: ಆಡಿದ 9 ಪಂದ್ಯಗಳಲ್ಲಿ 5 ಶತಕ..! ಅಡಿಲೇಡ್‌ನಲ್ಲಿ ಕೊಹ್ಲಿಯನ್ನು ಕಟ್ಟಿಹಾಕುವುದೇ ಬಾಂಗ್ಲಾಕ್ಕಿರುವ ಚಿಂತೆ

| Updated By: ಪೃಥ್ವಿಶಂಕರ

Updated on: Nov 02, 2022 | 11:30 AM

Virat Kohli: ಅಡಿಲೇಡ್‌ನಲ್ಲಿ ವಿರಾಟ್ ಆಡಿರುವ 9 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 4 ಟೆಸ್ಟ್, 4 ಏಕದಿನ ಮತ್ತು 1 T20 ಪಂದ್ಯ ಒಳಗೊಂಡಿದೆ. ಇದರಲ್ಲಿ ಟೆಸ್ಟ್‌ನಲ್ಲಿ 509 ರನ್, ಏಕದಿನದಲ್ಲಿ 244 ರನ್ ಮತ್ತು T20 ಪಂದ್ಯದಲ್ಲಿ 90 ರನ್ ಬಾರಿಸಿದ್ದಾರೆ.

IND vs BAN: ಆಡಿದ 9 ಪಂದ್ಯಗಳಲ್ಲಿ 5 ಶತಕ..! ಅಡಿಲೇಡ್‌ನಲ್ಲಿ ಕೊಹ್ಲಿಯನ್ನು ಕಟ್ಟಿಹಾಕುವುದೇ ಬಾಂಗ್ಲಾಕ್ಕಿರುವ ಚಿಂತೆ
Virat Kohli
Follow us on

ಅಡಿಲೇಡ್‌ನಲ್ಲಿ ನಡೆಯಲಿರುವ ಇಂದಿನ ಪಂದ್ಯ ಭಾರತ ಮತ್ತು ಬಾಂಗ್ಲಾದೇಶ (India and Bangladesh) ಎರಡಕ್ಕೂ ಮಹತ್ವದ್ದಾಗಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಟಿ20 ವಿಶ್ವಕಪ್ (T20 World Cup 2022) ಸೆಮಿಫೈನಲ್‌ ಹಾದಿ ಸುಗಮಗೊಳ್ಳಲಿದೆ. ಹಾಗಾಗಿಯೇ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅಡಿಲೇಡ್‌ನಲ್ಲಿ ಬದಲಾವಣೆ ತರುವ ಕನಸು ಕಾಣುತ್ತಿದ್ದಾರೆ. ಆದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಟೀಂ ಇಂಡಿಯಾ ಶತಾಯಗತಾಯ ಗೆಲುವಿಗಾಗಿಯೇ ಹೋರಾಡಲಿದೆ. ಅದಕ್ಕಾಗಿಯೇ ತಂಡ ಈಗಾಗಲೇ ಸಂಪೂರ್ಣ ಸಿದ್ದತೆ ಮಾಡಿಕೊಂಡಿದ್ದು, ಬೆಸ್ಟ್ ಪ್ಲೇಯಿಂಗ್ ಜೊತೆಗೆ ಕಣಕ್ಕಿಳಿಯಲು ತಯಾರಾಗಿದೆ. ಅಲ್ಲದೆ ಕಳೆದ ಪಂದ್ಯದಲ್ಲಿ ಆಫ್ರಿಕಾ ವಿರುದ್ಧ ರನ್ ಗಳಿಸಲು ವಿಫಲರಾಗಿದ್ದ ಕಿಂಗ್ ಕೊಹ್ಲಿ (Virat Kohli) ಈ ಪಂದ್ಯದಲ್ಲಿ ಮಿಂಚಲು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಅಡಿಲೇಡ್ ಮೈದಾನ ವಿರಾಟ್ ಕೊಹ್ಲಿಗೆ ನೆಚ್ಚಿನ ಮೈದಾನವಾಗಿದ್ದು, ಕೊಹ್ಲಿ ಇಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಅಡಿಲೇಡ್​ನಲ್ಲಿ ಕೊಹ್ಲಿಗಿಲ್ಲ ಸರಿಸಾಟಿ

ಅಡಿಲೇಡ್ ಓವಲ್‌ನಲ್ಲಿ ವಿರಾಟ್ ಕೊಹ್ಲಿಯ ಬಿರುಸಿನ ಫಾರ್ಮ್‌ಗೆ ಇದುವರೆಗೆ 3 ತಂಡಗಳು ಬಲಿಯಾಗಿವೆ. ಹೀಗಾಗಿ ಇಂದು ಬಾಂಗ್ಲಾದೇಶ ಆ ಸಂಚಿಕೆಯಲ್ಲಿ ನಾಲ್ಕನೇ ತಂಡವಾಗಬಹುದು. ವಿರಾಟ್ ಕೊಹ್ಲಿ ಇದುವರೆಗೆ ಅಡಿಲೇಡ್‌ನಲ್ಲಿ ಆಡಿರುವ 9 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 5 ಶತಕ ಸಿಡಿಸಿದ್ದಾರೆ. ಇದು ಒಂದೇ ಸ್ಥಳದಲ್ಲಿ ಬ್ಯಾಟ್ಸ್‌ಮನ್ ಗಳಿಸಿದ ಅತಿ ಹೆಚ್ಚು ಶತಕಗಳಾಗಿವೆ. ಈ ವೇಳೆ ಅವರು 70.25ರ ಸರಾಸರಿಯಲ್ಲಿ 843 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು 7 ಪಂದ್ಯಗಳನ್ನು ಆಡಿದ್ದು, ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ತಲಾ 1 ಪಂದ್ಯವನ್ನು ಆಡಿದ್ದಾರೆ.

ಇದನ್ನೂ ಓದಿ: ENG vs NZ: 152 ಕಿ.ಮೀ ವೇಗದ ಎಸೆತವನ್ನು ಅಷ್ಟೇ ವೇಗವಾಗಿ ಸಿಕ್ಸರ್​ಗಟ್ಟಿದ ಕಿವೀಸ್ ಬ್ಯಾಟರ್..! ವಿಡಿಯೋ

ಅಡಿಲೇಡ್‌ನಲ್ಲಿ ವಿರಾಟ್ ಆಡಿರುವ 9 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 4 ಟೆಸ್ಟ್, 4 ಏಕದಿನ ಮತ್ತು 1 T20 ಪಂದ್ಯ ಒಳಗೊಂಡಿದೆ. ಇದರಲ್ಲಿ ಟೆಸ್ಟ್‌ನಲ್ಲಿ 509 ರನ್, ಏಕದಿನದಲ್ಲಿ 244 ರನ್ ಮತ್ತು T20 ಪಂದ್ಯದಲ್ಲಿ 90 ರನ್ ಬಾರಿಸಿದ್ದಾರೆ. ಭಾರತವು 2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನಲ್ಲಿ ಕೊನೆಯ ಟಿ20 ಪಂದ್ಯವನ್ನು ಆಡಿತ್ತು. ಇದರಲ್ಲಿ ಕೊಹ್ಲಿ ಅಜೇಯ 90 ರನ್ ಬಾರಿಸಿದ್ದರು. ಕೊಹ್ಲಿ ಅಬ್ಬರದ ಬ್ಯಾಟಿಂಗ್ ನೆರವಿನಿಂದಾಗಿ ಟೀಂ ಇಂಡಿಯಾ ಆ ಪಂದ್ಯವನ್ನು 37 ರನ್‌ಗಳಿಂದ ಗೆದ್ದುಕೊಂಡಿತ್ತು.

ಕೊಹ್ಲಿಯನ್ನು ಕಟ್ಟಿಹಾಕುತ್ತಾ ಬಾಂಗ್ಲಾ

ಅಡಿಲೇಡ್‌ನಲ್ಲಿ ವಿರಾಟ್ ಕೊಹ್ಲಿ ಅಬ್ಬರದೆದುರು ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಮಂಡಿಯೂರಿದ್ದು, ಇದೀಗ ಬಾಂಗ್ಲಾದೇಶದ ಸರದಿ ಬಂದಿದೆ. ಬಾಂಗ್ಲಾದೇಶವು 2015 ರ ವಿಶ್ವಕಪ್‌ನಲ್ಲಿ ಆಡಿಲೇಡ್‌ನಲ್ಲಿ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ ಅನುಭವವನ್ನು ಹೊಂದಿದೆ. ಈಗ ಈ ಅನುಭವದ ಆಧಾರದಲ್ಲಿ ಬಾಂಗ್ಲಾದೇಶಕ್ಕೆ ವಿರಾಟ್ ಕೊಹ್ಲಿಯನ್ನು ಅಡಿಲೇಡ್‌ನಲ್ಲಿ ನಿಲ್ಲಿಸುವುದು ಕಷ್ಟವಷ್ಟೇ ಅಲ್ಲ, ಅಸಾಧ್ಯ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರಿಷಭ್ ಪಂತ್(ವಿಕೆಟ್ ಕೀಪರ್), ಹರ್ಷಲ್ ಪಟೇಲ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್.

ಬಾಂಗ್ಲಾದೇಶ ತಂಡ: ಶಕಿಬ್ ಅಲ್ ಹಸನ್ (ನಾಯಕ), ನಜ್ಮುಲ್ ಹೊಸೈನ್ ಶಾಂಟೊ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನೂರುಲ್ ಹಸನ್ (ವಿಕೆಟ್ ಕೀಪರ್), ಹಸನ್ ಮಹ್ಮದ್, ಎಬಾಡೋತ್ ಇಸ್ಲಾಮ್, ಮೊಸದ್ದೆಕ್ ಹೊಸೈನ್, ತಸ್ಕಿನ್ ಅಹ್ಮದ್, ಯಾಸಿರ್ ಅಲಿ, ಇಬಾಡೋತ್ ಇಸ್ಲಾಮಿನ್, ಮುಸ್ತಫಿಜುರ್ ರೆಹಮಾನ್.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:30 am, Wed, 2 November 22