
ಟಿ20 ವಿಶ್ವಕಪ್ನ (T20 World Cup 2024) ಸೂಪರ್ 8 ಸುತ್ತಿನ ಎರಡನೇ ಪಂದ್ಯದಲ್ಲಿ ಭಾರತ ಇಂದು ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನ) ಬಾಂಗ್ಲಾದೇಶ (IND vs BAN) ವಿರುದ್ಧ ಆಡಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ಸೆಮಿಫೈನಲ್ ಸುತ್ತಿಗೆ ಇನ್ನಷ್ಟು ಹತ್ತಿರವಾಗುವ ಇರಾದೆಯಲ್ಲಿದೆ. ಭಾರತ ತಂಡ ಇದುವರೆಗಿನ ಪಯಣದಲ್ಲಿ ಅತ್ಯಂತ ಬಲಿಷ್ಠ ಬೌಲಿಂಗ್ ಪ್ರದರ್ಶನ ನೀಡಿದೆ. ಅಮೆರಿಕದಲ್ಲಿ ನಡೆದ ಪಂದ್ಯದಲ್ಲಿ ತಂಡದ ಬ್ಯಾಟ್ಸ್‌ಮನ್‌ಗಳು ಪರದಾಡುತ್ತಿದ್ದರೂ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲೂ ಭಾರತ 181 ರನ್ ಗಳಿಸುವ ಮೂಲಕ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿದೆ. ಆದರೆ, ತಂಡದ ಓಪನಿಂಗ್ ಬಗ್ಗೆ ಇನ್ನೂ ಪ್ರಶ್ನೆಗಳು ಹಾಗೆ ಉಳಿದ್ದಿವೆ. ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ (Virat Kohli- Rohit Sharma) ಜೋಡಿ ಇದುವರೆಗೆ ಉತ್ತಮ ಓಪನಿಂಗ್ ನೀಡುವಲ್ಲಿ ವಿಫಲವಾಗಿದೆ. ಈ ಮಧ್ಯೆ, ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ (Vikram Rathore) ಸುದ್ದಿಗೋಷ್ಠಿಯಲ್ಲಿ ಆರಂಭಿಕ ಜೋಡಿಯ ಬಗ್ಗೆ ಮಾತನಾಡಿದ್ದಾರೆ.
ವಿರಾಟ್ ಕೊಹ್ಲಿ ಓಪನಿಂಗ್‌ನಿಂದ ಯಾರು ಸಂತೋಷವಾಗಿಲ್ಲ ಎಂದು ನನಗೆ ತಿಳಿದಿಲ್ಲ ಎಂದು ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಅವರು, ಕೊಹ್ಲಿ ಇನ್ನಿಂಗ್ಸ್ ಆರಂಭಿಸಬೇಕು ಎಂಬುದು ಹಲವರ ಅಭಿಪ್ರಾಯವಾಗಿದೆ ಎಂದು ನಾವು ಭಾವಿಸುತ್ತೇವೆ. ಆರಂಭಿಕ ಜೋಡಿಯ ಬಗ್ಗೆ ನಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ತಂಡವು ತನ್ನ ಆರಂಭಿಕ ಜೋಡಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿಲ್ಲ. ರೋಹಿತ್-ಕೊಹ್ಲಿ ಅನುಭವಿ ಆಟಗಾರರಾಗಿದ್ದು, ಅವರು ವೆಸ್ಟ್ ಇಂಡೀಸ್‌ನಲ್ಲಿ ಉತ್ತಮವಾಗಿ ಆಡಲಿದ್ದಾರೆ ಎಂದಿದ್ದಾರೆ.
🚨 Batting Coach 𝐕𝐢𝐤𝐫𝐚𝐦 𝐑𝐚𝐭𝐡𝐨𝐮𝐫 on Virat Kohli opening
[Via Star sports]#T20WoldCup #ViratKohli pic.twitter.com/GDGDvrm6N8— Mrinmoy Sarkar (@Mrinmoy80746179) June 22, 2024
ಈ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಆರಂಭಿಕರಾಗಿದ್ದಾರೆ. ಇವರಿಬ್ಬರೂ ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 16 ಎಸೆತಗಳಲ್ಲಿ 22 ರನ್ ಗಳಿಸಿ ತಂಡಕ್ಕೆ ಆರಂಭ ನೀಡಿದರು. ಇದಾದ ಬಳಿಕ ತಂಡ 9 ಎಸೆತಗಳಲ್ಲಿ 12 ರನ್ ಗಳಿಸುವಷ್ಟರಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ವಿಕೆಟ್ ಕಳೆದುಕೊಂಡಿತು. ಅಮೆರಿಕ ವಿರುದ್ಧ ಆಡಿದ ಮೂರನೇ ಪಂದ್ಯದಲ್ಲಿ, ಈ ಆರಂಭಿಕ ಜೋಡಿ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲೇ ಬೇರ್ಪಟ್ಟಿತ್ತು. ಇದಾದ ಬಳಿಕ ಸೂಪರ್-8 ಸುತ್ತಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ತಂಡದ ಆರಂಭಿಕ ಜೋಡಿ 17 ಎಸೆತಗಳಲ್ಲಿ 11 ರನ್ ಗಳಿಸಲಷ್ಟೇ ಶಕ್ತವಾಯಿತು.
IND vs BAN: ಭಾರತ- ಬಾಂಗ್ಲಾ ಪಂದ್ಯ ನಡೆಯಲ್ಲಿರುವ ಆಂಟಿಗುವಾ ಪಿಚ್ ಯಾರಿಗೆ ಸಹಕಾರಿ?
ಟಿ20 ವಿಶ್ವಕಪ್‌ನಲ್ಲಿ ನಾಯಕ ರೋಹಿತ್ ಶರ್ಮಾ ಇದುವರೆಗೆ 4 ಪಂದ್ಯಗಳಲ್ಲಿ ಒಟ್ಟು 76 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 37 ಎಸೆತಗಳಲ್ಲಿ 52 ರನ್ ಗಳಿಸಿದ್ದರು. ಇದಾದ ನಂತರ ಪಾಕಿಸ್ತಾನ ವಿರುದ್ಧ 12 ಎಸೆತಗಳಲ್ಲಿ 13 ರನ್, ಯುಎಸ್ಎ ವಿರುದ್ಧ 6 ಎಸೆತಗಳಲ್ಲಿ 3 ರನ್ ಮತ್ತು ಅಫ್ಘಾನಿಸ್ತಾನ ವಿರುದ್ಧ 13 ಎಸೆತಗಳಲ್ಲಿ 8 ರನ್ ಬಾರಿಸಿದ್ದರು.
ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 5 ಎಸೆತಗಳಲ್ಲಿ 1 ರನ್ ಗಳಿಸಿದ್ದರು. ಇದಾದ ಬಳಿಕ ಪಾಕಿಸ್ತಾನ ವಿರುದ್ಧ 12 ಎಸೆತಗಳಲ್ಲಿ 13 ರನ್ ಬಾರಿಸಿದ್ದರೆ ಅಮೆರಿಕ ವಿರುದ್ಧದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದರು. ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 24 ಎಸೆತಗಳಲ್ಲಿ 24 ರನ್ ಬಾರಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:18 pm, Sat, 22 June 24