ಕೇವಲ 19 ಬಾಲ್​​ಗಳಲ್ಲಿ ರನ್ ಚೇಸ್ ಮಾಡಿ ದಾಖಲೆ ಬರೆದ ಇಂಗ್ಲೆಂಡ್

ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ದುಕೊಂಡಿತು. ಇಂಗ್ಲೆಂಡ್ ಮಾರಕದಾಳಿಗೆ ಓಮನ್ ತತ್ತರಿಸಿತು. 13.2 ಓವರ್​ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಓಮನ್ 47 ರನ್ ಕಲೆ ಹಾಕಿತು. ಬಳಿಕ ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್ ಭರ್ಜರಿ ಬ್ಯಾಟಿಂಗ್ ಮಾಡಿತು. ಕೇವಲ 19 ಬಾಲ್​​ಗೆ ಟಾರ್ಗೆಟ್ ರೀಚ್ ಆಯಿತು.

ಕೇವಲ 19 ಬಾಲ್​​ಗಳಲ್ಲಿ ರನ್ ಚೇಸ್ ಮಾಡಿ ದಾಖಲೆ ಬರೆದ ಇಂಗ್ಲೆಂಡ್
ಇಂಗ್ಲೆಂಡ್ ಟೀಂ
Follow us
ರಾಜೇಶ್ ದುಗ್ಗುಮನೆ
|

Updated on: Jun 14, 2024 | 7:28 AM

ಮಳೆಯ ಕಾರಣದಿಂದ ಒಂದು ಪಂದ್ಯ ರದ್ದಾಗಿ ಇಂಗ್ಲೆಂಡ್ (England) ಭಾರೀ ನಷ್ಟ ಅನುಭವಿಸಿತ್ತು. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತಿತು. ಈ ಮೂಲಕ ಸೂಪರ್ 8 ಕನಸನ್ನು ಮರೆಯುವ ಸ್ಥಿತಿ ಬಂದೊದಗಿತ್ತು. ಆದರೆ, ಜೂನ್ 13ರಂದು ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಪುಟಿದೆದ್ದಿದೆ. ಓಮನ್ ನೀಡಿದ 47 ರನ್​​ಗಳ ಟಾರ್ಗೆಟ್​ನ ಕೇವಲ 19 ಬಾಲ್​ಗೆ ಚೇಸ್ ಮಾಡಿ ದಾಖಲೆ ಬರೆದಿದೆ. ಈ ಮೂಲಕ ರನ್​ರೇಟ್ ಹೆಚ್ಚಿಸಿಕೊಂಡಿದೆ. ಸದ್ಯ ಇಂಗ್ಲೆಂಡ್ ​ +3.081 ರನ್​ರೇಟ್​ನೊಂದಿಗೆ ಸೂಪರ್​ 8ಗೆ ಏರುವ ಕನಸನ್ನು ಜೀವಂತವಾಗಿ ಇರಿಸಿಕೊಂಡಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ದುಕೊಂಡಿತು. ಇಂಗ್ಲೆಂಡ್ ಮಾರಕದಾಳಿಗೆ ಓಮನ್ ತತ್ತರಿಸಿತು. ಆದಿಲ್ ರಶಿದ್ ಅವರು ನಾಲ್ಕು ವಿಕೆಟ್ ಕಿತ್ತರೆ ಮಾರ್ಕ್​ವುಡ್​ ಹಾಗೂ ಜೋಫ್ರಾ ಆರ್ಚರ್ ತಲಾ ಮೂರು ವಿಕೆಟ್ ಪಡೆದರು. 13.2 ಓವರ್​ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಓಮನ್ 47 ರನ್ ಕಲೆ ಹಾಕಿತು. ಬಳಿಕ ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್ ಭರ್ಜರಿ ಬ್ಯಾಟಿಂಗ್ ಮಾಡಿತು. ಕೇವಲ 19 ಬಾಲ್​​ಗೆ ಟಾರ್ಗೆಟ್ ರೀಚ್ ಆಯಿತು.

ಗ್ರೂಪ್​ Bನಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಸ್ಟ್ರಾಂಗ್ ತಂಡಗಳು ಎನಿಸಿಕೊಂಡಿದ್ದವು. ಆದರೆ, ಸ್ಕಾಟ್​ಲೆಂಡ್​ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಸ್ಕಾಟ್​​ಲೆಂಡ್​ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಇದು ಸ್ಕಾಟ್​ಲೆಂಡ್​ಗೆ ವರದಾನ ಆಗಿತ್ತು.

ಇದನ್ನೂ ಓದಿ: ಫ್ಲೋರಿಡಾದಲ್ಲಿ ರಣಭೀಕರ ಮಳೆ; ಲೀಗ್​ನಿಂದ ಹೊರಬೀಳುವ ಆತಂಕದಲ್ಲಿ ಪಾಕ್! ವಿಡಿಯೋ ನೋಡಿ

ಅಂಕಪಟ್ಟಿಯಲ್ಲಿ ಸ್ಕಾಟ್​​ಲೆಂಡ್​ 5  (+2.164) ಅಂಕ ಪಡೆದು ಎರಡನೇ ಸ್ಥಾನದಲ್ಲಿ ಇದ್ದರೆ, ಇಂಗ್ಲೆಂಡ್ 3 (+3.081) ಅಂಕ ಪಡೆದು ಮೂರನೇ ಸ್ಥಾನದಲ್ಲಿ ಇದೆ. ಸ್ಕಾಟ್​ಲೆಂಡ್ ಮುಂದಿನ ಪಂದ್ಯ ಸೋತು, ಇಂಗ್ಲೆಂಡ್ ಮುಂದಿನ ಪಂದ್ಯ ಗೆದ್ದರೆ ಇಂಗ್ಲೆಂಡ್ ತಂಡ ಸೂಪರ್​ಗೆ ಅರ್ಹತೆ ಪಡೆಯಲಿದೆ. ಈ ಕಾರಣದಿಂದಲೇ ಇಂಗ್ಲೆಂಡ್​​ಗೆ ಗುರುವಾರದ ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲಬೇಕಿತ್ತು. ಈಗ ಹಾಗೆಯೇ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ