T20 World Cup 2024: ಫ್ಲೋರಿಡಾದಲ್ಲಿ ರಣಭೀಕರ ಮಳೆ; ಲೀಗ್ನಿಂದ ಹೊರಬೀಳುವ ಆತಂಕದಲ್ಲಿ ಪಾಕ್! ವಿಡಿಯೋ ನೋಡಿ
T20 World Cup 2024, Florida Weather Update: ಫ್ಲೋರಿಡಾದಲ್ಲಿ ತೀವ್ರ ಚಂಡಮಾರುತ ಮತ್ತು ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈಗಾಗಲೇ ಅಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು, ಸದ್ಯ ಅದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೇ ಪ್ರವೃತ್ತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು.
ಟಿ20 ವಿಶ್ವಕಪ್ (T20 World Cup 2024 ) ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡು ಟೂರ್ನಿಗೆ ಲಗ್ಗೆ ಇಟ್ಟಿದ್ದ ಪಾಕಿಸ್ತಾನ ತಂಡ (Pakistan Cricket Team) ಇದೀಗ ಲೀಗ್ ಹಂತದಲ್ಲೇ ತನ್ನ ಪಯಣ ಮುಗಿಸುವ ಆತಂಕದಲ್ಲಿದೆ. ಮೊದಲ ಸುತ್ತಿನಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಬಾಬರ್ ಪಡೆ ಇದೀಗ ಆಡಿರುವ ಮೂರು ಪಂದ್ಯಗಳ ಕೇವಲ ಒಂದು ಪಂದ್ಯವನ್ನು ಗೆದ್ದು, ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಎರಡು ಪಂದ್ಯಗಳ ಸೋಲೇ ಪಾಕ್ ತಂಡ ಟೂರ್ನಿಯಿಂದ ಹೊರಹೋಗಲು ಕಾರಣವಾಗಿದೆ. ಆದಾಗ್ಯೂ ಸೂಪರ್ ಸುತ್ತಿಗೇರಲು ಕೊನೆಯ ಅವಕಾಶ ಹೊಂದಿರುವ ಪಾಕಿಸ್ತಾನ ತಂಡ ತನ್ನ ಮುಂದಿನ ಪಂದ್ಯದಲ್ಲಿ ಅಂದರೆ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಐರ್ಲೆಂಡ್ (PAK vs IRE) ವಿರುದ್ಧ ಶತಾಯಗತಾಯ ಗೆಲ್ಲಲೇಬೇಕಾಗಿದೆ. ಅದರಲ್ಲೂ ಬೃಹತ್ ಅಂತರದಿಂದ ಐರ್ಲೆಂಡ್ ತಂಡವನ್ನು ಮಣಿಸಿದರೆ ಮಾತ್ರ ಮುಂದಿನ ಸುತ್ತಿಗೇರುವ ಅವಕಾಶ ಹೊಂದಿದೆ. ಇದರ ಜೊತೆಗೆ ಇತರ ತಂಡಗಳ ಫಲಿತಾಂಶ ಕೂಡ ಪಾಕ್ ತಂಡದ ಸೂಪರ್ 8 ಸುತ್ತಿನ ಕನಸನ್ನು ನಿರ್ಧರಿಸಲಿವೆ. ಆದರೆ ಐರ್ಲೆಂಡ್ ವಿರುದ್ಧದ ಈ ನಿರ್ಣಾಯಕ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದ್ದು, ಪಂದ್ಯವನ್ನಾಡದೆ ಬಾಬರ್ ಪಡೆ ಲೀಗ್ನಿಂದ ಹೊರಗುಳಿಯುವ ಆತಂಕದಲ್ಲಿದೆ.
ಫ್ಲೋರಿಡಾದಲ್ಲಿ ನಿರ್ಣಾಯಕ ಪಂದ್ಯಗಳು
2024 ರ ಟಿ20 ವಿಶ್ವಕಪ್ ಅನ್ನು ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಸಲಾಗುತ್ತಿದೆ. ಇದರಡಿಯಲ್ಲಿ ಅಮೆರಿಕದ 2 ನಗರಗಳಾದ ನ್ಯೂಯಾರ್ಕ್ ಹಾಗೂ ಫ್ಲೋರಿಡಾದಲ್ಲಿ ಪಂದ್ಯಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ನ್ಯೂಯಾರ್ಕ್ನಲ್ಲಿ ನಡೆಯಬೇಕಿದ್ದ ಎಲ್ಲಾ ಪಂದ್ಯಗಳು ಮುಗಿದಿವೆ. ಇದೀಗ ಉಳಿದ ಪಂದ್ಯಗಳು ಫ್ಲೋರಿಡಾದಲ್ಲಿ ನಡೆಯಬೇಕಿದೆ. ಕೆನಡಾ ವಿರುದ್ಧ ಟೀಂ ಇಂಡಿಯಾದ ಮುಂದಿನ ಪಂದ್ಯ ಇಲ್ಲಿ ನಡೆಯಲಿದೆ. ಭಾರತ ತಂಡ ಈಗಾಗಲೇ ಸೂಪರ್ 8 ತಲುಪಿದ್ದು, ಕೆನಡಾ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವುದರಿಂದ ಈ ಪಂದ್ಯದ ಫಲಿತಾಂಶ ಕೆನಡಾ ಮೇಲೆ ಹೆಚ್ಚು ಪರಿಣಾಮ ಬೀರದು. ಆದರೆ ಇಲ್ಲಿ ನಡೆಯಲ್ಲಿರುವ ಐರ್ಲೆಂಡ್ vs ಅಮೆರಿಕ ಮತ್ತು ಪಾಕಿಸ್ತಾನ vs ಐರ್ಲೆಂಡ್ ನಡುವಿನ ಪಂದ್ಯಗಳು ಮಹತ್ವದಾಗಿವೆ.
T20 World Cup 2024: ಸಂಕಷ್ಟಕ್ಕೆ ಸಿಲುಕಿದ ಆಸ್ಟ್ರೇಲಿಯಾ ತಂಡ; ನಾಯಕನಿಗೆ 2 ಪಂದ್ಯಗಳಿಂದ ನಿಷೇಧದ ಆತಂಕ..!
ಫ್ಲೋರಿಡಾದಲ್ಲಿ ರಣಭೀಕರ ಮಳೆ
ಹೀಗಾಗಿ ಫ್ಲೋರಿಡಾದಲ್ಲಿ ನಡೆಯಲ್ಲಿರುವ ಈ ಎರಡು ಪಂದ್ಯಗಳು ಸೂಪರ್ 8 ಸುತ್ತಿಗೆ ಪ್ರವೇಶಿಸುವ ಉಳಿದ 1 ತಂಡವನ್ನು ನಿರ್ಧರಿಸಲಿವೆ. ಆದರೆ ಫ್ಲೋರಿಡಾದಲ್ಲಿ ತೀವ್ರ ಚಂಡಮಾರುತ ಮತ್ತು ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈಗಾಗಲೇ ಅಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು, ಸದ್ಯ ಅದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೇ ಪ್ರವೃತ್ತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು. ಭಾರತ ಮತ್ತು ಕೆನಡಾ ಹೊರತುಪಡಿಸಿ ಬೇರೆ ಯಾವುದೇ ಪಂದ್ಯ ಮಳೆಯಿಂದ ಹಾನಿಗೊಳಗಾದರೆ, ಪಾಕಿಸ್ತಾನ ತಂಡಕ್ಕೆ ಸೂಪರ್ 8 ಸುತ್ತಿನ ಬಾಗಿಲು ಮುಚ್ಚಲಿದೆ.
🚨#BREAKING: A Life threatening flash flood emergency has been declared due to catastrophic flooding multiple water resources are underway
The National Weather Service in Miami has issued a Flash Flood Emergency for significant to catastrophic flooding in… pic.twitter.com/DS2NwM9Lwa
— R A W S A L E R T S (@rawsalerts) June 12, 2024
ಪಂದ್ಯ ರದ್ದಾದರೆ ಪಾಕ್ ತಂಡಕ್ಕೆ ಸಂಕಷ್ಟ
ಒಂದು ವೇಳೆ ಐರ್ಲೆಂಡ್ ಮತ್ತು ಯುಎಸ್ಎ ನಡುವಿನ ಪಂದ್ಯದಲ್ಲಿ ಮಳೆಯಾಗಿ ಪಂದ್ಯವನ್ನು ರದ್ದುಗೊಳಿಸಿದರೆ ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುತ್ತದೆ. ಇದರಿಂದ ಅಮೆರಿಕ ಬಳಿ 5 ಅಂಕಗಳು ಇದ್ದಾಂತ್ತಾಗುತ್ತದೆ. ಇದರೊಂದಿಗೆ ತಂಡ ಸೂಪರ್ 8ಸುತ್ತಿಗೆ ಸುಲಭವಾಗಿ ಹೋಗಲಿದೆ. ಏಕೆಂದರೆ ಪಾಕಿಸ್ತಾನ ತನ್ನ ಮುಂದಿನ ಪಂದ್ಯವನ್ನು ಗೆದ್ದರೂ ಗರಿಷ್ಠ 4 ಅಂಕಗಳನ್ನು ಮಾತ್ರ ಗಳಿಸಬಹುದು. ಇತ್ತ ಪಾಕಿಸ್ತಾನ ಮತ್ತು ಐರ್ಲೆಂಡ್ ಪಂದ್ಯ ಮಳೆಯಿಂದ ರದ್ದಾದರೆ ಪಾಕಿಸ್ತಾನ ಕೇವಲ ಒಂದು ಅಂಕವನ್ನು ಪಡೆಯುತ್ತದೆ. ಇದರಿಂದ ಪಾಕ್ ತಂಡದ ಬಳಿ ಗರಿಷ್ಠ 3 ಅಂಕ ಮಾತ್ರ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ತಂಡ ಸೂಪರ್ 8 ರೇಸ್‌ನಿಂದ ಹೊರಗುಳಿಯಲಿದೆ. ಹೀಗಾಗಿ ಫ್ಲೋರಿಡಾದಲ್ಲಿ ಟೀಂ ಇಂಡಿಯಾದ ಪಂದ್ಯವನ್ನು ಹೊರತುಪಡಿಸಿ ಉಳಿದ ಎರಡೂ ಪಂದ್ಯಗಳು ನಡೆಯಲ್ಲಿ ಎಂದು ಪಾಕಿಸ್ತಾನ ತಂಡ ಈಗಿನಿಂದಲೇ ದೇವರ ಬಳಿ ಮೊರೆ ಇಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:06 pm, Thu, 13 June 24