AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG, Guyana Weather: ಗಯಾನಾದಲ್ಲಿ ಧಾರಕಾರ ಮಳೆ; ಪ್ರಸ್ತುತ ಪರಿಸ್ಥಿತಿ ಹೇಗಿದೆ? ವಿಡಿಯೋ ನೋಡಿ

IND vs ENG, Guyana Weather: ಅಕ್ಯುವೆದರ್ ಪ್ರಕಾರ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್‌ ಪಂದ್ಯದ ಆರಂಭ ವಿಳಂಬವಾಗುವ ಎಲ್ಲಾ ಸಾಧ್ಯತೆಗಳಿವೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 10 ಗಂಟೆಗೆ, ಅಂದರೆ ಆರಂಭಕ್ಕೆ ಅರ್ಧ ಗಂಟೆ ಮೊದಲು, ಮಳೆಯ ಸಂಭವನೀಯತೆ ಸುಮಾರು 66 ಪ್ರತಿಶತ ಎಂದು ಹೇಳಲಾಗುತ್ತದೆ. ಬಹುತೇಕ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಮುನ್ಸೂಚನೆ ಇದೆ.

IND vs ENG, Guyana Weather: ಗಯಾನಾದಲ್ಲಿ ಧಾರಕಾರ ಮಳೆ; ಪ್ರಸ್ತುತ ಪರಿಸ್ಥಿತಿ ಹೇಗಿದೆ? ವಿಡಿಯೋ ನೋಡಿ
ಗಯಾನಾ ಮೈದಾನ
ಪೃಥ್ವಿಶಂಕರ
|

Updated on:Jun 27, 2024 | 5:47 PM

Share

2024 ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ಆರಂಭವಾಗಲು ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಭಾರತೀಯ ಕಾಲಮಾನದ ಪ್ರಕಾರ ಉಭಯ ತಂಡಗಳ ಈ ಕದನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಹವಾಮಾನ ವರದಿಯಂತೆ ಗಯಾನಾದಲ್ಲಿ ಎಡೆಬಿಡದೆ ಮಳೆ ಸುರಿಯಲಾರಂಭಿಸಿದೆ. ಸ್ಥಳೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 10 ಗಂಟೆಗೆ ಪಂದ್ಯ ಆರಂಭವಾಗಬೇಕಿದೆ. ಆದರೆ ಈಗಾಗಲೇ ಧಾರಕಾರ ಮಳೆ ಸುರಿಯುತ್ತಿರುವುದರಿಂದ ಪಂದ್ಯ ಆರಂಭವಾಗುವುದು ಕೊಂಚ ತಡವಾಗಬಹುದು. ಈಗಾಗಲೇ ಗಯಾನಾದಲ್ಲಿ ಮಳೆಯಾಗುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಪಂದ್ಯಕ್ಕೆ ಮಳೆಯ ಭೀತಿ

ಅಕ್ಯುವೆದರ್ ಪ್ರಕಾರ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್‌ ಪಂದ್ಯದ ಆರಂಭ ವಿಳಂಬವಾಗುವ ಎಲ್ಲಾ ಸಾಧ್ಯತೆಗಳಿವೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 10 ಗಂಟೆಗೆ, ಅಂದರೆ ಆರಂಭಕ್ಕೆ ಅರ್ಧ ಗಂಟೆ ಮೊದಲು, ಮಳೆಯ ಸಂಭವನೀಯತೆ ಸುಮಾರು 66 ಪ್ರತಿಶತ ಎಂದು ಹೇಳಲಾಗುತ್ತದೆ. ಬಹುತೇಕ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಮುನ್ಸೂಚನೆ ಇದೆ. ಬೆಳಗ್ಗೆ 11 ಗಂಟೆಯ ಮುನ್ಸೂಚನೆಯೂ ಇದೇ ಆಗಿದ್ದು, ಮಳೆಯ ಸಂಭವನೀಯತೆ ಶೇ.75ಕ್ಕೆ ಏರಿಕೆಯಾಗಲಿದೆ. ಆದರೆ, ಸುಮಾರು ಒಂದು ಗಂಟೆಯ ನಂತರ ಅಂದರೆ ಮಧ್ಯಾಹ್ನ 12 ಗಂಟೆಯ ನಂತರ ಪರಿಸ್ಥಿತಿ ಸುಧಾರಿಸಲಿದೆ.

ಮಧ್ಯಾಹ್ನದ ವೇಳೆಗೆ ಪಂದ್ಯ ಆರಂಭ?

ಈ ಸಮಯದಲ್ಲಿ ಮಳೆಯ ಸಂಭವನೀಯತೆ ಶೇಕಡಾ 49 ಕ್ಕೆ ಇಳಿಯಲಿದೆ. ಮುನ್ಸೂಚನೆಯ ಪ್ರಕಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 3 ಗಂಟೆಯವರೆಗೆ ಅಂದರೆ ಭಾರತೀಯ ಕಾಲಮಾನ ಮಧ್ಯರಾತ್ರಿ 12:30 ರವರೆಗೆ ಲಘು ಮೋಡಗಳಿದ್ದು, ಶೇ.35 ರಿಂದ 40ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಈ ನಡುವೆ ಒಂದಷ್ಟು ಪಂದ್ಯ ನಡೆಯುವ ಸಾಧ್ಯತೆ ಹೆಚ್ಚಿದೆ. ಸಂಜೆ 4 ಗಂಟೆಗೆ ಮತ್ತೆ ಮಳೆ ಆರಂಭವಾಗಲ್ಲಿದ್ದು, ಇದರ ಸಂಭವನೀಯತೆ ಶೇಕಡಾ 50 ಕ್ಕಿಂತ ಹೆಚ್ಚಾಗಲಿದೆ. ಅದೇ ಪರಿಸ್ಥಿತಿಯು ಸ್ಥಳೀಯ ಸಮಯ ಸಂಜೆ 5 ಗಂಟೆಗೆ ಇರುತ್ತದೆ.

ಪಂದ್ಯ ನಡೆಯುವ ಸಾಧ್ಯತೆ

ಮಾಹಿತಿ ಪ್ರಕಾರ, ಮಳೆ ಬಿಡುವ ನೀಡಿದ ಸಮಯದಲ್ಲಿ ಪಂದ್ಯವನ್ನು ನಡೆಸಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಪಂದ್ಯಕ್ಕೆ ಮೀಸಲು ದಿನ ಕೂಡ ನಿಗದಿಯಾಗಿಲ್ಲ. ಅದರ ಬದಲಿಗೆ ಐಸಿಸಿ 250 ನಿಮಿಷಗಳ ಹೆಚ್ಚುವರಿ ಅವಕಾಶ ನೀಡಿದೆ. ಈ ಸಮಯದೊಳಗೆ ಪಂದ್ಯವನ್ನು ಪೂರ್ಣಗೊಳಿಸಲು ಎರಡೂ ತಂಡಗಳು ಕನಿಷ್ಠ ತಲಾ 10 ಓವರ್‌ಗಳನ್ನು ಆಡಬೇಕಿದೆ. ಅದು ಸಾಧ್ಯವಾಗದಿದ್ದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Thu, 27 June 24