PAK vs CAN: ಕೆನಡಾ ವಿರುದ್ದ ಗೆದ್ದ ಪಾಕಿಸ್ತಾನ್

|

Updated on: Jun 11, 2024 | 11:21 PM

T20 World Cup 2024: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡವು ತನ್ನ ಮೊದಲ ಜಯ ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಸೋತಿದ್ದ ಪಾಕ್ ಪಡೆ, ಆ ಬಳಿಕ ಟೀಮ್ ಇಂಡಿಯಾ ವಿರುದ್ಧ ಮುಗ್ಗರಿಸಿತ್ತು. ಇದೀಗ ಕೆನಡಾ ವಿರುದ್ಧ ಜಯಗಳಿಸುವ ಮೂಲಕ ತನ್ನ ಗೆಲುವಿನ ಖಾತೆ ತೆರೆದಿದೆ. ಈ ಮೂಲಕ ಸೂಪರ್-8 ಹಂತಕ್ಕೇರುವ ಅವಕಾಶವನ್ನು ಜೀವಂತವಿರಿಸಿಕೊಂಡಿದೆ.

PAK vs CAN: ಕೆನಡಾ ವಿರುದ್ದ ಗೆದ್ದ ಪಾಕಿಸ್ತಾನ್
PAK vs CAN
Follow us on

T20 World Cup 2024: ಟಿ20 ವಿಶ್ವಕಪ್​ನ 22ನೇ ಪಂದ್ಯದಲ್ಲಿ ಕೆನಡಾ ವಿರುದ್ಧ ಪಾಕಿಸ್ತಾನ್ ತಂಡ ಗೆಲುವು ದಾಖಲಿಸಿದೆ. ನ್ಯೂಯಾರ್ಕ್​ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೆನಡಾ ತಂಡಕ್ಕೆ ಆರೋನ್ ಜಾನ್ಸನ್ ಭರ್ಜರಿ ಆರಂಭ ಒದಗಿಸಿದ್ದರು.

ಬಿರುಸಿನ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದ ಆರೋನ್ ಜಾನ್ಸನ್ ರನ್​ಗಳಿಸುತ್ತಾ ಸಾಗಿದರು. ಆದರೆ ಉಳಿದ ಬ್ಯಾಟರ್​ಗಳಿಂದ ಉತ್ತಮ ಸಾಥ್ ದೊರೆತಿರಲಿಲ್ಲ. ಪರಿಣಾಮ 54 ರನ್​ಗಳಿಸುವಷ್ಟರಲ್ಲಿ ಕೆನಡಾ ತಂಡವು 5 ವಿಕೆಟ್ ಕಳೆದುಕೊಂಡಿತು.

ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಆರೋನ್ ಜಾನ್ಸನ್ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಅರ್ಧಶತಕದ ಬೆನ್ನಲ್ಲೇ ನಸೀಮ್ ಶಾ ಎಸೆತವನ್ನು ಗುರುತಿಸುವಲ್ಲಿ ಎಡವಿ ಕ್ಲೀನ್ ಬೌಲ್ಡ್ ಆದರು.

ಔಟಾಗುವ ಮುನ್ನ ಆರೋನ್ ಜಾನ್ಸನ್ 44 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 52 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನಿಂದ ಕೆನಡಾ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 106 ರನ್ ಕಲೆಹಾಕಿತು.

107 ರನ್​ಗಳ ಟಾರ್ಗೆಟ್:

ಈ ಸುಲಭ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಪರ ಈ ಬಾರಿ ಸೈಮ್ ಅಯ್ಯುಬ್ ಹಾಗೂ ಮೊಹಮ್ಮದ್ ರಿಝ್ವಾನ್ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಕೇವಲ 6 ರನ್​ಗಳಿಸಿ ಎಡಗೈ ದಾಂಡಿಗ ಸೈಮ್ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಝಂ, ರಿಝ್ವಾನ್ ಜೊತೆಗೂಡಿ ಇನಿಂಗ್ಸ್ ಕಟ್ಟುವ ಕಾಯಕಕ್ಕೆ ಕೈ ಹಾಕಿದರು. ಅದರಂತೆ 2ನೇ ವಿಕೆಟ್​ಗೆ 63 ರನ್​ಗಳ ಜೊತೆಯಾಟವಾಡುವ ಮೂಲಕ ಈ ಜೋಡಿ ಪಾಕ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಆದರೆ 15ನೇ ಓವರ್​ನಲ್ಲಿ ಬಾಬರ್ ಆಝಂ (33 ರನ್​/33 ಎಸೆತಗಳು) ದಿಲ್ಲನ್​ಗೆ ವಿಕೆಟ್ ಒಪ್ಪಿಸಿದರು. ಇನ್ನು ಮೊಹಮ್ಮದ್ ರಿಝ್ವಾನ್ 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಈ ಅರ್ಧಶತಕದ ನೆರವಿನೊಂದಿಗೆ ಪಾಕಿಸ್ತಾನ್ ತಂಡವು 17.3 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 107 ರನ್ ಬಾರಿಸಿತು. ಈ ಮೂಲಕ 7 ವಿಕೆಟ್​ಗಳ ಜಯ ಸಾಧಿಸಿದೆ.

ಪಾಕಿಸ್ತಾನ್ ಪ್ಲೇಯಿಂಗ್ 11: ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್) , ಸೈಮ್ ಅಯ್ಯೂಬ್ , ಬಾಬರ್ ಆಝಂ (ನಾಯಕ) , ಫಖರ್ ಝಮಾನ್ , ಉಸ್ಮಾನ್ ಖಾನ್ , ಶಾದಾಬ್ ಖಾನ್ , ಇಮಾದ್ ವಾಸಿಮ್ , ಶಾಹೀನ್ ಅಫ್ರಿದಿ , ನಸೀಮ್ ಶಾ , ಹ್ಯಾರಿಸ್ ರೌಫ್ , ಮೊಹಮ್ಮದ್ ಅಮೀರ್.

ಇದನ್ನೂ ಓದಿ: T20 World Cup 2024: ಪಾಕಿಸ್ತಾನ್ ವಿರುದ್ಧ ಸ್ಪೋಟಕ ಅರ್ಧಶತಕ ಸಿಡಿಸಿ ದಾಖಲೆ ಬರೆದ ಆರೋನ್ ಜಾನ್ಸನ್

ಕೆನಡಾ ಪ್ಲೇಯಿಂಗ್​ 11: ಆರೋನ್ ಜಾನ್ಸನ್ , ನವನೀತ್ ಧಲಿವಾಲ್ , ಪರ್ಗತ್ ಸಿಂಗ್ , ನಿಕೋಲಸ್ ಕಿರ್ಟನ್ , ಶ್ರೇಯಸ್ ಮೊವಾ (ವಿಕೆಟ್ ಕೀಪರ್) , ರವೀಂದ್ರಪಾಲ್ ಸಿಂಗ್ , ಸಾದ್ ಬಿನ್ ಜಾಫರ್ (c) , ದಿಲ್ಲನ್ ಹೇಲಿಗರ್ , ಕಲೀಂ ಸನಾ , ಜುನೈದ್ ಸಿದ್ದಿಕಿ , ಜೆರೆಮಿ ಗಾರ್ಡನ್.