VIDEO: ಮೈದಾನಕ್ಕೆ ನುಗ್ಗಿದ ಅಭಿಮಾನಿ: ಪರಿಪರಿಯಾಗಿ ಬೇಡಿಕೊಂಡ ರೋಹಿತ್ ಶರ್ಮಾ

|

Updated on: Jun 02, 2024 | 8:34 AM

T20 World Cup 2024: T20 World Cup 2024: ಟಿ20 ವಿಶ್ವಕಪ್ ಇಂದಿನಿಂದ (ಜೂ 2) ಶುರುವಾಗಿದೆ. ಜೂನ್ 5 ರಂದು ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಹಾಗೆಯೇ ಜೂನ್ 9 ರಂದು ಭಾರತ ತಂಡವು ತನ್ನ 2ನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ.

VIDEO: ಮೈದಾನಕ್ಕೆ ನುಗ್ಗಿದ ಅಭಿಮಾನಿ: ಪರಿಪರಿಯಾಗಿ ಬೇಡಿಕೊಂಡ ರೋಹಿತ್ ಶರ್ಮಾ
Rohit Sharma
Follow us on

ಟಿ20 ವಿಶ್ವಕಪ್ (T20 World Cup 2024) ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾ ಆಟಗಾರರಿಗೆ ಅಭಿಮಾನಿಗಳ ಕಾಟ ಶುರುವಾಗಿದೆ. ಶನಿವಾರ ನಡೆದ ಅಭ್ಯಾಸ ಪಂದ್ಯದ ವೇಳೆ ರೋಹಿತ್ ಶರ್ಮಾ ಅಭಿಮಾನಿಯೊಬ್ಬರು ಭದ್ರತಾ ಸಿಬ್ಬಂದಿಗಳನ್ನು ವಂಚಿಸಿ ಮೈದಾನಕ್ಕೆ ನುಗ್ಗಿದ್ದಾರೆ. ನ್ಯೂಯಾರ್ಕ್​ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ತಕ್ಷಣವೇ ಭದ್ರತಾ ಸಿಬ್ಬಂದಿಗಳು ಅಭಿಮಾನಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಪಂದ್ಯದ 2ನೇ ಇನಿಂಗ್ಸ್ ವೇಳೆ ಅಭಿಮಾನಿಯೊಬ್ಬರು ಗ್ಯಾಲರಿಯಿಂದ ಮೈದಾನಕ್ಕೆ ಓಡಿಬಂದರು. ನೇರವಾಗಿ ಬಂದು ರೋಹಿತ್ ಶರ್ಮಾ ಅವರನ್ನು ತಬ್ಬಿಕೊಂಡರು. ಇದರ ಹಿಂದೆಯೇ ಓಡಿ ಬಂದ ಭದ್ರತಾ ಸಿಬ್ಬಂದಿಗಳು ಬಲ ಪ್ರಯೋಗಿಸಿ ಅಭಿಮಾನಿಯನ್ನು ವಶಕ್ಕೆ ಪಡೆದರು.

ಇತ್ತ ಅಮೆರಿಕನ್ ಪೊಲೀಸ್ ಸಿಬ್ಬಂದಿಗಳು ಬಲ ಪ್ರಯೋಗಿಸುವುದನ್ನು ಕಂಡ ರೋಹಿತ್ ಶರ್ಮಾ, ಏನೂ ಮಾಡದಂತೆ ಪರಿ ಪರಿಯಾಗಿ ಕೇಳಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಭದ್ರತಾ ಸಿಬ್ಬಂದಿಗಳು ಟೀಮ್ ಇಂಡಿಯಾ ನಾಯಕನ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ.

ಏಕೆಂದರೆ ಟೀಮ್ ಇಂಡಿಯಾ ಪಂದ್ಯಗಳ ವೇಳೆ ದಾಳಿ ನಡೆಸುವುದಾಗಿ ಐಸಿಸ್-ಕೆ ಉಗ್ರ ಸಂಘಟನೆಯೊಂದು ಬೆದರಿಕೆಯೊಡ್ಡಿದೆ. ಇದರ ನಡುವೆ ಅಭಿಮಾನಿಯೊಬ್ಬರು ಭದ್ರತಾ ಸಿಬ್ಬಂದಿಗಳನ್ನೇ ವಂಚಿಸಿ ಮೈದಾನಕ್ಕೆ ನುಗ್ಗಿರುವುದರಿಂದ ಅತ್ತ ಪೊಲೀಸರು ಕೂಡ ಹೈರಾಣರಾಗಿದ್ದಾರೆ. ಹೀಗಾಗಿಯೇ ಭಾರತದ ಮುಂದಿನ ಪಂದ್ಯಗಳ ವೇಳೆ ಮತ್ತಷ್ಟು ಕಟ್ಟೆಚ್ಚರ ವಹಿಸುವ ಸಾಧ್ಯತೆಯಿದೆ.

ರೋಹಿತ್ ಶರ್ಮಾ ಅಭಿಮಾನಿಯ ವಿಡಿಯೋ:

ಗೆದ್ದು ಬೀಗಿದ ಭಾರತ:

ಬಾಂಗ್ಲಾದೇಶ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 122 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ ಅಭ್ಯಾಸ ಪಂದ್ಯದಲ್ಲಿ 60 ರನ್​ಗಳ ಜಯ ಸಾಧಿಸಿದೆ.

ಟೀಮ್ ಇಂಡಿಯಾದ ಮೊದಲ ಪಂದ್ಯ:

ಭಾರತ ತಂಡವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯದ ಬಳಿಕ ಜೂನ್ 9 ರಂದು ನಡೆಯಲಿರುವ 2ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ. ಭಾರತ ತಂಡದ ಸಂಪೂರ್ಣ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: T20 World Cup 2024: ಕೆನಡಾ ಪರ ಕಣಕ್ಕಿಳಿದ ಕನ್ನಡಿಗ..!

ಭಾರತ ಟಿ20​ ವಿಶ್ವಕಪ್ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ.

ಮೀಸಲು ಆಟಗಾರರು: ಶುಭ್​ಮನ್ ಗಿಲ್, ಅವೇಶ್ ಖಾನ್, ರಿಂಕು ಸಿಂಗ್, ಖಲೀಲ್ ಅಹ್ಮದ್.

 

Published On - 8:31 am, Sun, 2 June 24