T20 World Cup 2024: ಟಿ20 ವಿಶ್ವಕಪ್ಗೆ ಚಾಲನೆ: ಯುಎಸ್ಎ ವಿರುದ್ಧ ಬೃಹತ್ ಮೊತ್ತ ಪೇರಿಸಿದ ಕೆನಡಾ
T20 World Cup 2024: 9ನೇ ಆವೃತ್ತಿಯ ಟಿ20 ವಿಶ್ವಕಪ್ಗೆ ಅಧಿಕೃತ ಚಾಲನೆ ದೊರೆತಿದೆ. ಅಮೆರಿಕದಲ್ಲಿ ನಡೆಯುತ್ತಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಯುಎಸ್ಎ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಿವೆ. ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದಿರುವ ಯುನೈಟೆಡ್ ಸ್ಟೇಟ್ ಆಫ್ ಅಮೆರಿಕ ತಂಡವು ಬೌಲಿಂಗ್ ಆಯ್ದುಕೊಂಡಿದ್ದು, ಅದರಂತೆ ಕೆನಡಾ ತಂಡ ಬ್ಯಾಟಿಂಗ್ ಮಾಡುತ್ತಿದೆ.
T20 World Cup 2024: ಟಿ20 ವಿಶ್ವಕಪ್ 2024 ಕ್ಕೆ ಅಧಿಕೃತ ಚಾಲನೆ ದೊರೆತಿದೆ. ಡಲ್ಲಾಸ್ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಯುಎಸ್ಎ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಯುಎಸ್ಎ ತಂಡ ಬೌಲಿಂಗ್ ಆಯ್ದುಕೊಂಡಿದೆ. ಅದರಂತೆ ಮೊದಲು ಬ್ಯಾಟ್ ಮಾಡುತ್ತಿರುವ ಕೆನಡಾ ತಂಡವು ಉತ್ತಮ ಆರಂಭ ಪಡೆದಿದೆ. ಆರಂಭಿಕರಾದ ಆರೋನ್ ಜಾನ್ಸನ್ ಮತ್ತು ನವನೀತ್ ಧಲಿವಾಲ್ ಮೊದಲ ವಿಕೆಟ್ಗೆ 43 ರನ್ಗಳ ಜೊತೆಯಾಟವಾಡಿದ್ದಾರೆ.
ಆದರೆ ಪವರ್ ಪ್ಲೇನ ಕೊನೆಯ ಓವರ್ನ 2ನೇ ಎಸೆತದಲ್ಲಿ ಆರೋನ್ ಜಾನ್ಸನ್ (23) ವಿಕೆಟ್ ಪಡೆಯುವಲ್ಲಿ ಹರ್ಮೀತ್ ಸಿಂಗ್ ಯಶಸ್ವಿಯಾಗಿದ್ದಾರೆ. ಇದಾಗ್ಯೂ ಕೆನಡಾ ತಂಡ ಮೊದಲ 6 ಓವರ್ಗಳಲ್ಲಿ 50 ರನ್ ಕಲೆಹಾಕಿದೆ.
ಆ ಬಳಿಕ ಕಣಕ್ಕಿಳಿದ ಪರ್ಗತ್ ಸಿಂಗ್ 5 ರನ್ಗಳಿಸಿ ರನೌಟ್ಗೆ ಬಲಿಯಾದರು. ಸದ್ಯ ನವನೀತ್ ಧಲಿವಾಲ್ (40) ಹಾಗೂ ನಿಕೋಲಸ್ ಕೀರ್ಟನ್ (10) ಬ್ಯಾಟಿಂಗ್ ಮಾಡುತ್ತಿದ್ದು, 10 ಓವರ್ಗಳ ಮುಕ್ತಾಯದ ವೇಳೆಗೆ ಕೆನಡಾ ತಂಡ 2 ವಿಕೆಟ್ ಕಳೆದುಕೊಂಡು 85 ರನ್ ಬಾರಿಸಿತು. ಅಂತಿಮವಾಗಿ ಕೆನಡಾ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 194 ರನ್ ಕಲೆಹಾಕಿದೆ.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್:
ಕೆನಡಾ (ಪ್ಲೇಯಿಂಗ್ XI): ಆರೋನ್ ಜಾನ್ಸನ್, ನವನೀತ್ ಧಲಿವಾಲ್, ಪರ್ಗತ್ ಸಿಂಗ್, ನಿಕೋಲಸ್ ಕಿರ್ಟನ್, ಶ್ರೇಯಸ್ ಮೊವ್ವ (ವಿಕೆಟ್ ಕೀಪರ್), ದಿಲ್‌ಪ್ರೀತ್ ಸಿಂಗ್, ಸಾದ್ ಬಿನ್ ಜಾಫರ್ (ನಾಯಕ), ನಿಖಿಲ್ ದತ್ತಾ, ದಿಲ್ಲನ್ ಹೇಲಿಗರ್, ಕಲೀಂ ಸನಾ, ಜೆರೆಮಿ ಗಾರ್ಡನ್.
ಇದನ್ನೂ ಓದಿ: T20 World Cup 2024: ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಯುಎಸ್ಎ (ಪ್ಲೇಯಿಂಗ್ XI): ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಜಸ್ದೀಪ್ ಸಿಂಗ್, ಅಲಿ ಖಾನ್, ಸೌರಭ್ ನೇತ್ರವಲ್ಕರ್.
ಯುನೈಟೆಡ್ ಸ್ಟೇಟ್ಸ್ ಅಮೆರಿಕ ತಂಡ: ಮೊನಾಂಕ್ ಪಟೇಲ್ (ನಾಯಕ) , ಸ್ಟೀವನ್ ಟೇಲರ್ , ಆಂಡ್ರೀಸ್ ಗೌಸ್ , ಆರನ್ ಜೋನ್ಸ್ , ಕೋರಿ ಆಂಡರ್ಸನ್ , ಹರ್ಮೀತ್ ಸಿಂಗ್ , ನಿತೀಶ್ ಕುಮಾರ್ , ಶಾಡ್ಲಿ ವ್ಯಾನ್ ಸ್ಚಾಲ್ಕ್ವಿಕ್ , ಅಲಿ ಖಾನ್ , ಜಸ್ದೀಪ್ ಸಿಂಗ್ , ಸೌರಭ್ ನೇತ್ರವಲ್ಕರ್ , ಮಿಲಿಂದ್ ಕುಮಾರ್ , ನಿಸಾರ್ಗ್ ಷಾನ್ ಶೆಲ್ , ನಿಸಾರ್ಗ್ ಪಟೇಲ್, ನೊಸ್ತುಶ್ ಕೆಂಜಿಗೆ.
ಕೆನಡಾ ತಂಡ: ಶ್ರೇಯಸ್ ಮೊವ್ವಾ (ವಿಕೆಟ್ ಕೀಪರ್) , ಸಾದ್ ಬಿನ್ ಜಾಫರ್ (ನಾಯಕ) , ಆರೋನ್ ಜಾನ್ಸನ್ , ನವನೀತ್ ಧಲಿವಾಲ್ , ರಯಾನ್ ಪಠಾಣ್ , ನಿಕೋಲಸ್ ಕಿರ್ಟನ್ , ದಿಲ್‌ಪ್ರೀತ್ ಸಿಂಗ್ , ರವೀಂದರ್‌ಪಾಲ್ ಸಿಂಗ್ , ದಿಲ್ಲನ್ ಹೇಲಿಗರ್ , ಜೆರೆಮಿ ಗಾರ್ಡನ್ , ರಿಶಿವ್ ರಾಗವ್ ಸ್ಸಿದ್ದಿಲ್ , ಡಿಲನ್ ಹೇಲಿಗರ್ ಕಲೀಂ ಸನಾ.
Published On - 6:50 am, Sun, 2 June 24