T20 World Cup 2024: ಮೊದಲ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಕೆನಡಾ

T20 World Cup 2024: ಟಿ20 ವಿಶ್ವಕಪ್​ 2024 ಕ್ಕೆ ಅಧಿಕೃತ ಚಾಲನೆ ದೊರೆತಿದೆ. ಯುಎಸ್​ಎ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸುತ್ತಿರುವ ಈ ಬಾರಿಯ ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಯುಎಸ್​ಎ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಿದೆ. ಇನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

T20 World Cup 2024: ಮೊದಲ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಕೆನಡಾ
Canada
Follow us
ಝಾಹಿರ್ ಯೂಸುಫ್
|

Updated on:Jun 04, 2024 | 12:54 PM

T20 World Cup 2024: ಟಿ20 ವಿಶ್ವಕಪ್ 2024ರ ಮೊದಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಯಾಗಿದೆ. ಡಲ್ಲಾಸ್​ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಯುಎಸ್​ಎ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೆನಡಾ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 194 ರನ್ ಕಲೆಹಾಕಿದೆ.

ಇದು ಪುರುಷರ ಟಿ20 ವಿಶ್ವಕಪ್‌ನಲ್ಲಿ ಸಹವರ್ತಿ ದೇಶದ ತಂಡದಿಂದ ಮೂಡಿಬಂದ ಗರಿಷ್ಠ ಸ್ಕೋರ್ ಆಗಿದೆ. ಇದಕ್ಕೂ ಮುನ್ನ ಈ ದಾಖಲೆ ನೆದರ್​ಲೆಂಡ್ಸ್ ತಂಡದ ಹೆಸರಿನಲ್ಲಿತ್ತು. 2014ರಲ್ಲಿ ಐರ್ಲೆಂಡ್ ವಿರುದ್ಧ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 193 ರನ್ ಗಳಿಸಿದ ನೆದರ್​ಲೆಂಡ್ಸ್ ತಂಡವು ಹೊಸ ಇತಿಹಾಸ ನಿರ್ಮಿಸಿತ್ತು.

ಇದೀಗ ಚೊಚ್ಚಲ ಪಂದ್ಯದಲ್ಲೇ 194 ರನ್ ಬಾರಿಸುವ ಮೂಲಕ ಕೆನಡಾ ತಂಡ 10 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಈ ಮೂಲಕ ಟಿ20 ವಿಶ್ವಕಪ್ 2024ರ ಮೊದಲ ಪಂದ್ಯದಲ್ಲೇ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.

ಯುಎಸ್​ಎ ತಂಡಕ್ಕೆ ಕಠಿಣ ಗುರಿ:

ಟಿ20 ವಿಶ್ವಕಪ್ 2024ರ ಮೊದಲ ಪಂದ್ಯದಲ್ಲಿ ಜಯ ಗಳಿಸಬೇಕಿದ್ದರೆ ಯುಎಸ್​ಎ ತಂಡವು 20 ಓವರ್​ಗಳಲ್ಲಿ 195 ರನ್ ಬಾರಿಸಬೇಕು. ಆದರೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯುಎಸ್​ಎ ತಂಡವು 170 ಕ್ಕಿಂತ ಅಧಿಕ ಮೊತ್ತವನ್ನು ಚೇಸ್ ಮಾಡಿಲ್ಲ. ಹೀಗಾಗಿ ಕೆನಡಾ ತಂಡ ನೀಡಿರುವ ಗುರಿಯನ್ನು ಬೆನ್ನಟ್ಟಿದರೆ ಮತ್ತೊಂದು ಇತಿಹಾಸ ನಿರ್ಮಾಣವಾಗಲಿದೆ.

ಕೆನಡಾ ಭರ್ಜರಿ ಬ್ಯಾಟಿಂಗ್:

ಈ ಪಂದ್ಯದಲ್ಲಿ ಕೆನಡಾ ಬ್ಯಾಟರ್​ಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ನವನೀತ್ ಧಲಿವಾಲ್ 44 ಎಸೆತಗಳಲ್ಲಿ 61 ರನ್ ಬಾರಿಸಿದರೆ, ನಿಕೋಲಸ್ ಕಿರ್ಟನ್ ತಂಡಕ್ಕೆ 51 ರನ್ ಗಳ ಸ್ಪೋಟಕ ಇನ್ನಿಂಗ್ಸ್ ಆಡಿದರು.

ಇವರಿಬ್ಬರ ಹೊರತಾಗಿ ಕೇವಲ 16 ಎಸೆತಗಳಲ್ಲಿ 32 ರನ್ ಗಳಿಸುವ ಮೂಲಕ ಶ್ರೇಯಸ್ ಮೊವ್ವ ಕೆನಡಾ ತಂಡದ ಸ್ಕೋರ್ ಅನ್ನು 200ರ ಗಡಿಗೆ ತಂದು ನಲ್ಲಿಸಿದರು.

ಕೆನಡಾ (ಪ್ಲೇಯಿಂಗ್ XI): ಆರೋನ್ ಜಾನ್ಸನ್, ನವನೀತ್ ಧಲಿವಾಲ್, ಪರ್ಗತ್ ಸಿಂಗ್, ನಿಕೋಲಸ್ ಕಿರ್ಟನ್, ಶ್ರೇಯಸ್ ಮೊವ್ವ (ವಿಕೆಟ್ ಕೀಪರ್), ದಿಲ್‌ಪ್ರೀತ್ ಸಿಂಗ್, ಸಾದ್ ಬಿನ್ ಜಾಫರ್ (ನಾಯಕ), ನಿಖಿಲ್ ದತ್ತಾ, ದಿಲ್ಲನ್ ಹೇಲಿಗರ್, ಕಲೀಂ ಸನಾ, ಜೆರೆಮಿ ಗಾರ್ಡನ್.

ಇದನ್ನೂ ಓದಿ: T20 World Cup 2024: ಕೆನಡಾ ಪರ ಕಣಕ್ಕಿಳಿದ ಕನ್ನಡಿಗ..!

ಯುಎಸ್​ಎ (ಪ್ಲೇಯಿಂಗ್ XI): ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಜಸ್ದೀಪ್ ಸಿಂಗ್, ಅಲಿ ಖಾನ್, ಸೌರಭ್ ನೇತ್ರವಲ್ಕರ್.

Published On - 9:07 am, Sun, 2 June 24