T20 World Cup 2024: ಭಾರತ-ಪಾಕಿಸ್ತಾನ್ ಮುಖಾಮುಖಿಗೆ ಡೇಟ್ ಫಿಕ್ಸ್?

| Updated By: ಝಾಹಿರ್ ಯೂಸುಫ್

Updated on: Jan 04, 2024 | 11:17 AM

India vs Pakistan: ಟಿ20 ವಿಶ್ವಕಪ್​ನ ಲೀಗ್ ಹಂತದ ಪಂದ್ಯಗಳನ್ನು ಯುಎಸ್​ಎನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಹಾಗೆಯೇ ಸೂಪರ್-8 ಪಂದ್ಯಗಳು ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿದೆ. ಹಾಗೆಯೇ ಫೈನಲ್ ಪಂದ್ಯಕ್ಕೂ ಕೆರಿಬಿಯನ್ ರಾಷ್ಟ್ರ ಆತಿಥ್ಯವಹಿಸಲಿದೆ.

T20 World Cup 2024: ಭಾರತ-ಪಾಕಿಸ್ತಾನ್ ಮುಖಾಮುಖಿಗೆ ಡೇಟ್ ಫಿಕ್ಸ್?
IND vs PAK
Follow us on

ಟಿ20 ವಿಶ್ವಕಪ್ 2024ರ (T20 World Cup 2024) ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ಈ ವೇಳಾಪಟ್ಟಿಯಂತೆ ಜೂನ್ 4 ರಿಂದ ವಿಶ್ವಕಪ್ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಪಾಕಿಸ್ತಾನ್ ತಂಡಗಳು ಕಣಕ್ಕಿಳಿಯುವ ಸಾಧ್ಯತೆಯಿದೆ. ಹಾಗೆಯೇ ಜೂನ್ 5 ರಿಂದ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಅಭಿಯಾನ ಶುರು ಮಾಡಲಿದೆ.

ಪ್ರಸ್ತುತ ವೇಳಾಪಟ್ಟಿ ಪ್ರಕಾರ, ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಇನ್ನು ಟೀಮ್ ಇಂಡಿಯಾದ 2ನೇ ಎದುರಾಳಿ ಪಾಕಿಸ್ತಾನ್.

ನ್ಯೂಯಾರ್ಕ್​ನಲ್ಲಿ ಹೈವೋಲ್ಟೇಜ್ ಪಂದ್ಯ:

ಜೂನ್ 9 ರಂದು ನ್ಯೂಯಾರ್ಕ್​ನಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ ಎಂದು ವರದಿಯಾಗಿದೆ. ಹಾಗೆಯೇ ಮೂರನೇ ಪಂದ್ಯದಲ್ಲಿ ಭಾರತ ತಂಡವು ಯುಎಸ್​ಎ ವಿರುದ್ಧ ಕಣಕ್ಕಿಳಿಯಲಿದೆ. ಇನ್ನು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರಾಲಿ ಕೆನಡಾ. ಈ ಪಂದ್ಯವು ಫ್ಲೋರಿಡಾದಲ್ಲಿ ನಡೆಯಲಿದೆ.

ಎರಡು ದೇಶಗಳಲ್ಲಿ ವಿಶ್ವಕಪ್:

2024 ರ ಟಿ20 ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಹಾಗೂ ಯುಎಸ್​ಎ ಜಂಟಿಯಾಗಿ ಆಯೋಜಿಸಲಿದೆ. ಅದರಂತೆ ಲೀಗ್ ಹಂತದ ಪಂದ್ಯಗಳು ಯುಎಸ್​ಎನಲ್ಲಿ ನಡೆಯಲಿದೆ. ಹಾಗೆಯೇ ಸೂಪರ್-8 ಪಂದ್ಯಗಳಿಗೆ ವೆಸ್ಟ್ ಇಂಡೀಸ್​ ಆತಿಥ್ಯವಹಿಸಲಿದೆ. ಇನ್ನು ಫೈನಲ್ ಪಂದ್ಯಕ್ಕೂ ಕೆರಿಬಿಯನ್ ರಾಷ್ಟ್ರ ಆತಿಥ್ಯವಹಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಕಣದಲ್ಲಿ 20 ತಂಡಗಳು:

ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಬರೋಬ್ಬರಿ 20 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು 4 ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಅದರಂತೆ ಪ್ರತಿ ಗುಂಪುಗಳಿಂದ 2 ತಂಡಗಳು ಸೂಪರ್-8 ಹಂತಕ್ಕೇರಲಿದೆ. ಈ ಹಂತದಲ್ಲಿ 8 ತಂಡಗಳ ನಡುವೆ ಪೈಪೋಟಿ ನಡೆಯಲಿದ್ದು, ಇದರಲ್ಲಿ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳುವ ತಂಡಗಳು ಸೆಮಿಫೈನಲ್ ಆಡಲಿದೆ.

ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ ತಂಡಗಳು:

  1. ಭಾರತ
  2. ಪಾಕಿಸ್ತಾನ್
  3. ಅಫ್ಘಾನಿಸ್ತಾನ್
  4. ಆಸ್ಟ್ರೇಲಿಯಾ
  5. ಬಾಂಗ್ಲಾದೇಶ್
  6. ಕೆನಡಾ
  7. ಇಂಗ್ಲೆಂಡ್
  8. ಐರ್ಲೆಂಡ್
  9. ನಮೀಬಿಯಾ
  10. ನೇಪಾಳ
  11. ನೆದರ್​ಲೆಂಡ್ಸ್​​
  12. ನ್ಯೂಝಿಲೆಂಡ್
  13. ಒಮಾನ್
  14. ಪಪುವಾ ನ್ಯೂಗಿನಿಯಾ (PNG)
  15. ಸ್ಕಾಟ್ಲೆಂಡ್
  16. ಸೌತ್ ಆಫ್ರಿಕಾ
  17. ಶ್ರೀಲಂಕಾ
  18. ಉಗಾಂಡ
  19. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (USA )
  20. ವೆಸ್ಟ್ ಇಂಡೀಸ್

ಇದನ್ನೂ ಓದಿ: Virat Kohli: ಪಾಕ್ ಕ್ರಿಕೆಟಿಗರನ್ನು ಹಿಂದಿಕ್ಕಿದ ಕಿಂಗ್ ಕೊಹ್ಲಿ

ಟಿ20 ವಿಶ್ವಕಪ್​ ಭಾರತ ತಂಡದ ತಾತ್ಕಾಲಿಕ ವೇಳಾಪಟ್ಟಿ:

  1. ಜೂನ್ 5- ಭಾರತ vs ಐರ್ಲೆಂಡ್ (ನ್ಯೂಯಾರ್ಕ್)
  2. ಜೂನ್ 9- ಭಾರತ vs ಪಾಕಿಸ್ತಾನ್ (ನ್ಯೂಯಾರ್ಕ್)
  3. ಜೂನ್ 12- ಭಾರತ vs ಯುಎಸ್ಎ (ನ್ಯೂಯಾರ್ಕ್)
  4. ಜೂನ್ 15- ಭಾರತ vs ಕೆನಡಾ (ಫ್ಲೋರಿಡಾ)

 

 

Published On - 11:06 am, Thu, 4 January 24