T20 World Cup 2024: ಇಬ್ಬರನ್ನು ಕೈ ಬಿಡಲು ಕಾರಣಗಳೇ ಇಲ್ಲ, ಆಯ್ಕೆ ಮಾಡಲೇಬೇಕು ಎಂದ ಗವಾಸ್ಕರ್

T20 World Cup 2024: ಈ ಬಾರಿ ಟಿ20 ವಿಶ್ವಕಪ್ ಜೂನ್ 1 ರಿಂದ ಶುರುವಾಗಲಿದೆ. ಯುಎಸ್​ಎ-ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದೆ. ಈ ತಂಡಗಳನ್ನು 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ.

T20 World Cup 2024: ಇಬ್ಬರನ್ನು ಕೈ ಬಿಡಲು ಕಾರಣಗಳೇ ಇಲ್ಲ, ಆಯ್ಕೆ ಮಾಡಲೇಬೇಕು ಎಂದ ಗವಾಸ್ಕರ್
Virat-Rohit-Sunil
Edited By:

Updated on: Jan 07, 2024 | 12:42 PM

2024ರ ಟಿ20 ವಿಶ್ವಕಪ್​ನಲ್ಲಿ (T20 World Cup 2024) ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರಾ? ಈ ಪ್ರಶ್ನೆಗೆ ಇದುವರೆಗೆ ಸ್ಪಷ್ಟ ಉತ್ತರವಂತು ಸಿಕ್ಕಿಲ್ಲ. ಏಕೆಂದರೆ ಈ ಇಬ್ಬರು ಆಟಗಾರರು ಕಳೆದ ಒಂದು ವರ್ಷದಿಂದ ಟೀಮ್ ಇಂಡಿಯಾ ಪರ ಯಾವುದೇ ಟಿ20 ಪಂದ್ಯವಾಡಿಲ್ಲ. ಹೀಗಾಗಿಯೇ ರೋಹಿತ್ ಶರ್ಮಾ ಹಾಗೂ ಕೊಹ್ಲಿಯನ್ನು ಟಿ20 ವಿಶ್ವಕಪ್​ ಆಯ್ಕೆಗೆ ಪರಿಗಣಿಸುವುದು ಅನುಮಾನ ಎನ್ನಲಾಗಿತ್ತು.

ಆದರೆ ಇತ್ತೀಚಿನ ಬೆಳವಣಿಗೆ ಪ್ರಕಾರ, ಹಿಟ್​ಮ್ಯಾನ್ ಹಾಗೂ ಕಿಂಗ್ ಕೊಹ್ಲಿ ಟಿ20 ಕ್ರಿಕೆಟ್​ಗೆ ಮರಳುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಇಬ್ಬರು ದಿಗ್ಗಜರೊಂದಿಗೆ ಮಾತುಕತೆ ನಡೆಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಮತ್ತೆ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ಇದರ ಬೆನ್ನಲ್ಲೇ ಟಿ20 ವಿಶ್ವಕಪ್​ಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಪರಿಗಣಿಸಬೇಕೆಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಗವಾಸ್ಕರ್, ಇಬ್ಬರನ್ನು ಕೈ ಬಿಡಲು ಯಾವುದೇ ಆಯ್ಕೆಗಳಿಲಿಲ್ಲ. ನೀವು ಕೆಲವೊಮ್ಮೆ 35-36 ವರ್ಷ ವಯಸ್ಸಿನವರಾಗಿದ್ದಾಗ, ನಿಮ್ಮ ಕಾರ್ಯಗಳು ನಿಧಾನವಾಗುತ್ತವೆ. ನಿಮ್ಮ ಥ್ರೋ ಕೂಡ ಉತ್ಸಾಹಭರಿತವಾಗಿಲ್ಲ. ಆದ್ದರಿಂದ ಮೈದಾನದಲ್ಲಿ ಫೀಲ್ಡಿಂಗ್ ಮಾಡಲು ಆಟಗಾರರನ್ನು ಎಲ್ಲಿ ಸಾಲಿನಲ್ಲಿ ನಿಲ್ಲಿಸಬೇಕು ಎಂಬ ಗೊಂದಲ ಇರುತ್ತದೆ.

ಆದರೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಷಯದಲ್ಲಿ ಅಂತಹ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. ಏಕೆಂದರೆ ಇಬ್ಬರೂ ಈ ವಯಸ್ಸಿನಲ್ಲೂ ಅತ್ಯುತ್ತಮ ಫೀಲ್ಡಿಂಗ್ ಮಾಡುತ್ತಿದ್ದಾರೆ. ಇನ್ನು ಏಕದಿನ ವಿಶ್ವಕಪ್​ ಮೂಲಕ ತಮ್ಮ ಫಾರ್ಮ್​ ಅನ್ನು ಕೂಡ ಪ್ರದರ್ಶಿಸಿದ್ದಾರೆ. ಹೀಗಾಗಿ ಇಬ್ಬರು ಟಿ20 ವಿಶ್ವಕಪ್​ ತಂಡಕ್ಕೆ ಆಯ್ಕೆಗೆ ಅರ್ಹರು ಎಂದು ಭಾವಿಸುತ್ತೇನೆ ಎಂದು ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.

ನನ್ನ ಪ್ರಕಾರ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಂಡದಲ್ಲಿ ಇರುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ಇಬ್ಬರು ಹಿರಿಯರು ಡ್ರೆಸ್ಸಿಂಗ್ ರೂಮ್​ನಲ್ಲಿದ್ದರೆ ಅದು ಸಹ ಆಟಗಾರರ ಮೇಲೆ ಪ್ರಭಾವ ಬೀರುತ್ತದೆ. ಹಾಗೆಯೇ ಇವರಿಬ್ಬರೂ ಮೈದಾನದಲ್ಲೂ ಕೊಡುಗೆ ನೀಡಬಲ್ಲರು. ಈ ಎಲ್ಲಾ ಕಾರಣಗಳಿಂದಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಟಿ20 ತಂಡದಲ್ಲಿ ನಾನು ಎದುರು ನೋಡುತ್ತೇನೆ ಎಂದು ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.

ಇದನ್ನೂ ಓದಿ: IPL 2024: RCB ಬೌಲಿಂಗ್ ಲೈನಪ್​ ಹೇಗಿದೆ? ಮೋಯೆ ಮೋಯೆ ಎಂದ ಚಹಲ್..!

ಟಿ20 ವಿಶ್ವಕಪ್ ಯಾವಾಗ?

ಈ ಬಾರಿ ಟಿ20 ವಿಶ್ವಕಪ್ ಜೂನ್ 1 ರಿಂದ ಶುರುವಾಗಲಿದೆ. ಯುಎಸ್​ಎ-ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದೆ. ಈ ತಂಡಗಳನ್ನು 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಅದರಂತೆ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಒಟ್ಟು 55 ಪಂದ್ಯಗಳನ್ನಾಡಲಾಗುತ್ತದೆ.