AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2024: ಸೂಪರ್ 8 ಸುತ್ತಿನಲ್ಲಿ ಮಳೆಯಾದರೆ ಫಲಿತಾಂಶ ನಿರ್ಧರಿಸುವುದು ಹೇಗೆ? ಯಾವ್ಯಾವ ಪಂದ್ಯಗಳಿಗೆ ಮೀಸಲು ದಿನ?

T20 World Cup 2024: ಗುಂಪು-ಹಂತದ ಪಂದ್ಯಗಳಂತಯೇ ಸೂಪರ್-8 ಪಂದ್ಯಗಳಿಗೂ ಯಾವುದೇ ಮೀಸಲು ದಿನವನ್ನು ನಿಗದಿಪಡಿಸಿಲಾಗಿದೆ. ಅಂದರೆ, ಮಳೆ ಬಂದರೆ ಅದೇ ದಿನ ಪಂದ್ಯವನ್ನು ಹೇಗಾದರೂ ಪೂರ್ಣಗೊಳಿಸಲೇಬೇಕು. ಈ ಪರಿಸ್ಥಿತಿಯಲ್ಲಿ, ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ತಲಾ 5 ಓವರ್​ಗಳ ಪಂದ್ಯವನ್ನು ಆಡಿಸಲಾಗುತ್ತದೆ. ಇದರ ಹೊರತಾಗಿಯೂ ಪಂದ್ಯ ನಡೆಯದೇ ಇದ್ದರೆ ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ಹಂಚಿಕೆಯಾಗಲಿದೆ.

T20 World Cup 2024: ಸೂಪರ್ 8 ಸುತ್ತಿನಲ್ಲಿ ಮಳೆಯಾದರೆ ಫಲಿತಾಂಶ ನಿರ್ಧರಿಸುವುದು ಹೇಗೆ? ಯಾವ್ಯಾವ ಪಂದ್ಯಗಳಿಗೆ ಮೀಸಲು ದಿನ?
ಟೀಂ ಇಂಡಿಯಾ
ಪೃಥ್ವಿಶಂಕರ
|

Updated on:Jun 15, 2024 | 11:35 PM

Share

ಭಾರತ ಮತ್ತು ಕೆನಡಾ (IND vs CAN) ನಡುವೆ ಫ್ಲೋರಿಡಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಪಂದ್ಯ (T20 World Cup 2024) ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯದ ರದ್ದತಿಯಿಂದಾಗಿ ಎರಡು ತಂಡಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಏಕೆಂದರೆ ಟೀಂ ಇಂಡಿಯಾ ಈಗಾಗಲೇ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿದೆ. ಇತ್ತ ಕೆನಡಾ ಈಗಾಗಲೇ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ. ಇದೀಗ ಭಾರತ ತಂಡ ತನ್ನ ಮೊದಲ ಸೂಪರ್-8 ಪಂದ್ಯವನ್ನು ಜೂನ್ 20 ರಂದು ಆಡಲಿದೆ. ಈ ಪಂದ್ಯವು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ (IND vs AFG)  ನಡೆಯಲಿದೆ. ಆದರೆ ಅದಕ್ಕೂ ಮುನ್ನ ಸೂಪರ್ 8 ಸುತ್ತಿನಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಫಲಿತಾಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ. ಈ ಸುತ್ತಿಗೆ ಮೀಸಲು ದಿನವಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ.

ಸೂಪರ್-8 ಸುತ್ತಿಗೂ ಮೀಸಲು ದಿನವಿಲ್ಲ

ವರದಿಗಳ ಪ್ರಕಾರ, ಗುಂಪು-ಹಂತದ ಪಂದ್ಯಗಳಂತಯೇ ಸೂಪರ್-8 ಪಂದ್ಯಗಳಿಗೂ ಯಾವುದೇ ಮೀಸಲು ದಿನವನ್ನು ನಿಗದಿಪಡಿಸಲಾಗಿಲ್ಲ. ಅಂದರೆ, ಮಳೆ ಬಂದರೆ ಅದೇ ದಿನ ಪಂದ್ಯವನ್ನು ಹೇಗಾದರೂ ಪೂರ್ಣಗೊಳಿಸಲೇಬೇಕು. ಈ ಪರಿಸ್ಥಿತಿಯಲ್ಲಿ, ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ತಲಾ 5 ಓವರ್​ಗಳ ಪಂದ್ಯವನ್ನು ಆಡಿಸಲಾಗುತ್ತದೆ. ಇದರ ಹೊರತಾಗಿಯೂ ಪಂದ್ಯ ನಡೆಯದೇ ಇದ್ದರೆ ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ನೀಡಲಾಗುತ್ತದೆ.

ಸೂಪರ್ -8 ಸುತ್ತಿನಲ್ಲಿ ಪ್ರತಿ ತಂಡವು ತಲಾ 3 ಪಂದ್ಯಗಳನ್ನು ಆಡಲಿದೆ. ಒಂದು ವೇಳೆ ಮಳೆಯಿಂದಾಗಿ ಒಂದು ಪಂದ್ಯ ರದ್ದಾದರೂ ತಂಡಗಳಿಗೆ ಭಾರಿ ನಷ್ಟ ಉಂಟಾಗಲಿದೆ. ಏಕೆಂದರೆ ಗುಂಪು ಹಂತಕ್ಕೆ ಹೋಲಿಸಿದರೆ ಸೂಪರ್ 8 ಸುತ್ತಿನಲ್ಲಿ ಎಲ್ಲಾ ತಂಡಗಳು ಒಂದೊಂದು ಕಡಿಮೆ ಪಂದ್ಯವನ್ನು ಆಡಬೇಕಾಗಿದೆ. ಇಂತಹ ಸಂದರ್ಭದಲ್ಲಿ 1 ಪಂದ್ಯ ಮಳೆಯಿಂದ ರದ್ದಾದರೆ ಮುಂದಿನ ಸುತ್ತಿಗೆ ಹೋಗಲು ತಂಡಗಳು ಸಂಕಷ್ಟ ಎದುರಿಸಬೇಕಾಗುತ್ತದೆ.

IND vs CAN: ಭಾರತ- ಕೆನಡಾ ಪಂದ್ಯ ಮಳೆಗಾಹುತಿ; ಸೂಪರ್ 8 ಸುತ್ತಿಗೆ ರೋಹಿತ್ ಪಡೆ

ಸೆಮಿಫೈನಲ್‌- ಫೈನಲ್ ಕಥೆ ಏನು?

ಮೊದಲ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದ ವೇಳೆ ಮಳೆ ಬಂದರೆ, ಅದೇ ದಿನ ಪಂದ್ಯದ ಫಲಿತಾಂಶ ಪಡೆಯಲು ಕನಿಷ್ಠ 10 ಓವರ್‌ಗಳ ಆಟ ನಡೆಯಬೇಕಾಗುತ್ತದೆ. ಇದು ಸಾಧ್ಯವಾಗದಿದ್ದರೆ ಪಂದ್ಯ ಮೀಸಲು ದಿನಕ್ಕೆ ಹೋಗಲಿದೆ. ಮೊದಲ ಸೆಮಿಫೈನಲ್ ಮತ್ತು ಫೈನಲ್‌ಪಂದ್ಯಗಳಿಗೆ 190 ನಿಮಿಷಗಳ ಅಧಿಕ ಸಮಯ ಮತ್ತು ಮೀಸಲು ದಿನವನ್ನು ನಿಗದಿಪಡಿಸಲಾಗಿದೆ. ಆದರೆ ಎರಡನೇ ಸೆಮಿಫೈನಲ್‌ ಪಂದ್ಯಕ್ಕೆ ಯಾವುದೇ ಮೀಸಲು ದಿನವನ್ನು ಮೀಸಲಿರಿಸಿಲ್ಲ. ಬದಲಿಗೆ ಎರಡನೇ ಸೆಮಿಫೈನಲ್‌ಗೆ ಹೆಚ್ಚುವರಿ 250 ನಿಮಿಷಗಳ ಹೆಚ್ಚಿನ ಸಮಯಾವಕಾಶವನ್ನು ನೀಡಲಾಗಿದೆ. ಇದರೊಳಗೆಯೇ ಪಂದ್ಯವನ್ನು ಮುಗಿಸಬೇಕಿದೆ.

ಒಂದು ವೇಳೆ ಪಂದ್ಯ ರದ್ದಾದರೆ, ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಮೇಲುಗೈ ಸಾಧಿಸಿರುತ್ತದೋ ಆ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ವಿಶೇಷವೆಂದರೆ ಎರಡನೇ ಸೆಮಿಫೈನಲ್ ಮತ್ತು ಫೈನಲ್ ನಡುವೆ ಕೇವಲ ಒಂದು ದಿನದ ಅಂತರ ಮಾತ್ರವಿದೆ. ಎರಡನೇ ಸೆಮಿಫೈನಲ್ ಪಂದ್ಯ ಜೂನ್ 27 ರಂದು ನಡೆದರೆ ಫೈನಲ್ ಪಂದ್ಯ ಜೂನ್ 29 ರಂದು ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:32 pm, Sat, 15 June 24

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ