ಬಹುನಿರೀಕ್ಷಿತ ಐಸಿಸಿ ಪುರುಷರ ಟಿ-20 ವಿಶ್ವಕಪ್ (ICC T20 World Cup) ಟೂರ್ನಿಯ ಫೀವರ್ ಶುರುವಾಗಿದೆ. ಈಗಾಗಲೇ ಟೂರ್ನಿಯ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪ್ರಕಟಿಸಿದ್ದು, ಅಕ್ಟೋಬರ್ 24 ರಂದು ಪಾಕಿಸ್ತಾನ ವಿರುದ್ಧ ಕಾದಾಟ ನಡೆಸುವ ಮೂಲಕ ಭಾರತ ತಂಡ ಚುಟುಕು ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ನಂತಹ ಪ್ರಮುಖ ತಂಡಗಳು ಅದಾಗಲೇ ಟಿ-20 ವಿಶ್ವಕಪ್ಗೆ 15 ಸದಸ್ಯರ ತಂಡವನ್ನು ಪ್ರಕಟ ಮಾಡಿದೆ. ಆದರೆ, ಟೀಮ್ ಇಂಡಿಯಾದಿಂದ (Team India) ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸದ್ಯ ಭಾರತ ತಂಡ ಯಾವಾಗ ಪ್ರಕಟ ಆಗುತ್ತೆ ಎಂಬ ಮಾಹಿತಿ ಹೊರಬಿದ್ದಿದೆ.
ಮೂಲಗಳ ಪ್ರಕಾರ ಚೇತನ್ ಶರ್ಮಾ ಮುಂದಾಳತ್ವದ ಬಿಸಿಸಿಐ ಆಯ್ಕೆ ಸಮಿತಿ ಇದೇ ಸೆಪ್ಟೆಂಬರ್ ಮೊದಲ ವಾರದಲ್ಲಿ ಐಸಿಸಿ ಟಿ-20 ವಿಶ್ವಕಪ್ಗೆ ಭಾರತದ 15 ಮಂದಿ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರಂತೆ. ಈ ಪ್ರಕ್ರಿಯೆ ಯುಎಇನಲ್ಲಿ ನಡೆಯಲಿದೆ. ಸೆಪ್ಟೆಂಬರ್ 10ರ ವಳಗೆ ಎಲ್ಲ ತಂಡಗಳು ಆಟಗಾರರ ಪಟ್ಟಿಯನ್ನು ಫೈನಲ್ ಮಾಡಬೇಕು ಎಂದು ಐಸಿಸಿ ಡೆಡ್ಲೈನ್ ನೀಡಿದೆ.
ಟೀಮ್ ಇಂಡಿಯಾದ 15 ಮಂದಿ ಸದಸ್ಯರ ಪಟ್ಟಿಯಲ್ಲಿ ಬಿಸಿಸಿಐ ಯಾರಿಗೆ ಮಣೆ ಹಾಕಲಿದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ. ಶಿಖರ್ ಧವನ್ ಸ್ಥಾನ ಇನ್ನೂ ಅಂತಿಮ ಆಗಿಲ್ಲ ಎಂದು ಹೇಳಲಾಗುತ್ತಿದ್ದು, ಆಯ್ಕೆ ಸಮಿತಿಯ ಗಮನ ಸೆಳೆಯದ ಶ್ರೇಯಸ್ ಅಯ್ಯರ್ ಕೂಡ ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ. ಕ್ರುನಾಲ್ ಪಾಂಡ್ಯ ಅಥವಾ ಭುವನೇಶ್ವರ್ ಕುಮಾರ್ ಪೈಕಿ ಒಬ್ಬರಿಗೆ ಸ್ಥಾನ ನೀಡುವ ಅಂದಾಜಿದೆ.
ಇನ್ನುಳಿದಂತೆ ಸೂರ್ಯಕುಮಾರ್ ಸ್ಥಾನ ಬಹುತೇಕ ಖಚಿತವಾಗಿದೆ. ಧವನ್ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ ಎಂದಾದರೆ, ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಬಹುದು. ಕೆ. ಎಲ್ ರಾಹುಲ್ 3ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ.
ಪ್ರಸಕ್ತ 2021ರ ಐಸಿಸಿ ಪುರುಷರ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯು ಎರಡು ಹಂತದಲ್ಲಿ ನಡೆಯಲಿದ್ದು, ಮೊದಲನೇ ಸುತ್ತಿನಲ್ಲಿ ಅರ್ಹತಾ ಪಂದ್ಯಗಳು ನಡೆದರೆ, ಎರಡನೇ ಸುತ್ತಿನಲ್ಲಿ ಸೂಪರ್ 12ರ ಹಂತದ ಪಂದ್ಯಗಳು ಜರುಗಲಿವೆ. ಯುಎಇ ಹಾಗೂ ಒಮನ್‌ನಲ್ಲಿ ಅಕ್ಟೋಬರ್ 17ರಿಂದ ಆರಂಭಗೊಂಡು, ನವೆಂಬರ್ 14 ರಂದು ದುಬೈನಲ್ಲಿ ಫೈನಲ್ ಹಣಾಹಣಿಯ ಮೂಲಕ ಅಂತ್ಯವಾಗಲಿದೆ. ಅಕ್ಟೋಬರ್ 24 ರಂದು ಭಾರತ ತಂಡ ಪಾಕಿಸ್ತಾನ ವಿರುದ್ಧ ದುಬೈನಲ್ಲಿ ಕಾದಾಡುವ ಮೂಲಕ ಅಭಿಯಾನ ಆರಂಭಿಸಲಿದೆ.
The Hundred: ಬ್ಯಾಟ್ಸ್ಮನ್ ಬಾರಿಸಿದ ಸಿಕ್ಸ್ಗೆ ಗ್ಯಾಲರಿಯಲ್ಲಿದ್ದ ಅಭಿಮಾನಿಯಿಂದ ಡೈವ್ ಹೊಡೆದು ಅದ್ಭುತ ಕ್ಯಾಚ್
IPL 2021: ದುಬೈ ಫ್ಲೈಟ್ ಏರಲು ಸಜ್ಜಾದ ಆರ್ಸಿಬಿ: ಯಾವ ತಂಡ ಯಾವಾಗ ಪ್ರಯಾಣ?: ಇಲ್ಲಿದೆ ಮಾಹಿತಿ
(T20 World Cup Indian team for ICC T20 World Cup will be announcing on 1st Week of Sep)