AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

The Hundred: ಬ್ಯಾಟ್ಸ್​ಮನ್ ಬಾರಿಸಿದ ಸಿಕ್ಸ್​ಗೆ ಗ್ಯಾಲರಿಯಲ್ಲಿದ್ದ ಅಭಿಮಾನಿಯಿಂದ ಡೈವ್ ಹೊಡೆದು ಅದ್ಭುತ ಕ್ಯಾಚ್

ಲಿವಿಂಗ್​ಸ್ಟೋನ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 40 ಎಸೆತಗಳಲ್ಲಿ ಬರೋಬ್ಬರಿ 10 ಸಿಕ್ಸರ್ ಸಿಡಿಸಿ ಅಜೇಯ 92 ರನ್ ಚಚ್ಚಿದರು. ಈ ಪೈಕಿ ಲಿವಿಂಗ್​ಸ್ಟೋನ್ ಸಿಡಿಸಿದ ಒಂದು ಸಿಕ್ಸ್​ನ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ.

The Hundred: ಬ್ಯಾಟ್ಸ್​ಮನ್ ಬಾರಿಸಿದ ಸಿಕ್ಸ್​ಗೆ ಗ್ಯಾಲರಿಯಲ್ಲಿದ್ದ ಅಭಿಮಾನಿಯಿಂದ ಡೈವ್ ಹೊಡೆದು ಅದ್ಭುತ ಕ್ಯಾಚ್
The Hundred Liam Livingstone
TV9 Web
| Edited By: |

Updated on: Aug 19, 2021 | 9:45 AM

Share

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದಿ 100 (The Hundred ) ಟೂರ್ನಿ ಅಂತಿಮ ಹಂತಕ್ಕೆ ತಲುಪಿದೆ. ಬರ್ಮಿಂಗ್ ಹ್ಯಾಮ್ ಫೀನಿಕ್ಸ್ (Birmingham Phoenix) ತಂಡ 8 ಪಂದ್ಯಗಳಲ್ಲಿ ಆರರಲ್ಲಿ ಜಯ ಸಾಧಿಸಿ 12 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದು ಫೈನಲ್​ಗೆ ಪ್ರವೇಶ ಪಡೆದಿದೆ. ಬರ್ಮಿಂಗ್ ಹ್ಯಾಮ್ ಇಷ್ಟರ ಮಟ್ಟಿಗೆ ಅದ್ಭುತ ಪ್ರದರ್ಶನ ನೀಡಲು ಪ್ರಮುಖ ಕಾರಣ ತಂಡದ ನಾಯಕ ಲಿಯಾಮ್ ಲಿವಿಂಗ್​ಸ್ಟೋನ್ (Liam Livingstone). ಪ್ರತಿ ಪಂದ್ಯದಲ್ಲಿ ಭರ್ಜರಿ ಆಟವಾಡುತ್ತಿರುವ ಇವರು ಬೌಂಡರಿ, ಸಿಕ್ಸರ್​​ಗಳ ಮಳೆ ಸುರಿಸುತ್ತಾರೆ. ಇದು ನಾರ್ಥರ್ನ್ ಸೂಪರ್ ಚಾರ್ಜೆಸನ್ ತಂಡದ ವಿರುದ್ಧವೂ ಮುಂದುವರೆಯಿತು. ಆದರೆ, ಈ ಪಂದ್ಯದಲ್ಲಿ ವಿಶೇಷ ಘಟನೆಯೊಂದು ನಡೆಯಿತು.

ಸೂಪರ್ ಚಾರ್ಜೆಸ್ ನೀಡಿದ್ದ ಟಾರ್ಗೆಟ್ ಬೆನ್ನಟ್ಟಿದ ಬರ್ಮಿಂಗ್​ಹ್ಯಾಮ್ ತಂಡದ ಪರ ನಾಯಕ ಲಿವಿಂಗ್​ಸ್ಟೋನ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 40 ಎಸೆತಗಳಲ್ಲಿ ಬರೋಬ್ಬರಿ 10 ಸಿಕ್ಸರ್ ಸಿಡಿಸಿ ಅಜೇಯ 92 ರನ್ ಚಚ್ಚಿದರು. ಈ ಪೈಕಿ ಲಿವಿಂಗ್​ಸ್ಟೋನ್ ಸಿಡಿಸಿದ ಒಂದು ಸಿಕ್ಸ್​ನ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ. ಇದರಲ್ಲಿ ಇವರು ಬಾರಿಸಿದ ಸಿಕ್ಸ್ ಪ್ರೇಕ್ಷಕ ಗ್ಯಾಲರಿಗೆ ತಲುಪಿದೆ. ಇಲ್ಲಿ ಓರ್ವ ಅಭಿಮಾನಿ ಅಚ್ಚರಿ ಎಂಬಂತೆ ಕುರ್ಚಿಯಿಂದ ಹಾರಿ ಡೈವ್ ಹೊಡೆದು ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ…

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೂಪರ್ ಚಾರ್ಜೆಸ್ ತಂಡ ನಿಗದಿತ 100 ಬಾಲ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಬಾರಿಸಿತು. ಟಾಮ್ ಕೋಲೆರ್ 44 ಎಸೆತಗಳಲ್ಲಿ 71 ರನ್ ಬಾರಿಸಿದರು. ಟಾರ್ಗೆಟ್ ಬೆನ್ನಟ್ಟಿದ ಬರ್ಮಿಂಗ್​ಹ್ಯಾಮ್ ತಂಡ ಆರಂಭದಲ್ಲಿ ವಿಲ್ ಸಮೀದ್(0) ವಿಕೆಟ್ ಕಳೆದುಕೊಂಡಿತು. ಆದರೆ, ನಾಯಕ ಲಿವಿಂಗ್​ಸ್ಟೋನ್ (ಅಜೇಯ 92) ಮತ್ತು ಫಿನ್ ಅಲೆನ್ (42) ಅವರ ಬೊಂಬಾಟ್ ಆಟದ ನೆರವಿನಿಂದ 74 ಎಸೆತಗಳಲ್ಲಿ 147 ರನ್ ಗಳಿಸಿ 8 ವಿಕೆಟ್​ಗಳ ಜಯ ಸಾಧಿಸಿತು.

ಲೀಗ್​ ಹಂತದ ಕೊನೆಯ ಪಂದ್ಯವಾಗಿದ್ದರಿಂದ ಗ್ರೂಪ್​ನಲ್ಲಿ ಅಗ್ರಸ್ಥಾನದಲ್ಲಿರಲು ಬರ್ಮಿಂಗ್​ಹ್ಯಾಮ್​ಗೆ ಈ ಪಂದ್ಯವನ್ನು ಗೆಲ್ಲಬೇಕು ಅಥವಾ ಟೈ ಮಾಡಬೇಕಿತ್ತು. ಹೀಗೆ ಮಾಡುವುದರಿಂದ ತಂಡವು ನೇರವಾಗಿ ಫೈನಲ್‌ಗೆ ಅರ್ಹತೆಗಿಟ್ಟಿಸುವ ಅವಕಾಶವಿತ್ತು.

ಅದರಂತೆ ಲಿವಿಂಗ್​ಸ್ಟೋನ್ ಕೇವಲ 40 ಎಸೆತಗಳಲ್ಲಿ ಅಜೇಯ 92 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಸ್ಪೋಟಕ ಇನಿಂಗ್ಸ್​ನಲ್ಲಿ ಲಿವಿಂಗ್​ಸ್ಟೋನ್ ಬ್ಯಾಟ್​ನಿಂದ ಸಿಡಿದದ್ದು ಬರೋಬ್ಬರಿ 10 ಸಿಕ್ಸರ್ ಮತ್ತು 3 ಬೌಂಡರಿಗಳು. ಇದರೊಂದಿಗೆ ಈ ಟೂರ್ನಿಯಲ್ಲಿ ಇನ್ನಿಂಗ್ಸ್​ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿದ ದಾಖಲೆ ಕೂಡ ಲಿವಿಂಗ್​ಸ್ಟೋನ್ ಪಾಲಾಯಿತು. ಈ ಭರ್ಜರಿ ಗೆಲುವಿನೊಂದಿಗೆ ಇದೀಗ ದಿ ಹಂಡ್ರೆಡ್ ಲೀಗ್​ನಲ್ಲಿ ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ತಂಡವು ಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

IPL 2021: ದುಬೈ ಫ್ಲೈಟ್ ಏರಲು ಸಜ್ಜಾದ ಆರ್​ಸಿಬಿ: ಯಾವ ತಂಡ ಯಾವಾಗ ಪ್ರಯಾಣ?: ಇಲ್ಲಿದೆ ಮಾಹಿತಿ

ಮೊಹಮ್ಮದ್ ಸಿರಾಜ್ ಆಟಕ್ಕೆ ಫಿದಾ ಆದ ಪಾಕಿಸ್ತಾನ ಪತ್ರಕರ್ತೆ: ಹೇಳಿದ್ದೇನು ನೋಡಿ

(The Hundred Liam Livingstone sixes was caught by a fan in the crowd viral video)

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ