T20 World Cup 2021: ನ್ಯೂಜಿಲೆಂಡ್ ಸೋಲುತ್ತಾ? ಅಂಕಿ ಅಂಶ ಕೂಡ ಅದನ್ನೇ ಹೇಳುತ್ತೆ
Afghanistan vs New Zealand: ಇತ್ತೀಚಿನ ದಾಖಲೆಗಳನ್ನು ತೆಗೆದುಕೊಂಡರೂ, 2015 ಹಾಗೂ 2019 ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವು ಫೈನಲ್ನಲ್ಲಿ ಸೋಲನುಭವಿಸಿತ್ತು. ಹಾಗೆಯೇ T20 ಮತ್ತು ODI ಒಟ್ಟಾರೆ ದಾಖಲೆಯನ್ನು ನೋಡಿದಾಗ, ನ್ಯೂಜಿಲೆಂಡ್ ಇದುವರೆಗೆ ನಾಕೌಟ್ನಲ್ಲಿ 44 ಪಂದ್ಯಗಳನ್ನು ಆಡಿದೆ.
ಭಾನುವಾರ ನಡೆಯಲಿರುವ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ್ (Afghanistan vs New Zealand) ನಡುವಿನ ಪಂದ್ಯಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಈ ಪಂದ್ಯದ ಫಲಿತಾಂಶದ ಮೇಲೆ ಟೀಮ್ ಇಂಡಿಯಾದ (Team India) ಸೆಮಿಫೈನಲ್ ಕನಸು ನಿರ್ಧಾರವಾಗಲಿದೆ. ಒಂದು ವೇಳೆ ನ್ಯೂಜಿಲೆಂಡ್ ಗೆದ್ದರೆ ಭಾರತ ತಂಡವು ಟಿ20 ವಿಶ್ವಕಪ್ನಿಂದ ಹೊರಬೀಳಲಿದೆ. ಅತ್ತ ಸೆಮಿಫೈನಲ್ಗೇರಬೇಕಾದರೆ ಅಫ್ಘಾನಿಸ್ತಾನ್ ಹಾಗೂ ನ್ಯೂಜಿಲೆಂಡ್ ತಂಡಗಳಿಗೂ ಈ ಪಂದ್ಯ ಬಹಳ ಮಹತ್ವದ್ದು. ಹೀಗಾಗಿ ಒಂದು ಪಂದ್ಯವು ಮೂರು ತಂಡಗಳ ಸೆಮಿಫೈನಲ್ ಹಾದಿಯನ್ನು ನಿರ್ಧರಿಸಲಿದೆ. ಇಲ್ಲಿ ಬಲಿಷ್ಠ ತಂಡವಾಗಿ ನ್ಯೂಜಿಲೆಂಡ್ ತಂಡ ಕಾಣಿಸಿಕೊಂಡರೂ, ನಿರ್ಣಾಯಕ ಪಂದ್ಯದಲ್ಲಿ ಒತ್ತಡಕ್ಕೊಳಗಾಗುವ ಕೆಟ್ಟ ದಾಖಲೆ ಇದೇ ತಂಡದ ಮೇಲಿದೆ. ಅದು ಈ ಬಾರಿ ಕೂಡ ಆವೃತ್ತಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಏಕೆಂದರೆ ನ್ಯೂಜಿಲೆಂಡ್ ತಂಡ ಒಂದು ಬಾರಿಯೂ ಟಿ20 ವಿಶ್ವಕಪ್ ಗೆದ್ದಿಲ್ಲ. ಎರಡು ಬಾರಿ ಸೆಮಿಫೈನಲ್‌ನಲ್ಲಿ ಸೋಲುವ ಮೂಲಕ ಹೊರಬಿದ್ದಿತ್ತು. 2007 ರ ಮೊದಲ T20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ್ ವಿರುದ್ದ 6 ವಿಕೆಟ್‌ಗಳಿಂದ ಸೋತು ಹೊರನಡೆದಿತ್ತು. ಹಾಗೆಯೇ 2016ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ 7 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು. ಅಂದರೆ ಇಲ್ಲಿ ನಿರ್ಣಾಯಕ ಎನಿಸಿಕೊಳ್ಳುವ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಎಡವಿರುವುದು ಸ್ಪಷ್ಟ.
ಇನ್ನು ಇತ್ತೀಚಿನ ದಾಖಲೆಗಳನ್ನು ತೆಗೆದುಕೊಂಡರೂ, 2015 ಹಾಗೂ 2019 ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವು ಫೈನಲ್ನಲ್ಲಿ ಸೋಲನುಭವಿಸಿತ್ತು. ಹಾಗೆಯೇ T20 ಮತ್ತು ODI ಒಟ್ಟಾರೆ ದಾಖಲೆಯನ್ನು ನೋಡಿದಾಗ, ನ್ಯೂಜಿಲೆಂಡ್ ಇದುವರೆಗೆ ನಾಕೌಟ್ನಲ್ಲಿ 44 ಪಂದ್ಯಗಳನ್ನು ಆಡಿದೆ. ಅದರಲ್ಲಿ ಗೆದ್ದಿರೋದು ಕೇವಲ 13 ಬಾರಿ ಮಾತ್ರ. ಅಂದರೆ ಸೆಮಿಫೈನಲ್, ಫೈನಲ್ ಮತ್ತು ಕ್ವಾರ್ಟರ್-ಫೈನಲ್ನಲ್ಲಿ ನ್ಯೂಜಿಲೆಂಡ್ 30 ಕ್ಕೂ ಅಧಿಕ ಪಂದ್ಯಗಳಲ್ಲಿ ಸೋಲನುಭವಿಸಿದೆ. ನಾಕೌಟ್ ಹಂತದಲ್ಲಿ ಶೇ.68 ರಷ್ಟು ಪಂದ್ಯಗಳಲ್ಲಿ ಸೋತಿರುವ ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆಯನ್ನು ಹೊಂದಿದೆ.
ಇದಾಗ್ಯೂ ಕಳೆದ ಕೆಲ ವರ್ಷಗಳಿಂದ ತಂಡವನ್ನು ಅದೃಷ್ಟ ಕೈ ಹಿಡಿಯುತ್ತಿದೆ ಎನ್ನಬಹುದು. ಏಕೆಂದರೆ 2019 ರ ಏಕದಿನ ವಿಶ್ವಕಪ್ ಸೆಮಿಫೈನಲ್ ವೇಳೆ ಮಳೆ ಬಂದ ಕಾರಣ ಪರಿಸ್ಥಿತಿ ನ್ಯೂಜಿಲೆಂಡ್ ಪಾಲಿಗೆ ವರದಾನವಾಯಿತು. ಇದರಿಂದ ಟೀಮ್ ಇಂಡಿಯಾ ವಿರುದ್ದ ಗೆದ್ದು ಫೈನಲ್ ಪ್ರವೇಶಿಸಿತ್ತು. ಹಾಗೆಯೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲೂ ವರುಣನ ಕೃಪೆಯಿಂದ ಟೀಮ್ ಇಂಡಿಯಾ ವಿರುದ್ದ ನ್ಯೂಜಿಲೆಂಡ್ ಗೆಲ್ಲುವಂತಾಯಿತು ಎಂದರೆ ತಪ್ಪಾಗಲಾರದು. ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿ ಕೂಡ ನಿರ್ಣಾಯಕ ಹಂತದಲ್ಲಿ ನ್ಯೂಜಿಲೆಂಡ್ ಒತ್ತಡಕ್ಕೊಳಗಾಗಿ ಮುಗ್ಗರಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ
(T20 World Cup New Zealand record in knock out matches)