ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನ ಭಾರತ 209 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದಾಗ ಅತಿಥೇಯ ತಂಡದ ಕ್ಯಾಪ್ಟನ್ ಜೋ ರೂಟ್ ಅಳವಡಿಸಿದ ತಂತ್ರಗಾರಿಕೆ ತೀವ್ರ ಖಂಡನೆಗೆ ಗುರಿಯಾಗಿದೆ. ಪ್ರವಾಸಿ ತಂಡದ ಟೇಲ್ಎಂಡರ್ಗಳಾಗಿರಿವ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಮುರಿಯದ 9 ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ ಮ್ಯಾಚ್ ಸೇವಿಂಗ್ ಮಾತ್ರವಲ್ಲದೆ ಮ್ಯಾಚ್ ವಿನ್ನಿಂಗ್ 89 ರನ್ಗಳನ್ನು ಸೇರಿಸಿದರು.
ಇಂಗ್ಲೆಂಡ್ ತಂಡದ ತಂತ್ರಗಾರಿಕೆ ಕುರಿತು ಲೆಜೆಂಡರಿ ಸ್ಪಿನ್ನರ್ ಮತ್ತು ಸ್ಕೈ ಸ್ಪೋರ್ಟ್ಸ್ ಚ್ಯಾನೆಲ್ನಲ್ಲಿ ಟಿವಿ ವೀಕ್ಷಕ ವಿವರಣೆಕಾರನಾಗಿ ಕೆಲಸ ಮಾಡುತ್ತಿರುವ ಶೇನ್ ವಾರ್ನ್ ಅವರರು ಸೋಜಿಗ ವ್ಯಕ್ತಪಡಿಸಿದ್ದಾರೆ. ರೂಟ್ ಅವರ ತಂತ್ರಗಾರಿಕೆಯನ್ನು ‘ಹಾರಿಬಲ್’ ಎಂದು ಪ್ರತಿಕ್ರಿಯಿಸಿರುವ ವಾರ್ನ್ ಪಂದ್ಯ ಗೆಲ್ಲುವ ಅವಕಾಶ ಭಾರತಕ್ಕಿದೆ ಎಂದಿದ್ದಾರೆ.
‘ಇಂಗ್ಲೆಂಡ್ ಅನುಸರಿಸಿದ ತಂತ್ರಗಾರಿಕೆ ಆಘಾತಕಾರಿಯಾಗಿದೆ. ನನಗೆ 5-6 ಫೀಲ್ಡರ್ಗಳು ಬೌಂಡರಿ ಗೆರೆ ಮೇಲೆ ಬೇಡ, ಇವರನ್ನ ಔಟ್ ಮಾಡಲು ಆಕ್ರಮಣಕಾರಿ ಫೀಲ್ಡ್ ಸೆಟ್ಟಿಂಗ್ ಬೇಕು ಅಂತ ಬೌಲರ್ಗಳು ಯಾಕೆ ಹೇಳಲಿಲ್ಲವೋ? ಇಂಗ್ಲೆಂಡ್ ಗೆಲ್ಲುವ ಪ್ರಯತ್ನ ಮಾಡುವುದೇ? ನಿಮಗೆ ನೆನಪಿರಲಿ; ಗೆಲ್ಲಲು 75 ಓವರ್ಗಳಲ್ಲಿ 270 ರನ್ ಟಾರ್ಗೆಟ್ ನ್ಯೂಜಿಲೆಂಡ್ ನೀಡಿದ್ದಾಗ ಇಂಗ್ಲೆಂಡ್ ಚೇಸ್ ಮಾಡುವ ಪ್ರಯತ್ನ ಮಾಡಲೇ ಇಲ್ಲ. ಈ ಪಂದ್ಯವನ್ನು ಇಂಡಿಯ ಗೆಲ್ಲಲಿದೆ ಇಲ್ಲವೇ ಡ್ರಾ ಆಗುತ್ತದೆ,’ ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ.
Horrible tactics from Eng. Why don’t the bowlers say no I don’t want 5/6 fielders on the fence – as how am I getting the batsman out skip. Will Eng go for these runs ? Remember when NZ set 270 of 75 overs & Eng never considered the chase. India win or draw for me @SkyCricket
— Shane Warne (@ShaneWarne) August 16, 2021
ಆಸ್ಟ್ರೇಲಿಯದ ಮತ್ತೊಬ್ಬ ಮಾಜಿ ಅಟಗಾರ ಟಾಮ್ ಮೂಡಿ ಸಹ ರೂಟ್ ಅವರ ತಂತ್ರಗಾರಿಕೆಯನ್ನು ಟೀಕಿಸಿದ್ದಾರೆ
Tactical shocker from England, India now in the box seat! #ENGvIND
— Tom Moody (@TomMoodyCricket) August 16, 2021
ಶಮಿ ಮತ್ತು ಬುಮ್ರಾ-ಇವರಿಬ್ಬರ ದಿಟ್ಟತನದ ಬ್ಯಾಟಿಂಗ್ ಪ್ರದರ್ಶನವನ್ನು ಅನೇಕರು ಪ್ರಶಂಸಿದ್ದಾರೆ. ಭಾರತದ ಮಾಜಿ ಆರಂಭ ಆಟಗಾರ ವಾಸಿಮ್ ಜಾಫರ್ ಅವರು ತಮ್ಮ ಟ್ವೀಟ್ನಲ್ಲಿ ಕೆಲ ಮೀಮ್ಗಳನ್ನು ಹಾಕಿ ಶಮಿ ಮತ್ತು ಬುಮ್ರಾಗೆ ಶಹಬ್ಬಾಸ್ಗಿರಿ ನೀಡಿದ್ದಾರೆ.
Take a bow @MdShami11 @Jaspritbumrah93 ???? #ENGvIND pic.twitter.com/Qn3NsBZS6K
— Wasim Jaffer (@WasimJaffer14) August 16, 2021
ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರು ಭಾರತದ ಲೋಯರ್ ಆರ್ಡರ್ ಬ್ಯಾಟ್ಸ್ಮನ್ಗಳು ಸ್ವೀಪ್ ಶಾಟ್ ಆಡಬಲ್ಲರು, ಪುಲ್ ಶಾಟ್ ಬಾರಿಸಬಲ್ಲರು, ಬಾಲನ್ನು ಡ್ರೈವ್ ಮಾಡಬಲ್ಲರು ಮತ್ತು ಲೆಗ್ ಸೈಡ್ನ ಎಸೆತವನ್ನು ಆಫ್ಸೈಡ್ ಕಡೆ ಬಾರಿಸಬಲ್ಲರು ಎಂದು ಹೇಳಿದ್ದಾರೆ.
Yeah indian lower order sweep bhi maarega pull bhi maarega drive bhi maarega leg side ki ball off side bhi maarega ???? #IndvsEng @MdShami11 @Jaspritbumrah93 ??
— Yuzvendra Chahal (@yuzi_chahal) August 16, 2021
ಭಾರತದ ಮಾಜಿ ಆರಂಭಿಕ ಮತ್ತು ಸ್ಫೋಟಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್ ಅವರು, ‘ಬಹಳ ಖುಷಿ ಪಡಿಸಿದಿರಿ ಶಮಿ ಮತ್ತು ಬುಮ್ರಾ, ನಿಮಗೊಂದು ಸಲಾಂ, ಚಪ್ಪಾಳೆ ತಟ್ಟುವುದು ನಿಲ್ಲಬಾರದು,’ ಎಂದು ಹೇಳಿದ್ದಾರೆ.
Mauj karadi.
Shami- Bumrah , take a bow.
Taaliyan bajti rehni chahiye. pic.twitter.com/ViiTrBHvvj— Virender Sehwag (@virendersehwag) August 16, 2021
ಭಾರತದ ಮಾಜಿ ಸ್ಪಿನ್ನರ್ ಮತ್ತು ಹಾಲಿ ಕಾಮೆಂಟೇಟರ್ ಮುರಳಿ ಕಾರ್ತೀಕ್ ಅವರು, ‘ಇವರಿಬ್ಬರ ಹೋರಾಟ ಬಹಳ ಮೆಚ್ಚಿಗೆಯಾಯಿತು ಮತ್ತು ಮನಸ್ಸಿಗೆ ಮುದ ನೀಡಿತು. ಅದೃಷ್ಟ ಶಮಿ ಮತ್ತು ಬುಮ್ರಾ ಅವರೊಂದಿಗಿದೆ, ಆದರೆ ಹೋರಾಟ ಮುಂದುವರಿಸಬೇಕಿದೆ,’ ಎಂದು ಟ್ವೀಟ್ ಮಾಡಿದ್ದಾರೆ.
Love a bit of a Dogfight..this is delightful to watch..Lady luck so far with shami and bumrah.. Way to go guys? #LordsTest #IndvsEng
— Kartik Murali (@kartikmurali) August 16, 2021
ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಅವರು ಟ್ವೀಟ್ನಲ್ಲಿ, ಇಡೀ ತಂಡ ಬುಮ್ರಾ ಮತ್ತು ಶಮಿ ಅವರನ್ನು ಹೃತ್ಪೂರ್ವಕವಾಗಿ ಚಪ್ಪಾಳೆ ತಟ್ಟುತ್ತಾ ಡ್ರೆಸಿಂಗ್ ರೂಮಿಗೆ ಬರಮಾಡಿಕೊಂಡಿದ್ದು ನೋಡಿ ಬಹಳ ಸಂತೋಷವಾಯಿತು. ಕ್ಲಿಷ್ಟಕರ ಸ್ಥಿತಿಯಲ್ಲಿ ಇಂಥ ಜೊತೆಗಾರಿಕೆಗಳು ಇಡೀ ಟೀಮಿನ ಸ್ಥೈರ್ಯವನ್ನು ಹೆಚ್ಚಿಸುತ್ತವೆ ಮತ್ತು ಪ್ರತಿಯೊಬ್ಬ ಆಟಗಾರ ಸ್ಫೂರ್ತಿಗೊಳಗಾಗುತ್ತಾನೆ. ಸದಸ್ಯನೊಬ್ಬನ ಯಶಸನ್ನು ಇಡೀ ತಂಡ ಆನಂದಿಸುತ್ತಿರುವುನ್ನು ನೋಡುವುದು ಬಹಳ ಖುಷಿ ನೀಡುವ ಸಂಗತಿ,’ ಎಂದು ಲಕ್ಷ್ಮಣ್ ಹೇಳಿದ್ದಾರೆ.
Really happy to see the entire team giving a grand welcome to both Bumrah & Shami. Such partnerships in trying circumstances lifts the morale of the entire team and suddenly gets everyone charged up. Great to see the team enjoying each other’s success pic.twitter.com/V3TYRQWIT0
— VVS Laxman (@VVSLaxman281) August 16, 2021
ಇದನ್ನೂ ಓದಿ: India vs England 2nd Test: ಭಾರತ ತಂಡ ಇಷ್ಟು ರನ್ ಗಳಿಸಿದರೆ ನಮಗೆ ಗೆಲುವು ತುಂಬಾನೆ ಕಷ್ಟ ಎಂದ ಮೊಯೀನ್ ಅಲಿ