Tagenarine Chanderpaul: ತಂದೆಯ ಹಾದಿಯಲ್ಲಿ ಮಗ..ದ್ವಿಶತಕ ಸಿಡಿಸಿ ಮಿಂಚಿದ ಮಾಜಿ ಕ್ರಿಕೆಟಿಗನ ಪುತ್ರ

| Updated By: ಝಾಹಿರ್ ಯೂಸುಫ್

Updated on: Feb 06, 2023 | 8:11 PM

Tagenarine Chanderpaul: ಮೂರನೇ ದಿನದಾಟದ ವೇಳೆ ಮೊದಲ ಇನಿಂಗ್ಸ್ ಆರಂಭಿಸಿರುವ ಜಿಂಬಾಬ್ವೆ ತಂಡವು 84 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡಿದೆ.

Tagenarine Chanderpaul: ತಂದೆಯ ಹಾದಿಯಲ್ಲಿ ಮಗ..ದ್ವಿಶತಕ ಸಿಡಿಸಿ ಮಿಂಚಿದ ಮಾಜಿ ಕ್ರಿಕೆಟಿಗನ ಪುತ್ರ
Tagenarine Chanderpaul
Follow us on

ವೆಸ್ಟ್ ಇಂಡೀಸ್​ನ ಮಾಜಿ ಆಟಗಾರ ಶಿವನಾರಾಯಣ್ ಚಂದ್ರಪಾಲ್ ಅವರ ಪುತ್ರ ಟಾಗೆನರೈನ್ ಚಂದ್ರಪಾಲ್ (Tagenarine Chanderpaul) ಟೆಸ್ಟ್ ಕ್ರಿಕೆಟ್​ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ಅಪ್ಪ-ಮಗ ಎಂಬ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಶಿವನಾರಾಯಣ್ ಚಂದ್ರಪಾಲ್ 2005 ರಲ್ಲಿ ಸೌತ್ ಆಫ್ರಿಕಾ ವಿರುದ್ಧ 203 ರನ್​ ಬಾರಿಸಿ ಮಿಂಚಿದ್ದರು. ಇದೀಗ ತಂದೆಯ ಹಾದಿಯಲ್ಲಿರುವ ಮಗ ಕೂಡ ದ್ವಿಶತಕ ಬಾರಿಸಿ ವಿಶ್ವದ ಗಮನ ಸೆಳೆದಿದ್ದಾರೆ.

ಇನ್ನು ಜಿಂಬಾಬ್ವೆ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್​ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ವಿಂಡೀಸ್​ಗೆ ಟಾಗೆನರೈನ್ ಹಾಗೂ ಕ್ರೇಗ್ ಬ್ರಾಥ್​ವೈಟ್ ಅತ್ಯುತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ ನಾಜೂಕಾದ ಜೊತೆಯಾಟವಾಡಿದ ಈ ಜೋಡಿ 336 ರನ್​ಗಳನ್ನು ಪೇರಿಸಿದರು. ಈ ಹಂತದಲ್ಲಿ 312 ಎಸೆತಗಳಲ್ಲಿ 18 ಫೋರ್​ನೊಂದಿಗೆ 182 ರನ್​ ಬಾರಿಸಿದ್ದ ಕ್ರೇಗ್ ಬ್ರಾಥ್​ವೈಟ್ ಎಲ್​ಬಿಡಬ್ಲ್ಯೂ ಆಗಿ ಹೊರನಡೆದರು.

ಮತ್ತೊಂದೆಡೆ ಕಲಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿದ ಟಾಗೆನರೈನ್ ಚಂದ್ರಪಾಲ್ ಕೆಲ ಹೊಡೆತಗಳ ಮೂಲಕ ತಂದೆಯನ್ನು ನೆನಪಿಸಿದರು. ಅಷ್ಟೇ ಅಲ್ಲದೆ 465 ಎಸೆತಗಳಲ್ಲಿ ಚೊಚ್ಚಲ ದ್ವಿಶತಕ ಪೂರೈಸಿದರು. ಈ ದ್ವಿಶತಕ ಮೂಡಿಬರುವಷ್ಟರಲ್ಲಿ ವೆಸ್ಟ್ ಇಂಡೀಸ್ ಮೊತ್ತವು 400ರ ಗಡಿದಾಟಿತ್ತು.

ಇದನ್ನೂ ಓದಿ
ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 6 ಬೌಲರ್​ಗಳು ಇವರೇ
ವಿದೇಶದಲ್ಲಿ ಪಂದ್ಯವಾಡುತ್ತಿದ್ದ ಆಟಗಾರನನ್ನು ಕ್ರೀಡಾ ಸಚಿವನಾಗಿ ಆಯ್ಕೆ ಮಾಡಿದ ಪಾಕ್ ಸರ್ಕಾರ
Shubman Gill: ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಶುಭ್​ಮನ್ ಗಿಲ್
WIPL 2023: ಮಹಿಳಾ ಐಪಿಎಲ್ 5 ತಂಡಗಳ ಘೋಷಣೆ

ಹೀಗಾಗಿ 6 ವಿಕೆಟ್ ನಷ್ಟಕ್ಕೆ 447 ರನ್​ಗಳಿಸಿದ್ದ ವೇಳೆ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ ಡಿಕ್ಲೇರ್ ಘೋಷಿಸಿತು. ವಿಶೇಷ ಎಂದರೆ 467 ಎಸೆತಗಳನ್ನು ಎದುರಿಸಿದ ಟಾಗೆನರೈನ್ ಚಂದ್ರಪಾಲ್ 3 ಭರ್ಜರಿ ಸಿಕ್ಸ್ ಹಾಗೂ 16 ಬೌಂಡರಿಯೊಂದಿಗೆ 207 ರನ್​ ಬಾರಿಸಿ ಅಜೇಯರಾಗಿ ಉಳಿದರು.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಶತಕ ಬಾರಿಸಿದ ಟೀಮ್ ಇಂಡಿಯಾದ 7 ಬ್ಯಾಟ್ಸ್​ಮನ್​ಗಳ ಪಟ್ಟಿ ಇಲ್ಲಿದೆ

ಒಟ್ಟಿನಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ವೆಸ್ಟ್ ಇಂಡೀಸ್​ನ ಮೊದಲ ಅಪ್ಪ-ಮಗ ಎಂಬ ಹಿರಿಮೆಗೆ ಶಿವನಾರಾಯಣ್ ಚಂದ್ರಪಾಲ್-ಟಾಗೆನರೈನ್ ಚಂದ್ರಪಾಲ್ ಪಾತ್ರರಾಗಿದ್ದಾರೆ.

ಸದ್ಯ ಮೂರನೇ ದಿನದಾಟದ ವೇಳೆ ಮೊದಲ ಇನಿಂಗ್ಸ್ ಆರಂಭಿಸಿರುವ ಜಿಂಬಾಬ್ವೆ ತಂಡವು 84 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಇನ್ನು ಕೂಡ 363 ರನ್​ ಕಲೆಹಾಕಬೇಕಿದ್ದು, ಅದರೊಳಗೆ ಆಲೌಟ್ ಮಾಡಿ ಫಾಲೋಆನ್ ಹೇರುವ ಪ್ಲ್ಯಾನ್​ನಲ್ಲಿದೆ ವೆಸ್ಟ್ ಇಂಡೀಸ್ ತಂಡ.