R Vinay Kumar: ಟೀಂ ಇಂಡಿಯಾ ಮಾಜಿ ವೇಗಿ, ಕನ್ನಡಿಗ ವಿನಯ್​ ಕುಮಾರ್​ ದಂಪತಿಗಳಿಗೆ ಹೆಣ್ಣು ಮಗು ಜನನ

| Updated By: ಪೃಥ್ವಿಶಂಕರ

Updated on: Jun 24, 2022 | 12:39 PM

R Vinay Kumar: ವಿನಯ್ ಕುಮಾರ್ ಪತ್ನಿ ರಿಚಾ ಸಿಂಗ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನು ವಿನಯ್ ಕುಮಾರ್ ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು, ನವಜಾತ ಹೆಣ್ಣು ಮಗುವಿನ ಜೊತೆಗಿನ ಫೋಟೋವನ್ನು ಶೇರ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

R Vinay Kumar: ಟೀಂ ಇಂಡಿಯಾ ಮಾಜಿ ವೇಗಿ, ಕನ್ನಡಿಗ ವಿನಯ್​ ಕುಮಾರ್​ ದಂಪತಿಗಳಿಗೆ ಹೆಣ್ಣು ಮಗು ಜನನ
ಮಗುವಿನೊಂದಿಗೆ ವಿನಯ್ ದಂಪತಿಗಳು
Follow us on

ಭಾರತದ ಮಾಜಿ ವೇಗದ (Team India) ಬೌಲರ್ ಹಾಗೂ ಕನ್ನಡಿಗ ಆರ್. ವಿನಯ್ ಕುಮಾರ್ (R Vinay Kumar) ಮನೆಯಲ್ಲಿ ಸಂತಸ ಮನೆ ಮಾಡಿದೆ. ವಿನಯ್ ಕುಮಾರ್ ಪತ್ನಿ ರಿಚಾ ಸಿಂಗ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನು ವಿನಯ್ ಕುಮಾರ್ ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು, ನವಜಾತ ಹೆಣ್ಣು ಮಗುವಿನ ಜೊತೆಗಿನ ಫೋಟೋವನ್ನು ಶೇರ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ನಮ್ಮ ಬದುಕಿಗೆ ಹೆಣ್ಣು ಮಗು ಎಂಟ್ರಿಯಾಗಿದೆ ಎಂಬುದನ್ನು ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ವಿನಯ್ ಕುಮಾರ್ ತಾನು ಶೀಘ್ರದಲ್ಲೇ ತಂದೆಯಾಗಲಿದ್ದೇನೆ, ಪತ್ನಿ ಗರ್ಭಿಣಿ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು.

ವಿನಯ್ ವೃತ್ತಿ ಬದುಕು

ಇನ್ನು 2021 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ದಾವಣಗೆರೆ ಎಕ್ಸ್​​ಪ್ರೆಸ್​, ಒಂದು ಟೆಸ್ಟ್​​, 31 ಏಕದಿನ ಹಾಗೂ 9 ಟಿ20ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಮೂರು ವಿಧದ ಕ್ರಿಕೆಟ್​ನಿಂದ ವಿನಯ್​ ಒಟ್ಟು 49 ವಿಕೆಟ್​ ಕಿತ್ತಿದ್ದಾರೆ. 2011ರಲ್ಲಿ ದೆಹಲಿಯಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ವಿನಯ್​ ಕುಮಾರ್ 30 ರನ್​ ನೀಡಿ 4 ವಿಕೆಟ್​ ಪಡೆದಿದ್ದರು. ಇದು ಅವರ ಜೀವಮಾನದ ಅತ್ಯುತ್ತಮ ಸಾಧನೆ ಆಗಿದೆ.

ಇದನ್ನೂ ಓದಿ: IPL 2021: ಮುಂಬೈ ಇಂಡಿಯನ್ಸ್ ತಂಡಕ್ಕೆ ಕನ್ನಡಿಗ ವಿನಯ್ ಕುಮಾರ್ ಸೇರ್ಪಡೆ

2004ರಲ್ಲಿ ಕರ್ನಾಟಕ ಪರ ಪ್ರಥಮ ದರ್ಜೆ ಕ್ರಿಕೆಟ್​ಗೆ ಕಾಲಿಟ್ಟ ವಿನಯ್ ಕುಮಾರ್ ತಮ್ಮ ವೇಗ ಮತ್ತು ಸ್ಥಿರ ಪ್ರದರ್ಶನದಿಂದ ಬಹುಬೇಗನೇ ಉತ್ತಮ ಸಾಧನೆ ಮಾಡಿದರು. 2007-08 ರಣಜಿ ಸೀಸನ್​ನಲ್ಲಿ 40 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. ಕರ್ನಾಟಕ ರಣಜಿ ತಂಡವನ್ನು ವಿನಯ್​ ಕುಮಾರ್​ ಮುನ್ನಡೆಸಿದ್ದಾರೆ. ಇವರ ನಾಯಕತ್ವದಲ್ಲಿ 2013-14 ಮತ್ತು 2014-15ರಲ್ಲಿ ಕರ್ನಾಟಕ ತಂಡ ರಣಜಿ ಕಪ್​ ಗೆದ್ದಿತ್ತು. 2018ರಲ್ಲಿ ಅವರು ರಣಜಿ ಟ್ರೋಫಿಯಲ್ಲಿ 100ನೇ ಮ್ಯಾಚ್​ ಆಡಿದ್ದಾರೆ. ಕರ್ನಾಟಕ ತಂಡದಿಂದ ಕೈಬಿಟ್ಟ ನಂತರ ಅವರು ಪಾಂಡಿಚೇರಿಗೆ ತೆರಳಿದ್ದರು. ಇನ್ನು ಐಪಿಎಲ್​ನಲ್ಲೂ ವಿನಯ್ ಆರ್​ಸಿಬಿ ಹಾಗೂ ಮುಂಬೈ ತಂಡಗಳ ಪರ ವಿನಯ್ ಆಡಿದ್ದಾರೆ. ಐಪಿಎಲ್‌ನಲ್ಲಿ 105 ಪಂದ್ಯಗಳನ್ನಾಡಿ 28.25ರ ಸರಾಸರಿಯಲ್ಲಿ 105 ವಿಕೆಟ್ ಕಬಳಿಸಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 461 ಪಂದ್ಯಗಳನ್ನಾಡಿ 923 ವಿಕೆಟ್ ಕಬಳಿಸಿದ್ದಾರೆ.

Published On - 12:18 pm, Fri, 24 June 22