IND vs SA, ICC ODI World Cup: ಭಾರತ ತನಗೆ ಬೇಕಾದಂತೆ DRS ಅನ್ನು ತಿರುಚುತ್ತಿದೆ: ಪಾಕ್ ಆಟಗಾರನಿಂದ ವಿವಾದಾತ್ಮಕ ಹೇಳಿಕೆ

|

Updated on: Nov 06, 2023 | 12:27 PM

Hasan Raza controversial DRS statement: "ನಾನು ಡಿಆರ್‌ಎಸ್ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಿದ್ದೆನೆ. ವ್ಯಾನ್ ಡೆರ್ ಡಸ್ಸೆನ್ ಅವರ ಕಾಲಿಗೆ ಬಡಿದ ಚೆಂಡು ಲೆಗ್ ಸ್ಟಂಪ್ ಮೇಲೆ ಬಂದು ನಂತರ ಮಿಡಲ್ ಸ್ಟಂಪ್‌ಗೆ ಬಡಿಯುತ್ತಿತ್ತು. ಅದು ಹೇಗೆ ಸಾಧ್ಯ?. ಡಿಆರ್‌ಎಸ್ ವಿಚಾರದಲ್ಲಿ ಭಾರತ ತನಗೆ ಬೇಕಾದಂತೆ ಬದಲಾಯಿಸುತ್ತಿದೆ,'' ಎಂದು ಹಸನ್ ರಾಝಾ ಹೇಳಿದ್ದಾರೆ.

IND vs SA, ICC ODI World Cup: ಭಾರತ ತನಗೆ ಬೇಕಾದಂತೆ DRS ಅನ್ನು ತಿರುಚುತ್ತಿದೆ: ಪಾಕ್ ಆಟಗಾರನಿಂದ ವಿವಾದಾತ್ಮಕ ಹೇಳಿಕೆ
Hasan Raza controversial DRS statement
Follow us on

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಾಝಾ (Hasan Raza) ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, 2023 ರ ವಿಶ್ವಕಪ್ ಆವೃತ್ತಿಯಲ್ಲಿ ಭಾರತವು ಡಿಆರ್‌ಎಸ್ ಅನ್ನು ತನಗೆ ಬೇಕಾದಂತೆ ಬಳಸುತ್ತಿದೆ ಎಂದು ಹೇಳಿದ್ದಾರೆ. ಭಾನುವಾರ, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 243 ರನ್‌ಗಳಿಂದ ಸೋಲಿಸಿದ ನಂತರ ಹಸನ್ ರಾಝಾ ಈರೀತಿಯ ಹೇಳಿಕೆ ನೀಡಿದ್ದಾರೆ.

ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಹೀರೋ ಆದರು. ಹರಿಣಗಳ ಹುಟ್ಟಡಗಿಸಿದ ಜಡ್ಡು ಐದು ವಿಕೆಟ್ ಕಿತ್ತರೆ, ಶಮಿ ಎರಡು ಮುಖ್ಯ ವಿಕೆಟ್ ಪಡೆದು ಮಿಂಚಿದರು. ಮುಖ್ಯವಾಗಿ ಶಮಿ ಅವರು ಇನ್ ಫಾರ್ಮ್ ಬ್ಯಾಟರ್ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರನ್ನು ಔಟ್ ಮಾಡಿದಾಗ ನಡೆದ ಡಿಆರ್‌ಎಸ್ ಡ್ರಾಮ ಅನುಮಾನಾಸ್ಪದವಾಗಿದೆ ಎಂದು ರಾಝಾ ಹೇಳಿದ್ದಾರೆ.

ಇದನ್ನೂ ಓದಿ
ಮೊಬೈಲ್​ನಲ್ಲಿ ಕೊಹ್ಲಿ ಶತಕವನ್ನು ಕಣ್ತುಂಬಿದ್ದು 4 ಕೋಟಿ 40 ಲಕ್ಷ ಮಂದಿ
ಮೆಡಲ್ ಸಿಕ್ಕಿದ್ದು ರೋಹಿತ್​ಗೆ: ಎದ್ದು-ಬಿದ್ದು ಸಂಭ್ರಮಿಸಿದ್ದು ಗಿಲ್-ಕಿಶನ್
ಈಡನ್ ಗಾರ್ಡನ್ ಪಿಚ್​ಗೆ ಮನಸೋತ ಕೊಹ್ಲಿ: ಗ್ರೌಂಡ್ಸ್ ಮೆನ್​ಗಳ ಜೊತೆ ಫೋಟೋ
ಕೊಹ್ಲಿ ಸ್ವಾರ್ಥಿ ಎಂದವರಿಗೆ ಪಂದ್ಯದ ಬಳಿಕ ರೋಹಿತ್ ಕೊಟ್ಟ ಉತ್ತರವೇನು ನೋಡಿ

‘ನನಗೆ 365 ದಿನಗಳು ಬೇಕಾಯ್ತು’; ಕೊಹ್ಲಿಯ ಶತಕವನ್ನು ಸಚಿನ್ ತೆಂಡೂಲ್ಕರ್ ಅಭಿನಂದಿಸಿದ್ದು ಹೀಗೆ

ಶಮಿ ಬೌಲಿಂಗ್​ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಎಲ್​ಬಿ ಬಲೆಗೆ ಬಿದ್ದರು. ಆದರೆ, ಆನ್-ಫೀಲ್ಡ್ ಅಂಪೈರ್ ಭಾರತದ ಮನವಿಯನ್ನು ತಿರಸ್ಕರಿಸಿದರು. ನಂತರ ಭಾರತವು ರಿವ್ಯೂ ತೆಗೆದುಕೊಂಡಿತು. ರಿವ್ಯೂನಲ್ಲಿ ಚೆಂಡು ಪಿಚ್ ಮಧ್ಯ ಮತ್ತು ಲೆಗ್-ಸ್ಟಂಪ್‌ನ ಮೇಲ್ಭಾಗಕ್ಕೆ ಬಡಿದಿರುವುದು ತೋರಿಸಿದೆ. ಹೀಗಾಗಿ ಥರ್ಡ್ ಅಂಪೈರ್ ಔಟ್ ಕೊಟ್ಟರು. 32 ಎಸೆತಗಳಲ್ಲಿ 13 ರನ್ ಗಳಿಸಿದ್ದ ಡಸ್ಸೆನ್ ಪೆವಿಲಿನ್​ಗೆ ಮರಳಿದರು.

“ನಾನು ಡಿಆರ್‌ಎಸ್ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಿದ್ದೆನೆ. ವ್ಯಾನ್ ಡೆರ್ ಡಸ್ಸೆನ್ ಅವರ ಕಾಲಿಗೆ ಬಡಿದ ಚೆಂಡು ಲೆಗ್ ಸ್ಟಂಪ್ ಮೇಲೆ ಬಂದು ನಂತರ ಮಿಡಲ್ ಸ್ಟಂಪ್‌ಗೆ ಬಡಿಯುತ್ತಿತ್ತು. ಅದು ಹೇಗೆ ಸಾಧ್ಯ?. ಚೆಂಡು ಲೆಗ್ ಸ್ಟಂಪ್ ಕಡೆಗೆ ಹೋಗಬೇಕು. ಎಲ್ಲರಂತೆ ನಾನು ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದೇನೆ. ಇಂತಹ ವಿಷಯಗಳನ್ನು ಪರಿಶೀಲಿಸಬೇಕು. ಡಿಆರ್‌ಎಸ್ ಅನ್ನು ಭಾರತ ತನಗೆ ಬೇಕಾದಂತೆ ಬದಲಾಯಿಸುತ್ತಿದೆ. ಇದು ಸ್ಪಷ್ಟವಾಗಿ ಗೋಚರಿಸುತ್ತದೆ, ”ಎಂದು ರಾಝಾ ಹೇಳಿದ್ದಾರೆ.

ಡಿಆರ್​ಎಸ್ ಬಗ್ಗೆ ಹಸನ್ ರಾಝಾ ನೀಡಿರುವ ಹೇಳಿಕೆ:

 

ಟೀಮ್ ಇಂಡಿಯಾಗೆ ಬೇರೆ ಬಾಲ್ ನೀಡಲಾಗುತ್ತಿದೆ:

ಸಿರಾಜ್ ಮತ್ತು ಶಮಿ ಬಳಸುತ್ತಿರುವ ಚೆಂಡುಗಳ ಬಗ್ಗೆ ಐಸಿಸಿ ತನಿಖೆ ನಡೆಸಬೇಕು ಎಂದು ಇತ್ತೀಚೆಗಷ್ಟೆ ಹಸನ್ ರಾಝಾ ಪಾಕಿಸ್ತಾನದ ಸುದ್ದಿವಾಹಿನಿಯೊಂದರಲ್ಲಿ ಮಾತನಾಡುವಾಗ ಹೇಳಿದ್ದರು. ಈ ಇಬ್ಬರು ಬೌಲರ್‌ಗಳು ಅಲನ್ ಡೊನಾಲ್ಡ್ ಮತ್ತು ಎನ್‌ಟಿನಿಯಂತೆ ಅಪಾಯಕಾರಿಯಾಗಿದ್ದಾರೆ. ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡುವಾಗ ಆ ಪಿಚ್, ಬ್ಯಾಟಿಂಗ್ ಪಿಚ್ ಅನಿಸುತ್ತದೆ. ಆದರೆ ಶಮಿ ಹಾಗೂ ಸಿರಾಜ್ ಬೌಲಿಂಗ್​ಗೆ ಇಳಿದಾಗ ಆ ಪಿಚ್, ಬೌಲಿಂಗ್ ಪಿಚ್ ಆಗುತ್ತದೆ. ಹೀಗಾಗಿ ಟೀಮ್ ಇಂಡಿಯಾ ಬೇರೆಯದ್ದೆ ಚೆಂಡನ್ನು ಉಪಯೋಗಿಸುತ್ತಿದೆ ಎಂದು ರಾಝಾ ಆರೋಪ ಮಾಡಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ