IND vs SA, ICC World Cup: ಮೆಡಲ್ ಸಿಕ್ಕಿದ್ದು ರೋಹಿತ್ಗೆ: ಎದ್ದು-ಬಿದ್ದು ಸಂಭ್ರಮಿಸಿದ್ದು ಗಿಲ್-ಕಿಶನ್: ವಿಡಿಯೋ ನೋಡಿ
Rohit Sharma won the best fielder medal : ಭಾನುವಾರ ಆಫ್ರಿಕಾ ವಿರುದ್ಧದ ಪಂದ್ಯ ಮುಗಿದ ಬಳಿಕ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿ ರೋಹಿತ್ ಶರ್ಮಾ ಅವರಿಗೆ ಒಲಿದಿದೆ. ರೋಹಿತ್ಗೆ ಪದಕದ ಘೋಷಣೆ ಆದ ತಕ್ಷಣ ಎಲ್ಲ ಆಟಗಾರರು ಅವರನ್ನು ತಬ್ಬಿಕೊಂಡರು. ಅದರಲ್ಲೂ ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ಏನು ಮಾಡಿದರು ನೋಡಿ.
ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ (India vs South Africa) 243 ರನ್ಗಳ ಅಮೋಘ ಜಯ ಸಾಧಿಸಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದೆ. ಪ್ರತಿ ಬಾರಿ ಪಂದ್ಯ ಮುಗಿದ ಬಳಿಕ ಭಾರತೀಯ ಡ್ರೆಸ್ಸಿಂಗ್ ರೂಮ್ನಲ್ಲಿ ಅತ್ಯುತ್ತಮ ಫೀಲ್ಡರ್ ಎಂಬ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದು ಈ ಬಾರಿಯ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆಯೋಜಿಸಿರುವ ಹೊಸ ಪದ್ಧತಿ. ಅದರಂತೆ ಭಾನುವಾರ ಆಫ್ರಿಕಾ ವಿರುದ್ಧದ ಪಂದ್ಯ ಮುಗಿದ ಬಳಿಕ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿ ರೋಹಿತ್ ಶರ್ಮಾ ಅವರಿಗೆ ಒಲಿದಿದೆ. ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಈ ವಿಭಾಗದಲ್ಲಿ ಈಗಾಗಲೇ ಪ್ರಶಸ್ತಿ ಗೆದ್ದಿದ್ದಾರೆ. ಇದೀಗ ಭಾರತೀಯ ನಾಯಕ ರೋಹಿತ್ ಶರ್ಮಾ ಅವರಿಗೆ ಪದಕ ಒಲಿದಿದೆ. ರೋಹಿತ್ಗೆ ಪದಕದ ಘೋಷಣೆ ಆದ ತಕ್ಷಣ ಎಲ್ಲ ಆಟಗಾರರು ಅವರನ್ನು ತಬ್ಬಿಕೊಂಡರು. ಅದರಲ್ಲೂ ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ರೋಹಿತ್ ಅವರ ಮೇಲೆ ಬಿದ್ದು ವಿಶೇಷವಾಗಿ ಸಂಭ್ರಮಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ